ರಾಮೇಶ್ವರನಿಗೆ ಉಘೇ ಉಘೇ..!
– ತೀರ್ಥಹಳ್ಳಿ ರಾಮೇಶ್ವರ ದೇಗುಲದಲ್ಲಿ ಮಹಾರುದ್ರ ಪುರಸ್ಕರಣಾ ಹೋಮ
– ಮಳೆ ಕೊರತೆ ನೀಗಿಸಲು ಹೋಮ
NAMMUR EXPRESS NEWS
ತೀರ್ಥಹಳ್ಳಿ: ಶ್ರೀರಾಮೇಶ್ವರನ ಸಾನಿಧ್ಯದಲ್ಲಿ ಮಹಾರುದ್ರ ಪುರಸ್ಕರಣಾ ಹೋಮ ಸೋಮವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ನಡೆಯಿತು. ಪುರಾಣ ಪ್ರಸಿದ್ಧ ಶ್ರೀ ರಾಮೇಶ್ವರ ದೇವಸ್ಥಾನದಲ್ಲಿ ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾ ಪೀಠಾಧೀಶ್ವರಾದ ಉಭಯ ಜಗದ್ಗುರುಗಳ ಪೂರ್ಣಾನುಗ್ರಹದಿಂದ ಲೋಕಕಲ್ಯಾಣಕ್ಕಾಗಿ ಮಹಾರುದ್ರ ಪುರಸ್ಕರಣ ಹೋಮ ಮಾಡಲಾಯಿತು. ದಿನಾಂಕ 10-09-2023 ನೇ ಭಾನುವಾರ ದೇವತಾ ಪ್ರಾರ್ಥನೆ ಮೂಲಕ ಆರಂಭಿಸಿ ತುಂಗಾ ನದಿಯಿಂದ “ಆಕ್ರೋದಕ ಅನಯನ”ವನ್ನು ತಂದು ಗಣಹೋಮ, “ಮಹಾರುದ್ರ ಪಠಣೆ ಹಾಗೂ ದಿನಾಂಕ 11-09-2023 ನೇ ಸೋಮವಾರ “ಪುಣ್ಯಾಹ” “ಮಹಾರುದ್ರ ಪುರಶ್ಚರಣೆ ಹೋಮ” ನಂತರ ಪೂರ್ಣಾಹುತಿ, ನಂತರ ಸಾರ್ವಜನಿಕ “ಅನ್ನಸಂತರ್ಪಣೆ” ನಡೆಯಿತು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರಾದ ಆರ್ ಎಂ ಮಂಜುನಾಥ್ ಗೌಡರು ಹಾಗೂ ಡಿವೈಎಸ್ ಪಿ ಗಜಾನನ ವಾಮನ ಸುತಾರ ಸೇರಿದಂತೆ ಸಾವಿರಾರು ಭಕ್ತರು ಭಾಗಿಯಾಗಿ ದೇವರ ಪ್ರಸಾದ ಸ್ವೀಕರಿಸಿದರು. ಸೊಪ್ಪುಗುಡ್ಡೆ ರಾಘವೇಂದ್ರರವರ ನೇತೃತ್ವದ ಸಮಿತಿ ಸದಸ್ಯರು ಅಚ್ಚುಕಟ್ಟಾಗಿ ಧಾರ್ಮಿಕ ಕಾರ್ಯಕ್ರಮದ ವ್ಯವಸ್ಥೆ ಮಾಡಿದ್ದರು. ಇತ್ತೀಚಿಗೆ ದೆಹಲಿಯ ನೂತನ ಸಂಸತ್ ಭವನ ನಿರ್ಮಾಣದ ಪೂಜೆಯಲ್ಲಿ ಭಾಗಿಯಾಗಿದ್ದ ತೀರ್ಥಹಳ್ಳಿಯ ಕಲ್ಲಾರೆ ಗಣಪತಿ ದೇವಸ್ಥಾನದ ಪ್ರಧಾನ ಅರ್ಚಕರಾದ ವೇ.ಬ್ರ.ಶ್ರೀ. ಲಕ್ಷ್ಮೀಶ ತಂತ್ರಿಗಳಿಗೆ ರಾಮೇಶ್ವರ ದೇವಸ್ಥಾನದ ಸಮಿತಿ ಸದಸ್ಯರು ಸನ್ಮಾನ ಮಾಡಿ ಆಶೀರ್ವಾದ ಪಡೆದರು.
ಮಳೆ ಕೊರತೆ ನೀಗಿಸಲು ಹೋಮ!
ತೀರ್ಥಹಳ್ಳಿ ಪುರಾಣ ಪ್ರಸಿದ್ಧ ಶ್ರೀರಾಮೇಶ್ವರ ದೇವಸ್ಥಾನದಲ್ಲಿ ಕಡೆಯ ಶ್ರಾವಣ ಸೋಮವಾರದ ಅಂಗವಾಗಿ ಮಹಾರುದ್ರ ಪುರಶ್ಚರಣಾ ಹೋಮವನ್ನು ಹಮ್ಮಿಕೊಳ್ಳಲಾಗಿತ್ತು. ಭಾನುವಾರ ಮತ್ತು ಸೋಮವಾರ ಎರಡು ದಿನಗಳ ಕಾಲ ವಿಜ್ರಂಭಣೆಯಿಂದ ಜರುಗಿದ ದೇವತಾ ಕಾರ್ಯಗಳು ಹೋಮ ಹವನ ವಿಜೃಂಭಣೆಯಿಂದ ಸಂಪನ್ನಗೊಂಡಿತು. ನಾಡಿನಲ್ಲಿ ಮಳೆಯ ಕೊರತೆಯಾಗಿದ್ದು ಮಳೆಗಾಗಿ ವಿಶೇಷವಾಗಿ ಪ್ರಾರ್ಥನೆ ಸಲ್ಲಿಸಲಾಯಿತು. ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡ ಭಕ್ತ ಸಮೂಹ ಈ ದೇವತಾ ಕಾರ್ಯದಲ್ಲಿ ಪಾಲ್ಗೊಂಡು ತೀರ್ಥ ಪ್ರಸಾದ ಸ್ವೀಕರಿಸಿ ಪುನೀತರಾದರು