![](https://nammurexpress.in/wp-content/uploads/2024/10/WhatsApp-Image-2024-10-18-at-10.56.55_a263bafa.jpg)
ತೀರ್ಥಹಳ್ಳಿ ಹೊಸ ಸೇತುವೆ, ಬೈಪಾಸ್ ರಸ್ತೆ!
– ಎಳ್ಳಮಾವಾಸ್ಯೆ ಜಾತ್ರೆಯಿಂದ ಸಂಚಾರ ಶುರು
– 55.62 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಸೇತುವೆ, ರಸ್ತೆ
– ಕೊಪ್ಪ -ಆಗುಂಬೆ ಹೋಗುವವರಿಗೆ ಸಿಹಿ ಸುದ್ದಿ
– ಹೀಗಿದೆ ನೋಡಿ ರಸ್ತೆ, ಸೇತುವೆ..!
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ನೂತನ ತುಂಗಾ ಸೇತುವೆ ಹಾಗೂ ರಸ್ತೆ ಸುಮಾರು 55.62 ಕೋಟಿ ರೂ. ಹಣದಲ್ಲಿ ನಿರ್ಮಾಣಗೊಂಡು ಈಗ ಜನರ ಸಂಚಾರಕ್ಕೆ ಮುಕ್ತವಾಗಿದೆ. ಎಳ್ಳಮಾವಾಸ್ಯೆ ಜಾತ್ರೆ ವೇಳೆ ಹೊಸ ಸೇತುವೆ ಹಾಗೂ ರಸ್ತೆ ಉದ್ಘಾಟನೆಗೊಂಡಿದೆ. ಶೀಘ್ರದಲ್ಲಿ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಈ ಕಾಮಗಾರಿಯನ್ನು ಉದ್ಘಾಟನೆ ಮಾಡಲಿದ್ದಾರೆ. ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ, ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಪ್ರಯತ್ನದಿಂದ ಈ ಹೊಸ ಯೋಜನೆ ಈಗ ಸಾರ್ವಜನಿಕರಿಗೆ ಮುಕ್ತವಾಗಿದೆ. ಈಗಾಗಲೇ ವಾಹನ ಓಡಾಟ ಶುರುವಾಗಿದೆ. ಹೊಸ ಸೇತುವೆ, ರಸ್ತೆ ಸೆಲ್ಫಿ, ಫೋಟೋಗಳು ವೈರಲ್ ಆಗುತ್ತಿವೆ.
ನ್ಯಾಷನಲ್ ಸಂಸ್ಥೆಯ ಮತ್ತೊಂದು ಸಾಧನೆ
ರಾಜ್ಯದ ಪ್ರತಿಷ್ಠಿತ ಕನ್ಸ್ಟ್ರಕ್ಷನ್ ಸಂಸ್ಥೆ ನ್ಯಾಷನಲ್ ಇನ್ಫ್ರಾಬಿಲ್ಡ್ ಪ್ರೈ ಲಿ. ಈ ಅತ್ಯುತ್ತಮ ಕಾಮಗಾರಿ ಮಾಡಿದೆ.
![](https://nammurexpress.in/wp-content/uploads/2024/07/WhatsApp-Image-2024-07-10-at-13.16.01_68e08fdf-1024x202.jpg)