ಕಾರ್ಕಳ ಪ್ರಮುಖ ಸುದ್ದಿಗಳು ಅರುಣೋದಯ ವಿಶೇಷ ಶಾಲೆಗೆ ನೀರಿನ ಟ್ಯಾಂಕ್ ಕೊಡುಗೆ – ಜೆಸಿಐ ಕಾರ್ಕಳ, ಬಂಡಿ ಮಠ ಫೌಂಡೇಶನ್ ಕಾರ್ಕಳ ಇದರ ಸಹಭಾಗಿತ್ವದಲ್ಲಿ ಸಹಾಯ – ಕಾರ್ಕಳ ಸರಕಾರಿ ಆಸ್ಪತ್ರೆಗೆ ಜಮೀಯತುಲ್ ಫಲಾಹ್ ವತಿಯಿಂದ 50 ಸಾವಿರ ದೇಣಿಗೆ – ಮಾಳ ಪಂಚಾಯತ್ ವ್ಯಾಪ್ತಿಯ ಮಕ್ಕಳಿಗೆ ವಿವಿಧ ಸ್ಪರ್ಧೆ – ಗುರುಕುಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ಕಾರ್ಕಳ: ಜೆಸಿಐ ಕಾರ್ಕಳ ಮತ್ತು ಬಂಡಿ ಮಠ ಫೌಂಡೇಶನ್ ಕಾರ್ಕಳ ಇದರ ಸಹಭಾಗಿತ್ವದಲ್ಲಿ ಕಾರ್ಕಳ ಅರುಣೋದಯ ವಿಶೇಷ ಮಕ್ಕಳ ಶಾಲೆಗೆ 3 ಸಿಂಟೆಕ್ಸ್ ನೀರಿನ ಟ್ಯಾಂಕ್ ಕೊಡುಗೆಯಾಗಿ ನೀಡಲಾಯಿತು. ಈ ಸಂದರ್ಭದಲ್ಲಿ ಕಾರ್ಕಳ ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್ ಸೋಮಶೇಖರ್, ಜೆಸಿಐ ಕಾರ್ಕಳದ ಅಧ್ಯಕ್ಷ ಜೆಸಿ ಅವಿನಾಶ್ ಶೆಟ್ಟಿ, ಕಾರ್ಕಳ ತಾಲೂಕು ಪತ್ರಕರ್ತ ಸಂಘದ ಅಧ್ಯಕ್ಷ ಮೊಹಮ್ಮದ್ ಶರೀಫ್, ಜೆ ಸಿ ಐ ವಲಯ 15ರ ಕಾರ್ಯಕ್ರಮ ವಿಭಾಗದ ನಿರ್ದೇಶಕರಾದ ವಿಘ್ನೇಶ್ ಪ್ರಸಾದ್, ಜೆ ಸಿ…
Author: NammurEXP
ಮಲೆನಾಡ ಯುವ ಸಾಧಕರು ಭರತ ನಾಟ್ಯದಲ್ಲಿ ದಿತಿ ಎಚ್.ಎಸ್ ಸಾಧನೆ! – ಕಲಾ ಪ್ರತಿಭೋತ್ಸವ’ ಕಾರ್ಯಕ್ರಮದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ – ವಾಗ್ದೇವಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ – ಅರ್ಚನಾ ಎ.ಆರ್ ಗೆ M.Scಯಲ್ಲಿ ಚಿನ್ನದ ಪದಕ – ಮಾನವೀಯ ಕೆಲಸಕ್ಕೆ ಕೊಡುಗೆ: ಡಾ.ಅಭಿಜಿತ್ ಅವರಿಗೆ ಗೌರವ – ಜೆ.ಎನ್.ಎನ್ ವಿದ್ಯಾರ್ಥಿನಿ ಪವಿತ್ರಾ ರಾಜ್ಯಕ್ಕೆ ಟಾಪರ್ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ತೀರ್ಥಹಳ್ಳಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಬೆಂಗಳೂರು ವಿಭಾಗವು ಮಕ್ಕಳ ಮತ್ತು ಯುವಜನರ ಕಲಾ ಪ್ರತಿಭೆಯನ್ನು ಗುರುತಿಸಿ, ಅವರಿಗೆ ಉತ್ತೇಜನ ನೀಡುವ ಹಾಗೂ ಕಲಾ ನೈಪುಣ್ಯವನ್ನು ವೃದ್ಧಿಗೊಳಿಸಲು ಪ್ರೋತ್ಸಾಹಿಸುವ ಸಲುವಾಗಿ ದಿನಾಂಕ 22.12.2018 ಹಾಗೂ 23.12.2018 ರಂದು ಹಮ್ಮಿಕೊಂಡಿದ್ದ ವಲಯ ಮಟ್ಟದ ‘ಕಲಾ ಪ್ರತಿಭೋತ್ಸವ’ ಕಾರ್ಯಕ್ರಮದಲ್ಲಿ, ವಾಗ್ದೇವಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ದೃತಿ ಎಚ್.ಎಸ್. ಭಾಗವಹಿಸಿ ‘ಕಿಶೋರ ಪ್ರತಿಭೆ’ ಶಾಸ್ತ್ರೀಯ ನೃತ್ಯ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟದ ಕಲಾ ಪ್ರತಿಭೋತ್ಸವಕ್ಕೆ ಆಯ್ಕೆಯಾಗಿದ್ದಾಳೆ. ಈ ರಾಜ್ಯ ಮಟ್ಟದ…
ಆಗುಂಬೆ ಘಾಟಿಗೆ ಸುರಂಗ ಮಾರ್ಗ ಪ್ಲಾನಿಗೆ ಟೆಂಡರ್! – ಕೇಂದ್ರ ಸರ್ಕಾರದಿಂದ ₹2.33 ಕೋಟಿ ವೆಚ್ಚದಲ್ಲಿ ಡಿಪಿಆರ್ ಟೆಂಡರ್ – ಸಂಸದ ರಾಘವೇಂದ್ರ, ಶಾಸಕ ಆರಗ ಜ್ಞಾನೇಂದ್ರ ವಿಶೇಷ ಪ್ರಯತ್ನ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ತೀರ್ಥಹಳ್ಳಿ/ ಹೆಬ್ರಿ: ಆಗುಂಬೆ ಘಾಟ್ ರಸ್ತೆ ಅಭಿವೃದ್ಧಿಗೆ ಮಹತ್ವದ ಸುದ್ದಿ ಸಿಕ್ಕಿದೆ. ಆಗುಂಬೆ ಘಾಟ್ ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ–169ಎ (ಕಿ.ಮೀ. 30.75 ರಿಂದ 51.60) ಮೇಲ್ದರ್ಜೆಗೇರಿಸುವ ಮಹತ್ವಾಕಾಂಕ್ಷಿ ಯೋಜನೆಗೆ ಕೇಂದ್ರ ಸರ್ಕಾರವು ₹2.33 ಕೋಟಿ ವೆಚ್ಚದಲ್ಲಿ ಡಿಪಿಆರ್ ಸಿದ್ಧಪಡಿಸಲು ಟೆಂಡರ್ ಆಹ್ವಾನಿಸಿದೆ. ವಿಶೇಷವಾಗಿ ಸುರಂಗ ಮಾರ್ಗದ ಕಾರ್ಯಸಾಧ್ಯತಾ ಅಧ್ಯಯನ, ಭೂ-ತಾಂತ್ರಿಕ ಪರಿಶೀಲನೆಗಳು ಮತ್ತು ತಜ್ಞರ ನೇಮಕಾತಿ ಒಳಗೊಂಡಿರುವುದು ಈ ಘೋಷಣೆಯ ಮಹತ್ವವನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಶಿವಮೊಗ್ಗ ಲೋಕಸಭಾ ಸದಸ್ಯ ರಾಘವೇಂದ್ರ ಬಿ. ವೈ ಅವರು ಹೇಳಿಕೆ ನೀಡಿದ್ದಾರೆ. ಹಲವು ದಶಕಗಳಿಂದ ಜನರು ಎದುರಿಸುತ್ತಿದ್ದ ಅಪಾಯಕರ ಪ್ರಯಾಣಕ್ಕೆ ಶಾಶ್ವತ ಪರಿಹಾರ ಕಂಡುಹಿಡಿಯುವ ದಿಕ್ಕಿನಲ್ಲಿ ಇದು ಮೊದಲ ನಿರ್ಣಾಯಕ ಹೆಜ್ಜೆ. ಈ ಯೋಜನೆ ಮಲೆನಾಡು–ಕರಾವಳಿ…
ಮೂಡಿಗೆರೆಯ ಹಂತೂರಲ್ಲಿ ಕೃಷಿ ತರಬೇತಿ ಸೂಪರ್..! – ಸೆಹಗಲ್ ಫೌಂಡೇಶನ್–ಕಾಫಿ ಬೋರ್ಡ್ ಸಂಯುಕ್ತ ಪುನರುತ್ಪಾದಕ ಕೃಷಿ ತರಬೇತಿ – ಕಾಫಿ ಬೋರ್ಡ್ ಅಧ್ಯಕ್ಷರಾದ ದಿನೇಶ್ ಅವರಿಂದ ಮಾಹಿತಿ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ಮೂಡಿಗೆರೆ: ಐ. ಸಿ.ಸಿ. ಆರ್. ಎಲ್ ಯೋಜನೆಯಡಿ ಸೆಹಗಲ್ ಫೌಂಡೇಶನ್ ಹಾಗೂ ಕಾಫಿ ಬೋರ್ಡ್ ಅವರ ಸಂಯುಕ್ತ ಸಹಯೋಗದಲ್ಲಿ ಹಂತೂರು ಪಿ. ಎ. ಸಿ. ಎಸ್ ಆವರಣದಲ್ಲಿ ಪುನರುತ್ಪಾದಕ ಕೃಷಿ ಪದ್ಧತಿಗಳ ಕುರಿತು ಸಮಗ್ರ ತರಬೇತಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು. ಈ ಕಾರ್ಯಕ್ರಮವು ಕಾಫಿ ಬೆಳೆಗಾರ ರೈತರಿಗೆ ಆಧುನಿಕ ಹಾಗೂ ಪರಿಸರ ಸ್ನೇಹಿ ಕೃಷಿ ಪದ್ಧತಿಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕಾಫಿ ಬೋರ್ಡ್ ಅಧ್ಯಕ್ಷರಾದ ದಿನೇಶ್ ಅವರು ಮಾತನಾಡಿ, ಸೆಹಗಲ್ ಫೌಂಡೇಶನ್‌ನ ದೃಷ್ಟಿ ಹಾಗೂ ಧ್ಯೇಯವನ್ನು ಶ್ಲಾಘಿಸಿದರು. ಇಂದಿನ ಆಧುನಿಕ ಕಾಫಿ ಕೃಷಿ ಯುಗದಲ್ಲಿ ಪುನರುತ್ಪಾದಕ ಕೃಷಿ ಪದ್ಧತಿಗಳು ಅತ್ಯಂತ ಅಗತ್ಯವಾಗಿದ್ದು, ಮಣ್ಣಿನ ಆರೋಗ್ಯ ಕಾಪಾಡಿಕೊಳ್ಳುವುದು ದೀರ್ಘಕಾಲೀನ ಕೃಷಿಗೆ…
ಕರಾವಳಿ ಟಾಪ್ ನ್ಯೂಸ್ ಪಡುಬಿದ್ರೆ ಎರ್ಮಾಳಲ್ಲಿ ವಿಮಾನ ನಿಲ್ದಾಣ ಆಗುತ್ತಾ? – ಕೇಂದ್ರ ವಿಮಾನ ಯಾನ ಸಚಿವರಿಗೆ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಪತ್ರ – ರಾಜ್ಯ ಸರ್ಕಾರ ಸೂಕ್ತ ನೆರವು ನೀಡಿದರೆ ವಿಮಾನ ನಿಲ್ದಾಣ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ಉಡುಪಿ: