- ಹುಡುಗಿಯರ ಬದುಕಿನಲ್ಲಿ ಚೆಲ್ಲಾಟ: ಮೊಬೈಲ್ ವಿಡಿಯೋ ಚಿತ್ರೀಕರಣ ಮಾಡಿ ಬ್ಲಾಕ್ ಮೇಲ್?
- ಹಿಂದೂ ಸಂಘಟನೆ ಹೆಸರಲ್ಲಿ ಅನೈತಿಕತೆ?!
ತೀರ್ಥಹಳ್ಳಿ: ಹಿಂದೂ ಸಂಘಟನೆ ಹೆಸರು ಬಳಸಿಕೊಂಡು ತಮ್ಮ ಶೋಕಿ ಜೀವನ ಮಾಡಿ ಅನೇಕ ಯುವತಿಯರ ಜತೆ ಅಸಭ್ಯ ಕಾಮದಾಟ ನಡೆಸಿದ ವಿಡಿಯೋ ಇದೀಗ ವೈರಲ್ ಆಗಿದ್ದು ಇಡೀ ಸಮಾಜ ತಲೆ ತಗ್ಗಿಸುವಂತ ಪ್ರಕರಣ ತೀರ್ಥಹಳ್ಳಿಯಲ್ಲಿ ನಡೆದಿದೆ.
ಪ್ರತಿಷ್ಠಿತ ಕಾಲೇಜು ಹುಡುಗನ ಕಾಮದಾಟದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಬಯಲಾಗಿದ್ದು, ಈತ ತೀರ್ಥಹಳ್ಳಿಯ ವಿದ್ಯಾರ್ಥಿ ಹಿಂದೂ ಸಂಘಟನೆಯ ಅಧ್ಯಕ್ಷ ಆಗಿದ್ದು ರಾಜಕೀಯವಾಗಿ ಕೂಡ ಗುರುತಿಸಿಕೊಂಡಿದ್ದ. ಅಲ್ಲದೆ ಕಾಲೇಜಿನಲ್ಲಿ ಹಿಂದೂ ಸಂಘಟನೆ ಕಟ್ಟಿ ರಾಜಕೀಯ ಮಾಡುವ ಜತೆಗೆ ಬಡ ಯುವತಿಯರ ಪಾಲಿಗೆ ಕೀಚಕನಾಗಿದ್ದಾನೆ.
ಹಿಂದೂ ಸಂಘಟನೆಯಲ್ಲಿ ಇದ್ದುಕೊಂಡು ಸಂಘಟನೆಯ ಹುಡುಗಿಯರನ್ನೇ ದುರ್ಬಳಕೆ ಮಾಡಿಕೊಂಡಿರುವುದು ಈ ಪ್ರಕರಣದಲ್ಲಿ ವಿವಾದಕ್ಕೆ ಗುರಿಯಾಗಿದೆ. ಅಲ್ಲದೆ ಆತ ಮತ್ತು ಯುವತಿಯರ ಜತೆಗಿನ ವಿಡಿಯೋ ವೈರಲ್ ಆಗಿದೆ. ಯುವತಿಯರು ಕೂಡ ಆ ಮಟ್ಟಕ್ಕೆ ಇಳಿದಿದ್ದು ಇದೀಗ ಚರ್ಚೆಗೆ ಗ್ರಾಸವಾಗಿದೆ.
ತೀರ್ಥಹಳ್ಳಿ ಪ್ರತಿಷ್ಠಿತ ಸರ್ಕಾರಿ ಕಾಲೇಜಿನ ವಿದ್ಯಾರ್ಥಿ 2-3 ಹುಡುಗಿಯರ ಜತೆ ಆಟೋ, ಮನೆ, ಕಾರಲ್ಲಿ ಕಾಮದಾಟ ನಡೆಸಿದ ವಿಡಿಯೋ ಇದೀಗ ವೈರಲ್ ಆಗಿದ್ದು ಆತನ ವಿರುದ್ಧ ಭಾರೀ ಆಕ್ರೋಶ ಕೇಳಿ ಬಂದಿದೆ. ಈತ ಸಂಘಟನೆಯ ಹೆಸರಲ್ಲಿ ಕಾಲೇಜು ವಿದ್ಯಾರ್ಥಿನಿಯರೊಂದಿಗೆ ತೀರಾ ಸಲಿಗೆ ಬಳಸಿಕೊಳ್ಳುತ್ತಿದ್ದ ಎನ್ನಲಾಗುತ್ತಿದೆ. ಈತ ತನ್ನ ನೀಚ ಕೃತ್ಯವನ್ನು ಚಿತ್ರಿಸಿಕೊಂಡಿರುವುದು. ದುರ್ಬಳಕೆ ಮಾಡಿಕೊಂಡ ಯುವತಿಯರ ಮುಂದಿನ ಭವಿಷ್ಯದ ಕಥೆ ಏನು ಎಂಬ ಬಗ್ಗೆ ಪ್ರಶ್ನೆ ಹುಟ್ಟುವಂತೆ ಮಾಡಿದೆ. ಹಿಂದೂ ಸಂಘಟನೆಯ ಹೆಸರಲ್ಲಿ ವಿದ್ಯಾರ್ಥಿನಿಯರನ್ನು ಪರಿಚಯ ಮಾಡಿಕೊಳ್ಳುವ ಆತ ಹುಡುಗಿಯರ ಖಾಸಗಿ ವೀಡಿಯೋ, ಫೋಟೊಗಳನ್ನು ಬಳಸಿಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದ ಎನ್ನಲಾಗಿದೆ.
ಪೋಷಕರು, ಪೊಲೀಸರೇ ಎಚ್ಚರ!
ಪೋಷಕರು ಇಂತಹ ಆಘಾತಕಾರಿ ಘಟನೆಯ ಬಗ್ಗೆ ಗಮನ ಹರಿಸಬೇಕಿದೆ. ತಮ್ಮ ಮಕ್ಕಳು ಪಟ್ಟಣಕ್ಕೆ ಕಾಲೇಜಿಗೆಂದು ಆಗಮಿಸುತ್ತಿದ್ದು ಬಂದ ಮೇಲೆ ಏನು ಮಾಡುತ್ತಾರೆ ಎಂಬ ಬಗ್ಗೆಯೂ ಚಿಂತಿಸುವಂತಾಗಿದೆ. ಇಂತಹವರ ಬಗ್ಗೆ ಪೊಲೀಸ್ ಇಲಾಖೆ, ಕಾಲೇಜು ಆಡಳಿತ ,ಪೋಷಕರು, ತೀವ್ರ ನಿಗಾ ವಹಿಸದಿದ್ದರೆ ಇನ್ನಷ್ಟು ಕೆಟ್ಟ ಘಟನೆಗಳು ಜರುಗುವ ಸಾಧ್ಯತೆ ಇದೆ.