ಬೆಂಗಳೂರು: ನಾಡಹಬ್ಬವಾದ ದಸರಾದ ಪ್ರಯುಕ್ತ ಕರ್ನಾಟಕದ ಶಾಲೆಗಳ ಮಕ್ಕಳಿಗೆ ರಜೆ ನೀಡುವುದು ಹಿಂದಿನಿಂದ ಬಂದ ಪದ್ಧತಿಯಾಗಿದೆ. ಸೆಪ್ಟೆಂಬರ್ ಅಂತ್ಯದ ವೇಳೆಗೆ ಅರ್ಧವಾರ್ಷಿಕ ಪರೀಕ್ಷೆಯನ್ನು ಮುಗಿಸಿ, ಅಕ್ಟೋಬರ್ ತಿಂಗಳ ಪ್ರಾರಂಭದಿಂದ ದಸರಾ ಹಬ್ಬ ಮುಗಿಯುವವರೆಗೂ ರಾಜ್ಯ ಸರ್ಕಾರವು ರಜೆಯನ್ನು ಘೋಷಿಸುತ್ತದೆ. ಶೈಕ್ಷಣಿಕ ವೇಳಾಪಟ್ಟಿ 2026ರ ಪ್ರಕಾರ ಈ ಬಾರಿಯ ದಸರಾ ರಜೆಯು 19 ದಿನಗಳ ಕಾಲ ಲಭಿಸಲಿದೆ. ಅಕ್ಟೋಬರ್ 2ರ ಶುಕ್ರವಾರದಂದು ಗಾಂಧಿ ಜಯಂತಿ ಮತ್ತು ಲಾಲ್ ಬಹುದ್ದೂರ್ ಶಾಸ್ತ್ರಿ ಜಯಂತಿಯನ್ನು ಆಚರಿಸಿದ ಬಳಿಕ, ಅಕ್ಟೋಬರ್ 3ರ ಶನಿವಾರದಿಂದ ಅಕ್ಟೋಬರ್ 20ರ ಮಂಗಳವಾರದವರೆಗೆ ರಜೆಯನ್ನು ಘೋಷಿಸಲಾಗಿದೆ. ಅಕ್ಟೋಬರ್ 11ರ ಭಾನುವಾರದಿಂದ ನವರಾತ್ರಿ ಅಥವಾ ದಸರಾ ಹಬ್ಬ ಪ್ರಾರಂಭಗೊಳ್ಳಲಿದ್ದು, ಅಕ್ಟೋಬರ್ 19ರ ಸೋಮವಾರದಂದು ಮಹಾನವಮಿ ಮತ್ತು ಅಕ್ಟೋಬರ್ 20ರಂದು ವಿಜಯದಶಮಿ ಹಬ್ಬ ಮುಗಿದ ಬಳಿಕ, ಅಕ್ಟೋಬರ್ 21ರ ಬುಧವಾರದಿಂದ ಎಂದಿನಂತೆ ಶಾಲೆಗಳ ತರಗತಿಗಳು ಪ್ರಾರಂಭಗೊಳ್ಳಲಿವೆ ಎನ್ನುವ ಮಾಹಿತಿ ಮೂಲಗಳಿಂದ ಲಭಿಸಿದೆ.