ಪಡುಬಿದ್ರೆ ಎರ್ಮಾಳು ವಿಮಾನ ನಿಲ್ದಾಣ ನಿರ್ಮಾಣಕ್ಕೆ ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಕೇಂದ್ರ ವಿಮಾನಯಾನ ಸಚಿವರಿಗೆ ಪತ್ರ ಬರೆದಿದ್ದಾರೆ. ರಾಜ್ಯ ಸರ್ಕಾರ ಸೂಕ್ತ ನೆರವು ನೀಡಿದರೆ ಮುಂದಿನ ದಿನಗಳಲ್ಲಿ ಉಡುಪಿ ಜಿಲ್ಲೆಯ, ಪಡುಬಿದ್ರೆ ಬಳಿಯ ಎರ್ಮಾಳಿನ ವಿಮಾನ ನಿಲ್ದಾಣ ಯೋಜನೆಯನ್ನು ಕೈಗೆತ್ತಿಕೊಳ್ಳಬಹುದಾಗಿದೆ ಎಂದು ವಿಮಾನಯಾನ ಸಚಿವ ಕಿಂಜರಪು ರಾಮ್ ಮೋಹನ್ ನಾಯ್ಡು ಅವರಿಗೆ ನೀಡಿದ್ದ ಮನವಿಗೆ ಸ್ಪಂದಿಸಿ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರ ಕೋರಿಕೆಯ ಮೇರೆಗೆ ಎರ್ಮಾಳಿನಲ್ಲಿ ನೂತನ ವಿಮಾನ ನಿಲ್ದಾಣಕ್ಕೆ ಕೇಂದ್ರ ಸಚಿವರಿಗೆ ಮನವಿ ಸಲ್ಲಿಸಿದ್ದೆ. ಈ ಬಗ್ಗೆ ಸಚಿವರು ನನಗೆ ಬರೆದ ಪತ್ರದಲ್ಲಿ ಉಡಾನ್…
ಟಾಪ್ ನ್ಯೂಸ್ ಮಲೆನಾಡು ಹಳ್ಳಿಯಲ್ಲಿ ಹಾರುತ್ತಿದ್ದ ವಿಮಾನ: ಜನರಿಗೆ ಭಯ! – ಕಳಸ, ಎನ್. ಆರ್. ಪುರ ತಾಲೂಕಲ್ಲಿ ಹಾರಾಟ: ಅಚ್ಚರಿ – ಯಾರಿಗೂ ಮಾಹಿತಿ ಇಲ್ಲ: ಭದ್ರತಾ ವೈಫಲ್ಯ..?! ತೀರ್ಥಹಳ್ಳಿ: ಕಾರನ್ನೇ ಪುಡಿ ಪುಡಿ ಮಾಡಿದ ಕಾಡು ಕೋಣ! ಶೃಂಗೇರಿ: ಡಾಕ್ಟರ್ ವಿರುದ್ದ ಮಹಿಳಾ ಆಯೋಗಕ್ಕೆ ಕೇಸ್ ಚಿಕ್ಕಮಗಳೂರು: ಮುಳ್ಳಯ್ಯನಗಿರಿಯಲ್ಲಿ ಅನೇಕ ಮಾರ್ಗ ಬಂದ್! ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ಚಿಕ್ಕಮಗಳೂರು: ಬಾಳೆಹೊನ್ನೂರು, ಬಾಳೆಹೊಳೆ, ಖಾಂಡ್ಯ ಸುತ್ತಮುತ್ತ ವಿಮಾನ ಹಾರಾಟ ಇದೀಗ ಜನರಲ್ಲಿ ಆತಂಕ ಸೃಷ್ಟಿಮಾಡಿದೆ. ಆದರೆ ಇದು ಯಾಕಾಗಿ ಹಾರಾಟ ನಡೆಸಿದೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ.ಕಣ್ಣಿಗೆ ಕಾಣುವ ಮಟ್ಟಿಗೆ ಮನೆ ಮೇಲಗಡೆ ಹಾರಾಟ ನಡೆಸಿದೆ. ವನ್ಯಜೀವಿ ಅರಣ್ಯ ಪ್ರದೇಶಗಳ ವ್ಯಾಪ್ತಿಯೊಳಗೆ ಸೊಮವಾರ ಮಧ್ಯಾಹ್ನ ಸಾಮಾನ್ಯ ಗಾತ್ರದ ವಿಮಾನವೊಂದು ಹತ್ತಿರದ ಅಂತರದಲ್ಲಿ ಹಾರಾಟ ನಡೆಸುತ್ತಿರುವುದನ್ನು ಕಂಡು ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಬೆಳಗ್ಗೆ ಕಳಸ ತಾಲೂಕು ಬಾಳೆಹೊಳೆ, ತಲಗೋಡು, ತಂಬಿಕೊಡಿಗೆ, ಮುನ್ಸೂರ್‌ಪಾಲ್ ಮುಂತಾದ ಕಡೆಗಳಲ್ಲಿ ವಿಮಾನ ಕಾಣಿಸಿಕೊಂಡಿದೆ. ಮಧ್ಯಾಹ್ನ ಹೋಗಿದ್ದು, ಖಾಂಡ್ಯ…
ಆಟೋ ದಾಖಲೆ, ಸುರಕ್ಷತೆ, ನಿಯಮ ಪಾಲನೆ ಕಡ್ಡಾಯ! – ತೀರ್ಥಹಳ್ಳಿಯಲ್ಲಿ ಆಟೋ ಚಾಲಕರ ಜತೆ ಪೊಲೀಸ್ ಸಭೆ – ನಿಯಮ ಮೀರಿದ್ರೆ ಕಾನೂನು ಕ್ರಮ ಎಚ್ಚರಿಕೆ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ತೀರ್ಥಹಳ್ಳಿ: ನಾಲೂರು ಬಳಿ ಆಟೋ ಅಪಘಾತದಲ್ಲಿ ಮಹಿಳೆ ಓರ್ವರು ಭೀಕರವಾಗಿ ಮೃತಪಟ್ಟ ಘಟನೆ ನಡೆದ ಬೆನ್ನಲ್ಲೇ ಆಟೋ ಮೇಲೆ ಪೊಲೀಸರು ಕಣ್ಣಿಟ್ಟಿದ್ದಾರೆ. ಆಟೋಗಳ ಬೇಕಾಬಿಟ್ಟಿ ಚಾಲನೆ ಕಡಿವಾಣ ಹಾಕಲು ನಿಯಮ ಬಿಗಿ ಮಾಡಿದ್ದು ಎಲ್ಲಾ ದಾಖಲೆ ಹಾಗೂ ವಾಹನ ಸುರಕ್ಷತೆಗೆ ಒಂದು ವಾರದ ಗಡುವು ನೀಡಲಾಗಿದೆ. ಪೊಲೀಸ್ ಇಲಾಖೆ ಈಗ ಎಲ್ಲಾ ಆಟೋ ಚಾಲಕರು ಮತ್ತು ಮಾಲೀಕರ ಸಭೆ ನಡೆಸಿ ಮಾಹಿತಿ ನೀಡಿದ್ದಾರೆ. ಎಲ್ಲಾ ದಾಖಲೆ ಸರಿ ಮಾಡಲು ಸೂಚಿಸಿದ್ದಾರೆ. ಡಿವೈಎಸ್ಪಿ ಅರವಿಂದ ಕಲಗುಜ್ಜಿ, ತೀರ್ಥಹಳ್ಳಿ ಇನ್ಸ್ಪೆಕ್ಟರ್ ಇಮ್ರಾನ್ ಬೇಗ್, ಮಾಳೂರ ಸರ್ಕಲ್ ಇನ್ಸ್ಪೆಕ್ಟರ್ ರಾಜಶೇಖರ್, ಹೊಸನಗರ ಸರ್ಕಲ್ ಇನ್ಸ್ಪೆಕ್ಟರ್ ಗೌಡಪ್ಪಗೌಡ, ಆಗುಂಬೆ ಸಬ್ಇನ್ಸ್ಪೆಕ್ಟರ್ ಶಿವನಗೌಡ ಸೇರಿ ಪೊಲೀಸ್ ಅಧಿಕಾರಿಗಳು ಇದ್ದರು. ಸೂಚನೆಗಳು ಏನೇನು? 1. ಕಡ್ಡಾಯವಾಗಿ ಲೈಸನ್ಸಸ್…
ಕಾಲೇಜು ಬದಲಾವಣೆಗೆ ಅಪಹರಣ ಎಂಬ ಹೈಡ್ರಾಮ! – ಮಂಗಳೂರು ಕಾಲೇಜು ಸೇರಲು ಕಿಡ್ನಾಪ್ ಕಥೆ ಕಟ್ಟಿದ ಯುವತಿ – ಕೈ ಕೊಯ್ದುಕೊಂಡು ಅಪಹರಣ ಎಂದು ಸುಳ್ಳು ಹೇಳಿದ್ದಳು! – ಪೊಲೀಸ್ ತನಿಖೆಯಲ್ಲಿ ಬಹಿರಂಗ: ಏನಿದು ಘಟನೆ..? ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ಬೆಳ್ತಂಗಡಿ: ಕಾಲೇಜಿಗೆ ಸ್ಕೂಟರಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ, ಕಾರಿನಲ್ಲಿ ಆಗಮಿಸಿದ ಮೂವರು ಅಪರಿಚಿತರು ಆ ಬಾಲಕಿಯನ್ನು ಅಪಹರಿಸಲು ಯತ್ನಿಸಿದ್ದಾರೆ ಎಂಬ ಘಟನೆ ಸುಳ್ಳು ಎಂಬ ಬಗ್ಗೆ ಮಾಹಿತಿ ಲಭ್ಯ ಆಗುತ್ತಿದೆ. ಸೋಮವಾರದಂದು ಸುದೇಮುಗೇರು ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಬಾಲಕಿಯು ಬೆಳಿಗ್ಗೆ 8.30ರ ಸುಮಾರಿಗೆ ಸಂತೆಕಟ್ಟೆ ಬಸ್ ನಿಲ್ದಾಣಕ್ಕೆ ಸ್ಕೂಟಿಯಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಈ ಕಾರಿನಲ್ಲಿ ಬಂದ ಮೂವರು ಅಪರಿಚಿತ ವ್ಯಕ್ತಿಗಳು ಸ್ಕೂಟಿಯನ್ನು ಅಡ್ಡಗಟ್ಟಿ ನಿಲ್ಲಿಸಿದ್ದಾರೆ. ಬಾಲಕಿಯನ್ನು ಬಲವಂತವಾಗಿ ಎಳೆದು ತಂದು, ಕಾರಿನೊಳಗೆ ತೂರಿಸಲು ಯತ್ನಿಸಿದ್ದಾರೆ. ಬಾಲಕಿಯು ಜೋರಾಗಿ ಕಿರುಚಾಡಿ ಪ್ರತಿರೋಧ ವ್ಯಕ್ತಪಡಿಸಿದ್ದಾಳೆ. ಅದೇ ಸಂದರ್ಭದಲ್ಲಿ ಹಿಂಭಾಗದಲ್ಲಿ ಸ್ಕೂಟರ್ ಬರುತ್ತಿರುವುದನ್ನು ಗಮನಿಸಿದ ವ್ಯಕ್ತಿಗಳು ಗಾಬರಿಗೊಂಡಿದ್ದಾರೆ. ತಕ್ಷಣ ದುಷ್ಕರ್ಮಿಗಳು ಬಾಲಕಿಯ ಕೈ…
ಬ್ಯಾಂಕ್, ಪಾನ್ ಕಾರ್ಡ್ ನಿಯಮ ಬದಲು: ಏನಿದು ಓದಿ! – ಏ.1ರಿಂದ ಜಾರಿ ಸಾಧ್ಯತೆ: ಪ್ಯಾನ್‌ಗೆ ಹೊಸ ನಿಯಮ – ನಗದು ಬ್ಯಾಂಕಲ್ಲಿ ಇಡಬೇಕಾದ್ರೂ ಕೂಡ ಅನ್ವಯ! – ಸ್ಥಿರಾಸ್ತಿಗಳ ಖರೀದಿ, ಮಾರಾಟ, ಗಿಫ್ಟ್ ನಿಯಮ ನವದೆಹಲಿ: ಬ್ಯಾಂಕ್‌ಗಳಲ್ಲಿ ನಗದು ಠೇವಣಿ ಇಡುವುದು, ವಿತ್ ಡ್ರಾ ಮಾಡುವುದು, ಮೋಟಾರು ವಾಹನಗಳ ಖರೀದಿ, ಹೋಟೆಲ್ ಬಿಲ್ ಪಾವತಿಯಂತಹ ವಹಿವಾಟುಗಳಿಗೆ ಪ್ಯಾನ್ ಸಂಖ್ಯೆಯನ್ನು ನಮೂದಿಸುವ ಮಿತಿಯನ್ನು ಗಣನೀಯವಾಗಿ ಹೆಚ್ಚಿಸಲು ಹೊಸ ಕರಡು ಆದಾಯ ತೆರಿಗೆ ನಿಯಮಗಳಲ್ಲಿ ಪ್ರಸ್ತಾಪಿಸಲಾಗಿದೆ. ಪ್ರಸ್ತಾವಿತ ‘ಆದಾಯ ತೆರಿಗೆ ನಿಯಮಗಳು 2026’ರ ಪ್ರಕಾರ, ಒಬ್ಬ ವ್ಯಕ್ತಿ ಒಂದು ಹಣಕಾಸು ವರ್ಷದಲ್ಲಿ ತನ್ನ ಒಂದು ಅಥವಾ ಹೆಚ್ಚಿನ ಖಾತೆಗಳಲ್ಲಿ ಒಟ್ಟು 10 ಲಕ್ಷ ರೂ. ಅಥವಾ ಅದಕ್ಕಿಂತ ಹೆಚ್ಚಿನ ನಗದು ಠೇವಣಿ ಅಥವಾ ಹಿಂಪಡೆಯುವಿಕೆ ಮಾಡಿದರೆ ಮಾತ್ರ ಪ್ಯಾನ್ ಸಂಖ್ಯೆ ನಮೂದಿಸುವುದು ಕಡ್ಡಾಯ. ಪ್ರಸ್ತುತ, ಬ್ಯಾಂಕ್‌ಗಳಲ್ಲಿ ಒಂದೇ ದಿನದಲ್ಲಿ 50,000 ರೂ.ಗಿಂತ ಹೆಚ್ಚಿನ ನಗದು ವ್ಯವಹಾರಕ್ಕೆ ಪ್ಯಾನ್ ಸಂಖ್ಯೆ ಅಗತ್ಯವಿತ್ತು. ವಾಹನಗಳ ಖರೀದಿ…
ಎಲೆ ಚುಕ್ಕಿ ರೋಗ ತಡೆಗೆ ಮಹತ್ವದ ನಿರ್ಧಾರ! – ಔಷಧಿ ಸಂಶೋಧನೆ ಈಗ ಖಾಸಗಿ ಕೈಗೆ ನೀಡಲು ತೀರ್ಮಾನ – ಶಿವಮೊಗ್ಗದಲ್ಲಿ ಅಡಿಕೆ ಮಹಾ ಮಂಡಲ ಸಭೆ ಓದಿ… ಮತ್ತೊಂದು ಸುದ್ದಿ… ಡಾ.ಅನಂತಮೂರ್ತಿ ಅಧ್ಯಯನ ಕೇಂದ್ರಕ್ಕೆ ಅಸ್ತು!? ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ಮಲೆನಾಡು: ಮಲೆನಾಡು ಸೇರಿ ಅಡಿಕೆ ಬೆಳೆಗಾರರನ್ನು ಆತಂಕಕ್ಕೆ ತಳ್ಳಿರುವ ಎಲೆ ಚುಕ್ಕಿ ರೋಗಕ್ಕೆ ಶಾಶ್ವತ ಪರಿಹಾರ ನೀಡುವ ನಿಟ್ಟಿನಲ್ಲಿ ಇದೀಗ ಅಡಿಕೆ ಮಹಾ ಮಂಡಲ ಮಹತ್ವದ ನಿರ್ಧಾರ ಕೈಗೊಂಡಿದೆ. ಶಿವಮೊಗ್ಗ ಮ್ಯಾಮಕೋಸ್ ಸಭಾಂಗಣದಲ್ಲಿ ತೀರ್ಥಹಳ್ಳಿ ಕ್ಷೇತ್ರಶಾಸಕರು, ಅಡಿಕೆ ಮಹಾಮಂಡಲ ಅಧ್ಯಕ್ಷರೂ ಆದ ಆರಗ ಜ್ಞಾನೇಂದ್ರರವರ ಅಧ್ಯಕ್ಷತೆಯಲ್ಲಿ ಅಡಿಕೆ ಮಹಾ ಮಂಡಲ ಸಭೆ ಜರುಗಿತು. ಪ್ರಸ್ತುತ ರೈತರನ್ನು ತೀವ್ರವಾಗಿ ಬಾದಿಸುತ್ತಿರುವ ಎಲೆಚುಕ್ಕಿ ರೋಗಕ್ಕೆ ಔಷದಿಯನ್ನು ಕಂಡು ಹಿಡಿಯುವ ಅನಿವಾರ್ಯ-ಸಂದಿಗ್ಧ ಪರಿಸ್ಥಿತಿ ಇರುವುದರಿಂದ ವಿವಿಧ ಖಾಸಗಿ ಸಂಶೋಧನ ಸಂಸ್ಥೆಗಳೂ ಮುಂದಿನ ದಿನಗಳಲ್ಲಿ ಸೂಕ್ತ ಸಂಶೋಧನೆ ನಡೆಸಿ ಪರಿಹಾರ ಕಂಡುಕೊಳ್ಳಲು ಅವಕಾಶ ಕಲ್ಪಿಸಿ ನಿರ್ಧಾರ ತೆಗೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಸುಮಾರು 33…



