ನನ್ನ ಸೇವೆ ನೋಡಿ ಮತ ಹಾಕಿ…
– ನೈರುತ್ಯ ಶಿಕ್ಷಕರ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಬೆಂಬಲಿಸಿ
– ಈ ಚುನಾವಣೆ ವ್ಯಕ್ತಿಯ ಆಧಾರಿತ ಚುನಾವಣೆ: ರಘುಪತಿ ಭಟ್
NAMMUR EXPRESS NEWS
ತೀರ್ಥಹಳ್ಳಿ: ಉಡುಪಿ ಮಾಜಿ ಶಾಸಕ ರಘುಪತಿ ಭಟ್ ಅವರು ಪದವೀಧರರ ಕ್ಷೇತ್ರದ ಚುನಾವಣೆಗೆ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. ತೀರ್ಥಹಳ್ಳಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂನ್ 3 ರಂದು ನಡೆಯುತ್ತಿರುವ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ನಾನು ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ. ನಾನು ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಬಾರಿ ನಗರಸಭಾ ಸದಸ್ಯ, ಮೂರು ಬಾರಿ ವಿಧಾನಸಭಾ ಸದಸ್ಯ. ಒಟ್ಟು ನಾಲ್ಕು ಚುನಾವಣೆಗಳನ್ನು ಸ್ಪರ್ಧೆ ಮಾಡಿ ನಾಲ್ಕು ಚುನಾವಣೆಯಲ್ಲೂ ಕ್ಷೇತ್ರದ ಮತದಾರರು ಗೆಲ್ಲಿಸಿರುತ್ತಾರೆ. ಜನರಿಗಾಗಿ ಸೇವೆ ಮಾಡಿದ್ದು ಇದೀಗ ಶಿಕ್ಷಕರು, ಪದವಿಧರರ ಪರವಾಗಿ ನಿಲ್ಲಲು ಚುನಾವಣೆ ಎದುರಿಸುತ್ತಿದ್ದೇನೆ ಎಂದರು.
ನಾನು ಪ್ರಥಮ ಬಾರಿಗೆ ನೈರುತ್ಯ ಪದವೀಧರ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತಿದ್ದೇನೆ, ಹಿಂದಿನ ಚುನಾವಣೆಯಲ್ಲಿ ಪಕ್ಷದ ಆಧಾರದ ಮೇಲೆ ಚುನಾವಣೆ ನಡೆಯುತ್ತಿದ್ದವು, ಆದರೆ ಈ ಚುನಾವಣೆ ವ್ಯಕ್ತಿಯ ಆಧಾರಿತ ಚುನಾವಣೆಯಾಗಿದೆ. ಈ ಚುನಾವಣೆಯಲ್ಲಿ ನಾನು ಗೆದ್ದ ನಂತರ ಪದವೀಧರ ಕ್ಷೇತ್ರದಲ್ಲಿ ಯಾವೆಲ್ಲ ಸಮಸ್ಯೆ ಇದೆ ಅದನ್ನು ಕೈಗೆತ್ತಿಕೊಂಡು ಬಗೆಹರಿಸುವುದಾಗಿ ಹೇಳಿದರು.
ಪದವೀಧರ ಪರವಾಗಿ ಗಟ್ಟಿ ಧ್ವನಿಯಲ್ಲಿ ವಿಧಾನ ಪರಿಷತ್ ಒಳಗೆ ಮಾತನಾಡುವಂತಹ ಶಾಸಕ ಆಗುತ್ತೇನೆ, ಯಾವ ಸಂದರ್ಭದಲ್ಲಿಯೂ ಕ್ರಿಯಾಶೀಲವಾಗಿ 24/7 ಗಂಟೆ ಕೆಲಸ ಮಾಡುವುದಾಗಿ ಹೇಳಿದರು. ನನ್ನ ಹೆಸರಿನ ಮುಂದೆ ಮತವನ್ನು ಹಾಕಿ ನನ್ನನ್ನು ಬೆಂಬಲಿಸಬೇಕು ಎಂದು ಕೇಳಿಕೊಂಡರು. ಪತ್ರಿಕಾಗೋಷ್ಠಿಯಲ್ಲಿ ಮೇಲಿನ ಕೊಪ್ಪ ಹರೀಶ್, ಮದನ್ ತನಿಕಲ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.