ಕಾಫಿನಾಡಿನಾದ್ಯಂತ ದಸರಾ ಸಂಭ್ರಮ
* ಶೃಂಗೇರಿ,ಹೊರನಾಡು, ಹರಿಹರಪುರ,ಬಾಳೆಹೊನ್ನೂರಿನಲ್ಲಿ ಸಂಭ್ರಮದ ಆಚರಣೆ
* ಜಿಲ್ಲೆಯ ಎಲ್ಲಾ ತಾಲೂಕಿನಲ್ಲೂ ದುರ್ಗಾ ಪ್ರತಿಷ್ಠಾಪನೆ
NAMMMUR EXPRESS NEWS
ಚಿಕ್ಕಮಗಳೂರು: ಕಾಫಿನಾಡಿನಾದ್ಯಂತ ದಸರಾ ಸಂಭ್ರಮ ಮನೆಮಾಡಿದೆ ಜಿಲ್ಲೆಯ ಶೃಂಗೇರಿ,ಹೊರನಾಡು,ಹರಿಹರಪುರ,ಬಾಳೆಹೊನ್ನೂರು ಸೇರಿದಂತೆ ಎಲ್ಲಾ ತಾಲೂಕಿನಲ್ಲೂ ದುರ್ಗೆಯನ್ನು ಪ್ರತಿಷ್ಠಾಪಿಸಿ ಆರಾಧಿಸಲಾಗುತ್ತಿದೆ.
ಶೃಂಗೇರಿಯಲ್ಲಿ ವೈಭವದ ಜಗತ್ಪ್ರಸಿದ್ಧ ಶ್ರೀಶಾರದಾ ಶರನ್ನವರಾತ್ರಿಗೆ ಚಾಲನೆ ದೊರೆತಿದ್ದು,ಸಾವಿರಾರು ಜನರು ಪ್ರತಿ ದಿನ ದೇವಿಯ ದರ್ಶನಕ್ಕೆ ಆಗಮಿಸುತ್ತಿದ್ದಾರೆ. ಇನ್ನೊಂದು ಸುಪ್ರಸಿದ್ಧ ಹೊರನಾಡು ಶ್ರೀಅನ್ನಪೂರ್ಣೇಶ್ವರಿ ದೇವಾಲಯದಲ್ಲೂ ಕೂಡ ಸಂಭ್ರಮದ ನವರಾತ್ರಿ ಉತ್ಸವಕ್ಕೆ ಚಾಲನೆ ದೊರೆತಿದ್ದು,ದೇವಿಗೆ ವಿಶೇಷ ಅಲಂಕಾರಗಳು,ಪೂಜೆಗಳು ನಡೆಯುತ್ತಿದೆ.ಪ್ರಸಿದ್ಧ ಹರಿಹರಪುರ ಕ್ಷೇತ್ರದಲ್ಲೂ ಸಡಗರದ ನವರಾತ್ರಿ ಆಚರಣೆ ಆರಂಭಗೊಂಡಿದೆ. ಎನ್ ಆರ್ ಪುರ ತಾಲೂಕಿನ ಬಾಳೆಹೊನ್ನೂರಿನಲ್ಲೂ ವೈಭವದ ಬಾಳೆಹೊನ್ನೂರು ದಸರಾಕ್ಕೆ ಚಾಲನೆ ದೊರೆತಿದೆ.ಕೊಪ್ಪ,ಕಳಸ,ಎನ್ ಆರ್ ಪುರ,ಮೂಡಿಗೆರೆ,ತರೀಕೆರೆ, ಕಡೂರು,ಚಿಕ್ಕಮಗಳೂರಿನಲ್ಲಿ ದುರ್ಗಾ ಪ್ರತಿಷ್ಠಾಪನೆ ಮಾಡಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಪ್ರಸಿದ್ಧ ದೇವಸ್ಥಾನಗಳಾದ ಶೃಂಗೇರಿ,ಹೊರನಾಡು,ಹರಿಹರಪುರಕ್ಕೆ ಸಾವಿರಾರು ಭಕ್ತರು ಆಗಮಿಸುತ್ತಿದ್ದು,ದೇವಾಲಯದಲ್ಲಿ ವಿಶೇಷ ಪೂಜೆ,ಅಲಂಕಾರ,ಬೀದಿ ಉತ್ಸವ,ಧಾರ್ಮಿಕ,ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದೆ.
* ದಸರಾ ಸಂಭ್ರಮಕ್ಕೆ ಮಳೆಯ ಭೀತಿ
ಜಿಲ್ಲೆಯಾದ್ಯಂತ ಸಂಭ್ರಮದ ದಸರಾ ಮನೆಮಾಡಿದ್ದು ಈ ಮಧ್ಯೆ ದಸರಾ ಸಂಭ್ರಮಕ್ಕೆ ಮಳೆಯ ಭೀತಿ ಶುರುಶಾಗಿದೆ.ಮೋಡಕವಿದ ವಾತಾವರಣವಿದ್ದು ಸಂಜೆ ವೇಳೆಗೆ ಮಳೆ ಶುರುವಾಗಿ ದಸರಾ ಸಂಭ್ರಮಕ್ಕೆ ಅಡ್ಡಿಪಡಿಸುತ್ತಿದ್ದು,ದಸರಾದಲ್ಲಿ ಸಂಭ್ರಮಿಸುವ ಸಾರ್ವಜನಿಕರ ಆಸೆಗೆ ತಣ್ಣೀರೆರೆಚಿದೆ.








