![](https://nammurexpress.in/wp-content/uploads/2024/10/WhatsApp-Image-2024-10-18-at-10.56.55_a263bafa.jpg)
ಕರಾವಳಿ ಟಾಪ್ ನ್ಯೂಸ್
– ಧರ್ಮಸ್ಥಳ: ದ್ವಿಚಕ್ರ ವಾಹನ ನಿಯಂತ್ರಣ ತಪ್ಪಿ ಯುವಕ ಸಾವು; ಪೋಷಕರ ಆಕ್ರಂದನ
– ಮಂಗಳೂರು: ಹೆಚ್ಚಾದ ಸೈಬರ್ ವಂಚನೆ : ಇಬ್ಬರು ಅರೆಸ್ಟ್
– ಉಪ್ಪಿನಂಗಡಿ: ರಿಕ್ಷಾದಲ್ಲಿ ಗಾಂಜಾ ಸಾಗಾಟ : ಆರೋಪಿಯ ಬಂಧನ.
– ಕುಂದಾಪುರ: ಜಮೀನು ನೋಂದಣಿಗೆ ಹೋದ ಮಹಿಳೆ ಹೊಳೆಗೆ ಹಾರಿ ಆತ್ಮಹತ್ಯೆ
NAMMUR EXPRESS NEWS
ಧರ್ಮಸ್ಥಳ: ದ್ವಿಚಕ್ರ ವಾಹನದಲ್ಲಿ ಸಂಚರಿಸುವ ವೇಳೆ ಆಕಸ್ಮಿಕವಾಗಿ ನಿಯಂತ್ರಣ ತಪ್ಪಿ ಸಾವಿಗೀಡಾಗಿರುವ ಘಟನೆಯೊಂದು ಧರ್ಮಸ್ಥಳ ಗ್ರಾಮದ ಮುಂಡ್ರುಪಾಡಿಯಲ್ಲಿ ಜ.16ರಂದು ನಿವಾಸಿ ಮಿಥುನ್ ಕರ್ಕೇರ (25) ಎಂಬುವವರು ಸಾವಿಗೀಡಾಗಿದ್ದಾರೆ.
ಯಾವುದೋ ಸಮಾರಂಭಕ್ಕೆಂದು ಮಂಗಳೂರಿನಿಂದ ಬಂದ ಯುವಕ ಕಲ್ಮಂಜ ನಿಡಿಗಲ್ ಸಮೀಪ ಬೈಕ್ ಸ್ಕಿಡ್ ರಸ್ತೆಗೆ ಬಿದ್ದು ತಲೆ ಭಾಗಕ್ಕೆ ಗಂಭೀರ ಗಾಯವಾಗಿದ್ದು, ತಕ್ಷಣ ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಗೆ ಯುವಕನಾಗಿದ್ದಾನೆ.
ಮೃತರು ಖಾಸಗಿ ಬಸ್ ಮತ್ತು ಆಟೋ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಗಲಿಕೆಯಿಂದ ಕಡ್ಡಾಯವಾಗಿ ಇವರೊಳಗಾಗಿದ್ದಾರೆ. ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆಂದು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಇಡಲಾಗಿದೆ.
* ಮಂಗಳೂರು: ಹೆಚ್ಚಾದ ಸೈಬರ್ ವಂಚನೆ : ಇಬ್ಬರು ಅರೆಸ್ಟ್
ಮಂಗಳೂರು: ದೇಶದಲ್ಲಿ ದಿನದಿಂದ ದಿನಕ್ಕೆ ಸೈಬರ್ ವಂಚನೆ ಪ್ರಕರಣಗಳು ಜಾಸ್ತಿಯಾಗುತ್ತಿದ್ದು, ಪೊಲೀಸರು ಸೈಬರ್ ವಂಚಕರ ವಿರುದ್ಧ ಹದ್ದಿನ ಕಣ್ಣಿಟ್ಟಿದ್ದಾರೆ. ವ್ಯಕ್ತಿಯೊಬ್ಬರು ವಂಚಕರನ್ನು ನಂಬಿ ಬರೋಬ್ಬರಿ 77 ಲಕ್ಷ ಹಣ ಕಳೆದುಕೊಂಡಿದ್ದಾರೆ. ನಗರ ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದಾಖಲಾದ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರ ಆರೋಪಿಗಳನ್ನು ಕೇರಳ ಕಣ್ಣೂರಿನ ಪತಾಯಕುನ್ನು ಉಮ್ಮರ್ ವಲಿಯ ಪರಂಬತ್ (41) ರಿಯಾಝ್ ಎಂ.ವಿ. (45) ಎಂದು ಗುರುತಿಸಲಾಗಿದೆ.
ವ್ಯಕ್ತಿಯೊಬ್ಬರಿಗೆ ವಾಟ್ಸಾಪ್ನಲ್ಲಿ ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸಿದರೆ ಹೆಚ್ಚಿನ ಲಾಭಾಂಶ ಪಡೆಯಬಹುದು ಎಂಬ ಸಂದೇಶ ಬಂದಿತ್ತು. ಇದನ್ನು ನಂಬಿ ಹೂಡಿಕೆ ಮಾಡಲು ಮುಂದಾಗಿದ್ದಾರೆ. ಸೈಬರ್ ವಂಚಕರು ವ್ಯಕ್ತಿಯಿಂದ ಹಂತ ಹಂತವಾಗಿ 77,96,322.08 ರೂ.ವನ್ನು ವಸೂಲಿ ಮಾಡಿದ್ದಾರೆ.
