ತೀರ್ಥಹಳ್ಳಿಯಲ್ಲಿ ಸೆ.8ಕ್ಕೆ ವರ ಮಹಾಲಕ್ಷ್ಮಿ ಪೂಜೆ
– ಬಿಜೆಪಿ ಮಹಿಳಾ ಮೋರ್ಚಾದಿಂದ ವರಮಹಾಲಕ್ಷ್ಮಿ ಪೂಜೆ
– ಸುಮಾರು 3,500 ಮಹಿಳೆಯರು ಸೇರುವ ನಿರೀಕ್ಷೆ
NAMMUR EXPRESS NEWS
ತೀರ್ಥಹಳ್ಳಿ: ಕಳೆದ 10 ವರ್ಷಗಳಿಂದ ತಾಲೂಕು ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸುತ್ತಿದ್ದು ಈ ಬಾರಿ 11ನೇ ವರ್ಷದ ವರಮಹಾಲಕ್ಷ್ಮಿ ಹಬ್ಬವನ್ನು ಸೆ.8 ಶುಕ್ರವಾರದಂದು ಗೋಪಾಲಗೌಡ ರಂಗಮಂದಿರದಲ್ಲಿ ನಡೆಸಲಾಗುತ್ತದೆ. ಈ ಹಬ್ಬದಲ್ಲಿ ತಾಲೂಕಿನ ಸುಮಾರು 3500 ಮಹಿಳೆಯರು ಭಾಗಿಯಾಗಲಿದ್ದಾರೆ.
ಬಿಜೆಪಿ ಮಹಿಳಾ ಮುಖಂಡರಾದ ಸವಿತಾ ಉಮೇಶ್ ಬುಧವಾರ ಬಂಟರಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.
ತೀರ್ಥಹಳ್ಳಿ ತಾಲೂಕಿನ ಪ್ರತಿಯೊಬ್ಬ ಮಹಿಳೆಯರು ಕೂಡ ಈ ಕಾರ್ಯಕ್ರಮಕ್ಕೆ ಆಗಮಿಸಬೇಕು. ಶಾಸಕರಾದ ಆರಗ ಜ್ಞಾನೇಂದ್ರ ಹಾಗೂ ಸಂಸದ ಬಿ ವೈ ರಾಘವೇಂದ್ರ ಇರಲಿದ್ದಾರೆ. ಬಂದಂತಹ ಎಲ್ಲಾ ಮುತ್ತೈದೆಯಾರಿಗೂ ಬಾಗಿನ ವಿತರಣೆ ಮಾಡಲಾಗುತ್ತದೆ ಎಂದರು. ಬಾಳೆಬೈಲು ರಾಘವೇಂದ್ರ, ಕುಕ್ಕೆ ಪ್ರಶಾಂತ್, ನವೀನ್ ಹೆದ್ದೂರು,ರಕ್ಷಿತ್ ಮೇಗರವಳ್ಳಿ, ಗೀತಾ, ಜ್ಯೋತಿ ದೀಲಿಪ್, ಸಂಧ್ಯಾ, ಯಶೋದಾ, ಕೌಸಲ್ಯ, ಪದ್ಮ ನವೀನ್, ಸುಮಾ ರಾಮಚಂದ್ರ, ಕುಸುಮ ಮಂಜುನಾಥ್, ಡಾಕಮ್ಮ, ಸುಕನ್ಯಾ ಸೇರಿ ಹಲವರು ಉಪಸ್ಥಿತರಿದ್ದರು.