ಮಾದರಿ ಸೇವಾ ಹೆಜ್ಜೆ ಜತೆ ತುಳುನಾಡುಸಿರಿ ಸೌಹಾರ್ದದ ಸಭೆ
– ಸೆ. 23ರಂದು ಗಾಯತ್ರಿ ಮಂದಿರದಲ್ಲಿ ಸಹಕಾರಿಯ ಸರ್ವ ಸದಸ್ಯರ ಸಭೆ
– ತುಳುನಾಡು ಮಹಿಳಾ ಪತ್ತಿನ ಸಹಕಾರಿ ಸಂಘ ಉದ್ಘಾಟನೆ.
NAMMUR EXPRESS NEWS
ತೀರ್ಥಹಳ್ಳಿ: ತುಳುನಾಡುಸಿರಿ ಸೌಹಾರ್ದ ಸಹಕಾರಿ ಸಂಘ ನಿಯಮಿತ ತೀರ್ಥಹಳ್ಳಿಯ ವಾರ್ಷಿಕ ಸಭೆ, ತುಳುನಾಡು ಮಹಿಳಾ ಸೊಸೈಟಿ ಉದ್ಘಾಟನೆ, ಉಚಿತ ಆರೋಗ್ಯ ಶಿಬಿರ ಸೆ.23ರ ಬೆಳಗ್ಗೆ 9-00 ಗಂಟೆಗೆ ತೀರ್ಥಹಳ್ಳಿ ಕುವೆಂಪು ರಸ್ತೆಯ ಗಾಯತ್ರಿ ಮಂದಿರದಲ್ಲಿ ನಡೆಯಲಿದೆ.
ಸಹಕಾರಿಯ 2024-25ನೇ ಸಾಲಿನ 9ನೇ ಸರ್ವ ಸದಸ್ಯರ ಸಾಮಾನ್ಯ ಸಭೆ ಸಹಕಾರಿ ಅಧ್ಯಕ್ಷರಾದ ಬಿ.ಆರ್.ರಾಘವೇಂದ್ರ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ನಡೆಸಲಾಗುವುದು. ವಿಶೇಷ ಆಹ್ವಾನಿತರಾಗಿ ಸಹಕಾರ ನಾಯಕ ಡಾ.ಆರ್.ಎಂ.ಮಂಜುನಾಥ ಗೌಡ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರಾದ ಎಸ್.ಕೆ.ಮರಿಯಪ್ಪ, ನಿರ್ದೇಶಕರಾದ ಹೆಚ್.ಎನ್ ವಿಜಯದೇವ್, ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ನಿರ್ದೇಶಕರಾದ ಎಂ. ಶ್ರೀಕಾಂತ್, ಶ್ರೀ ಮಾರಿಕಾಂಬ ದೇವಸ್ಥಾನ (ರಿ) ತೀರ್ಥಹಳ್ಳಿಯ ಅಧ್ಯಕ್ಷರಾದ ನಾಗರಾಜ ಶೆಟ್ಟಿ, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಉಪಾಧ್ಯಕ್ಷರಾದ ಎ. ಆರ್. ಪ್ರಸನ್ನ ಕುಮಾರ್ ಸೇರಿ ಅನೇಕ ಗಣ್ಯರು ಭಾಗಿಯಾಗಲಿದ್ದಾರೆ.
ಎಲ್ಲಾ ಸದಸ್ಯರು ಈ ಸಭೆಗೆ ಸಕಾಲದಲ್ಲಿ ಆಗಮಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಅಮೂಲ್ಯ ಸಲಹೆ ಸಹಕಾರಗಳನ್ನಿತ್ತು ಸಹಕರಿಸಲು ಈ ಮೂಲಕ ಕೋರಲಾಗಿದೆ.
ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ
ಸೆ.23ರ ಮಂಗಳವಾರ ಬೆಳಿಗ್ಗೆ 9.00 ಗಂಟೆಯಿಂದ 2.00ವರೆಗೆ ಗಾಯತ್ರಿ ಮಂದಿರ, ಕುವೆಂಪು ರಸ್ತೆ, ತೀರ್ಥಹಳ್ಳಿಯಲ್ಲಿ ಸಹಕಾರ ವತಿಯಿಂದ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗಿದೆ. ನುರಿತ ಅನುಭವಿ ವೈದ್ಯರ ತಂಡದಿಂದ ಮಧುಮೇಹ ವಿಭಾಗ * ಶ್ವಾಸಕೋಶ ವಿಭಾಗ * ಹೃದಯ ರೋಗ ವಿಭಾಗ * ಮೂತ್ರಕೋಶ (ಕಿಡ್ನಿ) * ಕೀಲು ಮತ್ತು ಮೂಳೆ ವಿಭಾಗ* ಕಿವಿ,ಮೂಗು, ಗಂಟಲು ವಿಭಾಗ * ಕಣ್ಣಿನ ವಿಭಾಗ * ಚರ್ಮರೋಗ ವಿಭಾಗ * ನರರೋಗ ವಿಭಾಗ * ದಂತ ಚಿಕಿತ್ಸಾ ವಿಭಾಗ * ಪ್ರಸೂತಿ, ಸ್ತ್ರೀರೋಗ ವಿಭಾಗ* ಮಕ್ಕಳ ವಿಭಾಗ ಈ ಉಚಿತ ಆರೋಗ್ಯ ಶಿಬಿರದಲ್ಲಿ ಭಾಗವಹಿಸುವ ರೋಗಿಗಳಿಗೆ ವೈದ್ಯರ ಸಲಹೆ ಮೇರೆಗೆ ಇ.ಸಿ.ಜಿ, ಶ್ವಾಸಕೋಶ ಸ್ಕಾನಿಂಗ್ (ಉಸಿರಾಟ) ಹೃದಯ ಪರೀಕ್ಷೆ (ಇಕೋ),ಬಿ.ಪಿ, ಶುಗರ್, ಮೂಳೆ ಸಾಂದ್ರತೆ ಪರೀಕ್ಷೆಗಳನ್ನು ಉಚಿತವಾಗಿ ನಡೆಸಲಾಗುವುದು. ತುಳುನಾಡುಸಿರಿ ಸೌಹಾರ್ದ ಸಹಕಾರಿ ಸಂಘದಿಂದ ಆಯೋಜಿಸಲಾಗಿದೆ. ನಮ್ಮ ಸಹಕಾರಿಯ ಸದಸ್ಯರುಗಳು ಹಾಗೂ ಸಾರ್ವಜನಿಕರು ಈ ಉಚಿತ ಅರೋಗ್ಯ ಶಿಬಿರದ ಲಾಭವನ್ನು ಪಡೆದುಕೊಳ್ಳಬೇಕೆಂದು ವಿನಂತಿಸುತ್ತೇವೆ. ಹೃದಯ ತಪಾಸಣಾ ವಿಭಾಗಕ್ಕೆ ಮಾತ್ರ ಪೋನ್ ಮುಖಾಂತರ ಹೆಸರು
ನೊಂದಾಯಿಸಿಕೊಳ್ಳುತ್ತೇವೆ.
ರಕ್ತದಾನ ಮಾಡಿದವರಿಗೆ ಹೆಲ್ತ್ ಕಾರ್ಡ್ ಉಚಿತ!
“ರಕ್ತದಾನ ಮಹಾದಾನ” ವಿಶೇಷ ಸೂಚನೆ: ರಕ್ತದಾನ ಮಾಡುವ ದಾನಿಗಳು ಮುಂಚಿತವಾಗಿ ಹೆಸರನ್ನು ನೋಂದಾಯಿಸಿಕೊಂಡು ರಕ್ತದಾನ ಮಾಡಿದರೆ ಸುಬ್ಬಯ್ಯ ಹೆಲ್ತ್ ಕಾರ್ಡ್ (subbaiah health card),ನ್ನು ಉಚಿತವಾಗಿ ಮಾಡಿಸಿಕೊಡಲಾಗುವುದು.
ಹೆಚ್ಚಿನ ಮಾಹಿತಿಗೆ ಮತ್ತು ನೋಂದಾಣಿಗಾಗಿ ಸಂಪರ್ಕಿಸಿರಿ: 9480282858, 9113231844, 9741626317, 9480498140
ಸರ್ವರೂ ಕೂಡ ಈ ಬೃಹತ್ ಉಚಿತ ಆರೋಗ್ಯ ತಪಾಸಣೆ ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕು ಸರ್ವರಿಗೂ ಆದರದ ಸ್ವಾಗತವನ್ನು ಆಡಳಿತ ಮಂಡಳಿ ಕೋರಿದೆ. ಸಭೆ ಬಳಿಕ ಮಾಧವ ಮಂಗಲ ಸಭಾ ಭವನದಲ್ಲಿ ಭೋಜನ ವ್ಯವಸ್ಥೆ ಇರುತ್ತದೆ.
ತುಳುನಾಡು ಮಹಿಳಾ ಪತ್ತಿನ ಸಹಕಾರಿ ಸಂಘ ಉದ್ಘಾಟನೆ
ಮುಖ್ಯ ಪ್ರವರ್ತಕರಾಗಿ ಪೂರ್ಣಿಮ ಶ್ರೀನಿವಾಸ, ಪ್ರವರ್ತಕರಾಗಿ ಗೀತಾ ರಮೇಶ್ , ಶಬನ್ನಮ್, ಮಂಜುಳಾ ನಾಗೇಂದ್ರ, ವಿಜಯ ಪದ್ಮನಾಭ್, ಉಷಾ ಪ್ರಶೋದ್ , ಗೀತಾ ರಾಘವೇಂದ್ರ , ಕುಸುಮ, ಜಯಶ್ರೀ ಅನುದೀಪ್, ಜ್ಯೋತಿ ಮಾರ್ಟಿಸ್ , ಸುಶ್ಮಿತಾ ರಂಜನ್, ಶಿವರಂಜಿನಿ ಶ್ರೀಕಾಂತ್, ಪೂರ್ಣಿಮಾ ಶೇಖರ್, ದಿವ್ಯಾ ಪ್ರವೀಣ್, ಸರೋಜಾ ಅವರ ತಂಡ ನೂತನವಾಗಿ ಸೊಸೈಟಿ ರಚನೆ ಮಾಡಿದೆ.
ತುಳುನಾಡುಸಿರಿ ಸೌಹಾರ್ದ ಸಹಕಾರಿ ಸಂಘದ ಆಹ್ವಾನ
ಅಧ್ಯಕ್ಷ ರಾಘವೇಂದ್ರ ಶೆಟ್ಟಿ, ಉಪಾಧ್ಯಕ್ಷ ಗಣಪತಿ ವೈ, ನಿರ್ದೇಶಕರಾದ ಶಚ್ಚಿoದ್ರ ಹೆಗ್ಗಡೆ, ಸುರೇಶ್ ಶೆಟ್ಟಿ, ಹರೀಶ್ ಟಿ ಎನ್, ಶಿಶಿರ್ ಶೆಟ್ಟಿ, ವಿಶಾಲ್ ಕುಮಾರ್, ಗಣೇಶ್ ಪ್ರಸಾದ್, ಸೈಯದ್ ಯಾಸೀನ್, ಸತೀಶ್ ಶೆಟ್ಟಿ, ಜಯರಾಮ ಶೆಟ್ಟಿ, ಪ್ರವೀಣ್ ಎ, ಪಲ್ಲವಿ ರಮೇಶ್, ಇಡ್ಲಿಟ್ ಡೆಲ್ಮ ಮಾರ್ಟೀಸ್, ಸಿಇಓ ಅಶ್ವಿನಿ ಈ, ಸಿಬ್ಬಂದಿ ರಾಘವೇಂದ್ರ ಭಟ್, ಆಪ್ತ, ನಿಶ್ಮಿತಾ, ರವಿ ಕಲಾ ಉಮೇಶ್ ಇತರರು ಸರ್ವರನ್ನು ಸ್ವಾಗತಿಸಿದ್ದಾರೆ.








