ವಾಗ್ದೇವಿ ಶಾಲೆಯ ವಿದ್ಯಾರ್ಥಿನಿ ವರ್ಷಿಣಿ.ಪಿ ಭಟ್ ಪ್ರಥಮ ಸ್ಥಾನ
– ಎಲ್ಐಸಿ 67ರ ವಿಮಾ ಸಪ್ತಾಹದ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ
– ಮಲೆನಾಡಿನ ಭರವಸೆಯ ಗಾಯಕಿಗೆ ಅಭಿನಂದನೆಗಳು
NAMMUR EXPRESS NEWS
ತೀರ್ಥಹಳ್ಳಿ : ಭಾರತೀಯ ಜೀವ ವಿಮಾ ನಿಗಮ 67ನೇ ವರ್ಷಕ್ಕೆ ಕಾಲಿಟ್ಟ ಸಂಭ್ರಮಾಚರಣೆಯಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜನೆ ಮಾಡಲಾಗಿತ್ತು. ಗುರುವಾರ ನಡೆದ ಸಂಗೀತ ಸ್ಪರ್ಧೆಯಲ್ಲಿ ವಾಗ್ದೇವಿ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿನಿ, ಯುವ ಗಾಯಕಿ ಕುಮಾರಿ ವರ್ಷಿಣಿ ಪಿ ಭಟ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದಿರುತ್ತಾರೆ. ಈಗಾಗಲೇ ಹತ್ತಾರು ಸ್ಪರ್ಧೆಗಳಲ್ಲಿ ವರ್ಷಿಣಿ ಗೆಲುವು ಸಾಧಿಸಿದ್ದಾರೆ.
ಇವರು ಕಟ್ಟೆಹಕ್ಕಲು ಸಮೀಪದ ಪಟ್ಲಮನೆ ಪ್ರಕಾಶ್ ಭಟ್ ಮತ್ತು ಲಲಿತ ಇವರ ಪುತ್ರಿಯಾಗಿದ್ದು, ಇವರಿಗೆ ಶಾಲೆಯ ಶಿಕ್ಷಕರು ಹಾಗೂ ಪೋಷಕರು ಶುಭ ಕೋರಿದ್ದಾರೆ. ವರ್ಷಿಣಿ ಪಿ ಭಟ್ ಅವರ ಮುಂದಿನ ಭವಿಷ್ಯ ಉಜ್ವಲವಾಗಿರಲಿ ಇನ್ನು ಅನೇಕ ಪ್ರಶಸ್ತಿಗಳು ದೊರೆಯಲಿ ಎಂದು ನಮ್ಮೂರ ಎಕ್ಸ್ಪ್ರೆಸ್ ಮಾಧ್ಯಮ ಆಶಿಸುತ್ತದೆ.