ಮತ್ತೆ ಮಹಾಬಲೇಶ್ವರ ಹೆಗಡೆ ತಂಡಕ್ಕೆ ಜಯಭೇರಿ!
– ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸೌಹಾರ್ದ.ನಿ. ನಿರ್ದೇಶಕರ ಚುನಾವಣೆ
– ಹಾಲಿ ಅಧ್ಯಕ್ಷ ಮಹಾಬಲೇಶ್ವರ ಹೆಗಡೆ ಸೇರಿದಂತೆ ಎಲ್ಲ 17 ಮಂದಿ ನಿರ್ದೇಶಕರ ಅವಿರೋಧ ಆಯ್ಕೆ
NAMMUR EXPRESS NEWS
ತೀರ್ಥಹಳ್ಳಿ: ರಾಜ್ಯದ ಪ್ರತಿಷ್ಠಿತ ಸಹಕಾರಿ ಸಂಸ್ಥೆಯಲ್ಲಿ ಒಂದಾದ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸೌಹಾರ್ದ ಸಹಕಾರಿ ನಿಯಮಿತ, ತೀರ್ಥಹಳ್ಳಿ ಇದರ ನಿರ್ದೇಶಕರ ಚುನಾವಣೆ ಇದೆ ಆ.13ರಂದು ನಿಗದಿಪಡಿಸಲಾಗಿದ್ದು,ಚುನಾವಣೆಯ ಮುನ್ನ ಎಲ್ಲಾ ಸದಸ್ಯರುಗಳು ಒಮ್ಮತದ ತೀರ್ಮಾನದಂತೆ ಸಹಕಾರಿಯ ಆಡಳಿತ ಮಂಡಳಿಯ ಚುನಾವಣಾ ನಿರ್ದೇಶಕರಾಗಿ ಐದು ವರ್ಷದ ಅವಧಿಗೆ ವಿಜಯಕುಮಾರ ಸ್ವಾಮಿ ( ಪರಿಶಿಷ್ಟ ಜಾತಿ ಮೀಸಲು), ಪಾಲಯ್ಯ (ಪರಿಶಿಷ್ಟ ಪಂಗಡ ಮೀಸಲು ) ಅಲ್ತಾಫ್ ಹುಸೇನ್, (ಹಿಂದುಳಿದ ವರ್ಗಗಳ ಎ ಪ್ರವರ್ಗ ಮೀಸಲು ) ಜಗದೀಶ ಕಾಗಿನಲ್ಲಿ, (ಹಿಂದುಳಿದ ವರ್ಗಗಳ ಪ್ರವರ್ಗ ಬಿ ಮೀಸಲು), ಲಲಿತಾ ಹೆಗ್ಗಡೆ,ಆಶಾ (ಮಹಿಳಾ ಮೀಸಲು ) ಬಾಲಚಂದ್ರ ಗಜಾನನ ಭಟ್,ಸತೀಶ ರಾಮಕೃಷ್ಣ ಹೆಗಡೆ,
ಆಂಜನೇಯ, ಕರಿ ಬಸವಯ್ಯ,ತಿಮ್ಮಪ್ಪ,ಪುಟ್ಟಪ್ಪ, ಆನಂದ್, ಜಗದೀಶ, ಮಹಾಬಲೇಶ್ವರ ಹೆಗಡೆ, ಶ್ರೀಕಾಂತ್,ಕರಿಯಪ್ಪ ಇವರುಗಳು ಸಾಮಾನ್ಯ ಮೀಸಲಾತಿಯಲ್ಲಿ ಆವಿರೋಧವಾಗಿ ಆಯ್ಕೆಯಾಗಿದ್ದಾರೆ.
ರಿಟರ್ನಿಂಗ್ ಆಫೀಸರ್ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸೌಹಾರ್ದ ಸಹಕಾರಿ ಸಂಘ, ತೀರ್ಥಹಳ್ಳಿ ಹಾಗೂ ಸಹಕಾರ ಸಂಘಗಳ ಸಹಾಯಕ ನಿಬಂಧಕರು, ಉಪ ವಿಭಾಗ ಶಿವಮೊಗ್ಗ ರವರ ಕಾರ್ಯಾಲಯ ಸೌಹಾರ್ದ ಸಹಕಾರಿ ಕಾಯ್ದೆ 2004ರ ಹಾಗೂ ನಿಯಮಗಳು 5ಎಲ್ ರಲ್ಲಿನ ಉಪಬಂಧಾನುಸಾರ ಚುನಾವಣೆ ಫಲಿತಾಂಶವನ್ನು ಘೋಷಣೆ ಮಾಡಿದೆ.
ಇದನ್ನೂ ಓದಿ : ಅಡಿಕೆ ಮಾರುಕಟ್ಟೆ: ಎಷ್ಟಿದೆ ದರ?
HOW TO APPLY : NEET-UG COUNSELLING 2023