ಆದರೆ ಆರೋಪಿಗಳು ಕೊಟ್ಟ 77 ಲಕ್ಷ ಮಾತ್ರವಲ್ಲದೆ, ಲಾಭಾಂಶವನ್ನೂ ನೀಡದೆ ವಂಚಿಸಿದ್ದರು. ಈ ಬಗ್ಗೆ ಹಣ ಕಳೆದುಕೊಂಡ ವ್ಯಕ್ತಿಯು ಸೆನ್ ಠಾಣೆಗೆ ದೂರು ನೀಡಿದ್ದರು. ಅದರಂತೆ ಪ್ರಕರಣ ದಾಖಲಿಸಿ ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
* ಉಪ್ಪಿನಂಗಡಿ: ರಿಕ್ಷಾದಲ್ಲಿ ಗಾಂಜಾ ಸಾಗಾಟ : ಆರೋಪಿಯ ಬಂಧನ.
ಉಪ್ಪಿನಂಗಡಿ: ರಿಕ್ಷಾವೊಂದರಲ್ಲಿ ಸಾಗಿಸುತ್ತಿದ್ದ ಒಂದೂವರೆ ಕೆಜಿ ತೂಕದ ಗಾಂಜಾವನ್ನು ಪತ್ತೆ ಹಚ್ಚಿದ ಉಪ್ಪಿನಂಗಡಿ ಪೊಲೀಸರು, ಆರೋಪಿಯನ್ನು ಮಾಲು ಸಹಿತ ಬಂಧಿಸಿದ್ದಾರೆ ಎಂದು ಾಹಿತಿ ತಿಿಯಲಾಗಿದೆ.
ಎಸ್ಐ ಅವಿನಾಶ್ ಎಚ್. ಮತ್ತವರ ತಂಡ 34ನೇ ನೆಕ್ಕಿಲಾಡಿಯಲ್ಲಿ ವಾಹನ ತಪಾಸಣೆ ಮಾಡುತ್ತಿದ್ದಾಗ ಬಂಟ್ವಾಳದ ಕಡೆಯಿಂದ ಉಪ್ಪಿನಂಗಡಿಯತ್ತ ಬರುತ್ತಿದ್ದ ರಿಕ್ಷಾವನ್ನು ನಿಲ್ಲಿಸಲು ಸೂಚಿಸಲಾಗುತ್ತದೆ. ಆದರೆ ವಾಹನವನ್ನು ನಿಲ್ಲಿಸದೆ ಮುಂದಕ್ಕೆ ಚಲಾಯಿಸಿ ರಿಕ್ಷಾದಿಂದ ಇಳಿದು ತಪ್ಪಿಸಿಕೊಳ್ಳಲು ಯತ್ನಿಸಿದ ಚಾಲಕ ಬೆಳ್ತಂಗಡಿ ತಾಲೂಕಿನ ಪುತ್ತಿಲ ಗ್ರಾಮದ ಅಬ್ದುಲ್ ಸಲೀಂ (35)ನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಗಾಂಜಾ ಸಾಗಿಸುತ್ತಿದ್ದುದು ತಿಳಿದು ಬಂತು. ನೌಶಾದ್ ಎಂಬಾತ ತನಗೆ ಗಾಂಜಾ ನೀಡಿದ್ದಾಗಿ ಆರೋಪಿ ತಿಳಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
* ಕುಂದಾಪುರ: ಜಮೀನು ನೋಂದಣಿಗೆ ಹೋದ ಮಹಿಳೆ ಹೊಳೆಗೆ ಹಾರಿ ಆತ್ಮಹತ್ಯೆ
ಕುಂದಾಪುರ: ಹೊಸದಾಗಿ ಖರೀದಿಸಿದ ಜಮೀನು ನೋಂದಣಿ ಮಾಡಲು ಹೋದ ಮಹಿಳೆಯೊಬ್ಬರು ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಬಳ್ಕೂರು ಎಂಬಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನು ಬಳ್ಕೂರಿನ ನಿವಾಸಿ, ಸಮೀಪದ ಪಾನಕದ ಕಟ್ಟೆ ಎಂಬಲ್ಲಿ ಹೇರ್ ಸೆಲೂನ್ ನಡೆಸುತ್ತಿದ್ದ ವಿನಯ್ ಭಂಡಾರಿ ಎಂಬವರ ಪತ್ನಿ ಶ್ರುತಿ (33) ಎಂದು ತಿಳಿಯಲಾಗಿದೆ.
ಘಟನೆ ತಿಳಿದ ತಕ್ಷಣ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿ ಶೋಧ ಕಾರ್ಯ ನಡೆಸಿದ್ದಾರೆ. ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
![](https://nammurexpress.in/wp-content/uploads/2024/07/WhatsApp-Image-2024-07-10-at-13.16.01_68e08fdf-1024x202.jpg)