Author: NammurEXP
ಬೆಳ್ತಂಗಡಿ: ಮನೆಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ದೋಚಿಕೊಂಡು ಹೋಗಿರುವ ಘಟನೆ, ಕುವೆಟ್ಟು ಗ್ರಾಮದ ಆಲಂದಿಲ ಎನ್ನುವಲ್ಲಿ ನಡೆದಿದೆ. ನೌಫಾಲ್ ಎನ್ನುವವರ ಮನೆಯಲ್ಲಿ ಈ ಘಟನೆ ಸಂಭವಿಸಿದೆ. ಭಾನುವಾರದಂದು ನೌಫಾಲ್ ತಮ್ಮ ಸಹೋದರನಾದ ನೌಷಾದ್ ಮತ್ತು ಆತನ ಕುಟುಂಬಸ್ಥರನ್ನು ಸಂಬಂಧಿಕರ ಗೃಹಪ್ರವೇಶಕ್ಕೆಂದು ಗುರುವಾಯನಕೆರೆಗೆ ಕರೆದುಕೊಂಡು ಹೋಗಿದ್ದರು ಎನ್ನಲಾಗಿದೆ. ಮಧ್ಯಾಹ್ನದ ಹೊತ್ತಿಗೆ ನೌಫಾಲ್ ಅವರು ಮನೆಗೆ ಆಗಮಿಸಿದ್ದು, ಬಳಿಕ ಹೊರಗಿನಿಂದ ಚಿಲಕ ಹಾಕಿಕೊಂಡು ವ್ಯಾಪಾರದ ಕೆಲಸದ ನಿಮಿತ್ತವಾಗಿ ಬೆಳ್ತಂಗಡಿಗೆ ತೆರಳಿದ್ದರು. ಅಷ್ಟೇ ಅಲ್ಲದೆ ನೌಷಾದ್ ಕೂಡ ಮನೆಗೆ ಬಂದು ತೆರಳಿದ್ದರು. ಆದರೆ, ಸೋಮವಾರದಂದು ರಾತ್ರಿ ನೌಫಾಲ್ ಅವರ ಕುಟುಂಬಸ್ಥರು ಮನೆಗೆ ಹಿಂತಿರುಗಿದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ ಎನ್ನುವ ಮಾಹಿತಿ ಲಭಿಸಿದೆ. ಬಟ್ಟೆಯನ್ನು ಬದಲಾಯಿಸುವಾಗ ಕೋಣೆಯಲ್ಲಿದ್ದ ಬೀರುವನ್ನು ಪರಿಶೀಲಿಸಿದಾಗ ಚಿನ್ನಾಭರಣ ಕಳುವಾಗಿರುವುದು ಕಂಡುಬಂದಿದೆ. ಚಿನ್ನದ ಸರಗಳು, ಬ್ರಾಸ್ ಲೈಟ್, ಉಂಗುರಗಳು ಮತ್ತು ಕಿವಿಯೋಲೆಗಳು ಸೇರಿ ಒಟ್ಟು 113 ಗ್ರಾಂ ತೂಕದ 15.82.೦೦೦ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು 1.80.000 ರೂಪಾಯಿ ನಗದು…
ನವ ದೆಹಲಿ: ಒರಾಕಲ್ ಎನ್ನುವ ಸಾಫ್ಟ್ ವೇರ್ ಜಗತ್ತಿನ ದೈತ್ಯ ಸಂಸ್ಥೆಯು ಮಂಗಳವಾರದಂದು ತನ್ನ ಉದ್ಯೋಗಗಳಿಗೆ ಇ-ಮೇಲ್ ಮೂಲಕ ಆಘಾತಕಾರಿ ಸಂಗತಿಯೊಂದನ್ನು ನೀಡಿದೆ. ಬೆಳಿಗ್ಗೆ 6:00ಗಂಟೆಯ ಸುಮಾರಿಗೆ ತನ್ನ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವ ಉದ್ಯೋಗಿಗಳಿಗೆ ಇ-ಮೇಲ್ ಅನ್ನು ಕಳುಹಿಸಿದ್ದು ಅದರಲ್ಲಿ “ನಿಮ್ಮ ಹುದ್ದೆಗೆ ಸಂಬಂಧಿಸಿದಂತೆ ಕೆಲವು ಕಠಿಣ ಸುದ್ಧಿಯನ್ನು ಹಂಚಿಕೊಳ್ಳುತ್ತಿದ್ದು, ಇಂದು ನಿಮ್ಮ ಕೆಲಸದ ಕೊನೆಯ ದಿನವಾಗಿದೆ” ಎಂದು ತಿಳಿಸಿದೆ ಎನ್ನಲಾಗಿದೆ. ಕೃತಕ ಬುದ್ಧಿಮತ್ತೆ ಮತ್ತು ಕ್ಲೌಡ್ ನ ಮೂಲಸೌಕರ್ಯಕ್ಕಾಗಿ ಒರಾಕಲ್ ಭಾರಿ ಪ್ರಮಾಣದ ಹೂಡಿಕೆಯನ್ನು ಮಾಡುತ್ತಿದ್ದು, ಇದರ ಪರಿಣಾಮವಾಗಿ ಮತ್ತೊಂದು ಸುತ್ತಿನ ಉದ್ಯೋಗ ಕಡಿತವನ್ನು ಕೈಗೊಂಡಿದೆ. ಈಗಾಗಲೇ ಒರಾಕಲ್ ಹಲವು ಬಾರಿ ಉದ್ಯೋಗ ಕಡಿತವನ್ನು ಕೈಗೊಂಡಿದ್ದು, ಇದರಿಂದಾಗಿ ಎಷ್ಟು ಜನ ಉದ್ಯೋಗಿಗಳು ಲೇಆಫ್ ಎನ್ನುವ ಹೆಸರಿನಲ್ಲಿ ಉದ್ಯೋಗಗಳನ್ನು ಕಳೆದುಕೊಂಡಿದ್ದಾರೆ ಎನ್ನುವುದರ ಕುರಿತು ಅಧಿಕೃತ ಮಾಹಿತಿ ನೀಡಿಲ್ಲ. ಆದರೆ ಮಾಹಿತಿಯ ಪ್ರಕಾರ 2026ರ ಆರ್ಥಿಕ ವರ್ಷದಲ್ಲಿ ಒರಾಕಲ್ ತನ್ನ ಶೇಕಡ 13ರಷ್ಟು ಅಂದರೆ ಸರಿ ಸುಮಾರು 21.000 ಉದ್ಯೋಗಿಗಳನ್ನು ವಜಾಗೊಳಿಸಿದ್ದು, ಜಾಗತಿಕ ಸಿಬ್ಬಂದಿಗಳ…
ನವದೆಹಲಿ: ಸಾರ್ವಜನಿಕರು ಯಾವುದೇ ರೀತಿಯ ವಸ್ತುಗಳನ್ನು ಖರೀದಿಸಿ ಅಥವಾ ಸೇವೆಯನ್ನು ಪಡೆದುಕೊಂಡಾದ ಬಳಿಕ ಅವುಗಳಿಗೆ ಫೋನ್ ಪೇ, ಗೂಗಲ್ ಪೇ ಮತ್ತು ಪೇಟಿಎಂ ಮಾಡುವುದು ಸಹಜ. ಆದರೆ ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಇದೀಗ ಮಹತ್ವದ ನಿರ್ಣಯವನ್ನು ಕೈಗೊಂಡಿದೆ. ನಿರ್ಣಯದ ಪ್ರಕಾರ ಇನ್ನು ಮುಂದೆ ಇಂತಹ ವ್ಯವಸ್ಥೆಗಳ ಮೂಲಕ ಜನರು ಹಣವನ್ನು ಪಾವತಿಸಿದ್ದೇ ಆದಲ್ಲಿ ಅದಕ್ಕೆ ಶುಲ್ಕವನ್ನು ತೆರಬೇಕಾಗಿದೆ. ಮಾಹಿತಿಯ ಪ್ರಕಾರ ಒಬ್ಬ ವ್ಯಕ್ತಿ ಮತ್ತೊಬ್ಬ ವ್ಯಕ್ತಿಗೆ ಯುಪಿಐ ಮೂಲಕ ಹಣವನ್ನು ವರ್ಗಾಯಿಸಿದರೆ ಅದಕ್ಕೆ ಶುಲ್ಕವನ್ನು ಪಾವತಿಸುವ ಅಗತ್ಯವಿಲ್ಲ. ಆದರೆ 2000ಕ್ಕಿಂತ ಮೇಲ್ಪಟ್ಟ ಮೊತ್ತವನ್ನು ಇವುಗಳ ಮೂಲಕ ವರ್ಗಾಯಿಸಿದರೆ ಶೇಕಡ 0.4ರಷ್ಟು ಅಂದರೆ 300 ರೂಪಾಯಿಗಳಷ್ಟು ಗರಿಷ್ಠ ಶುಲ್ಕ ಇರಲಿದೆ. ಹಾಗೆಯೇ 2000ಕ್ಕಿಂತ ಕಡಿಮೆ ಮೊತ್ತವನ್ನು ