ತುಳುನಾಡುಸಿರಿ ಸೌಹಾರ್ದದ ಸಭೆ: ಮಹಿಳಾ ಸಹಕಾರಿ ಉದ್ಘಾಟನೆ
– ಸಣ್ಣ ಹಂತದಿಂದ ದೊಡ್ಡ ಸಾಧನೆ ಮಾಡಿದ ಸೊಸೈಟಿ ಬಗ್ಗೆ ಮೆಚ್ಚುಗೆ
– ಅರೋಗ್ಯ ಮೇಳ, ಪ್ರತಿಭಾ ಪುರಸ್ಕಾರ.
NAMMUR EXPRESS NEWS
ತೀರ್ಥಹಳ್ಳಿ: ತುಳುನಾಡುಸಿರಿ ಸೌಹಾರ್ದ ಸಹಕಾರಿ ಸಂಘ ನಿಯಮಿತ ತೀರ್ಥಹಳ್ಳಿಯ ವಾರ್ಷಿಕ ಸಭೆ, ತುಳುನಾಡು ಮಹಿಳಾ ಸೊಸೈಟಿ ಉದ್ಘಾಟನೆ, ಉಚಿತ ಆರೋಗ್ಯ ಶಿಬಿರ ಸೆ.23ರಂದು ಸಹಕಾರಿ ಅಧ್ಯಕ್ಷರಾದ ರಾಘವೇಂದ್ರ ಶೆಟ್ಟಿ ನೇತೃತ್ವದಲ್ಲಿ ಅದ್ದೂರಿಯಾಗಿ ನಡೆಯಿತು
ಸಹಕಾರಿಯ 2024-25ನೇ ಸಾಲಿನ 9ನೇ ಸರ್ವ ಸದಸ್ಯರ ಸಾಮಾನ್ಯ ಸಭೆಗೆ ವಿಶೇಷ ಆಹ್ವಾನಿತರಾಗಿ ಸಹಕಾರ ನಾಯಕ ಡಾ.ಆರ್.ಎಂ.ಮಂಜುನಾಥ ಗೌಡ ಆಗಮಿಸಿ ಸಹಕಾರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರಾದ ಎಸ್.ಕೆ.ಮರಿಯಪ್ಪ, ನಿರ್ದೇಶಕರಾದ ಹೆಚ್.ಎನ್ ವಿಜಯದೇವ್, ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ನಿರ್ದೇಶಕರಾದ ಎಂ. ಶ್ರೀಕಾಂತ್, ಶ್ರೀ ಮಾರಿಕಾಂಬ ದೇವಸ್ಥಾನ (ರಿ) ತೀರ್ಥಹಳ್ಳಿಯ ಅಧ್ಯಕ್ಷರಾದ ನಾಗರಾಜ ಶೆಟ್ಟಿ ಸೇರಿ ಅನೇಕ ಗಣ್ಯರು ಭಾಗಿಯಾಗಿದ್ದರು.
ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ: ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗಿದ್ದು ನೂರಾರು ಮಂದಿ ಇದರ ಅನುಕೂಲ ಪಡೆದರು. ಉಚಿತವಾಗಿ ಮಾಡಿಸಿಕೊಡಲಾಯಿತು.
ಪ್ರತಿಭಾ ಪುರಸ್ಕಾರ, ತುಳುನಾಡಸಿರಿ ಪ್ರಶಸ್ತಿ: ಸಹಕಾರಿಯ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಶ್ರೀಕಾಂತ್ ಸೇರಿ ಅನೇಕಸಾಧಕರಿಗೆ
ತುಳುನಾಡಸಿರಿ ಪ್ರಶಸ್ತಿ ನೀಡಿ ಗೌರವ ನೀಡಲಾಯಿತು.
ಅಧ್ಯಕ್ಷ ರಾಘವೇಂದ್ರ ಶೆಟ್ಟಿ, ಉಪಾಧ್ಯಕ್ಷ ಗಣಪತಿ ವೈ, ನಿರ್ದೇಶಕರಾದ ಶಚ್ಚಿoದ್ರ ಹೆಗ್ಗಡೆ, ಸುರೇಶ್ ಶೆಟ್ಟಿ, ರಾಘವೇಂದ್ರಶೆಟ್ಟಿ, ಹರೀಶ್ ಟಿ ಎನ್, ಶಿಶಿರ್ ಶೆಟ್ಟಿ, ವಿಶಾಲ್ ಕುಮಾರ್, ಗಣೇಶ್ ಪ್ರಸಾದ್, ಸೈಯದ್ ಯಾಸೀನ್, ಸತೀಶ್ ಶೆಟ್ಟಿ, ಜಯರಾಮ ಶೆಟ್ಟಿ, ಪ್ರವೀಣ್ ಎ, ಪಲ್ಲವಿ ರಮೇಶ್, ಇಡ್ಲಿಟ್ ಡೆಲ್ಮ ಮಾರ್ಟೀಸ್, ಸಿಇಓ ಅಶ್ವಿನಿ ಈ, ಸಿಬ್ಬಂದಿ ರಾಘವೇಂದ್ರ ಭಟ್, ಆಪ್ತ, ನಿಶ್ಮಿತಾ, ರವಿ ಕಲಾ ಉಮೇಶ್ ಇತರರು ಇದ್ದರು.
ತುಳುನಾಡು ಮಹಿಳಾ ಪತ್ತಿನ ಸಹಕಾರಿ ಸಂಘ ಉದ್ಘಾಟನೆ
ತುಳುನಾಡು ಮಹಿಳಾ ಪತ್ತಿನ ಸಹಕಾರಿ ಸಂಘ ಉದ್ಘಾಟನೆಗೊಂಡಿತು. ಮುಖ್ಯ ಪ್ರವರ್ತಕರಾಗಿ ಪೂರ್ಣಿಮ ಶ್ರೀನಿವಾಸ, ಪ್ರವರ್ತಕರಾಗಿ ಗೀತಾ ರಮೇಶ್ , ಶಬನ್ನಮ್, ಮಂಜುಳಾ ನಾಗೇಂದ್ರ, ವಿಜಯ ಪದ್ಮನಾಭ್, ಉಷಾ ಪ್ರಶೋದ್ , ಗೀತಾ ರಾಘವೇಂದ್ರ , ಕುಸುಮ, ಜಯಶ್ರೀ ಅನುದೀಪ್, ಜ್ಯೋತಿ ಮಾರ್ಟಿಸ್ , ಸುಶ್ಮಿತಾ ರಂಜನ್, ಶಿವರಂಜಿನಿ ಶ್ರೀಕಾಂತ್, ಪೂರ್ಣಿಮಾ ಶೇಖರ್, ದಿವ್ಯಾ ಪ್ರವೀಣ್, ಸರೋಜಾ ಅವರ ತಂಡ ನೂತನವಾಗಿ ಕಾರ್ಡ್ ಸ್ವೀಕಾರ ಮಾಡಿಅಧಿಕಾರ ಪಡೆದರು.








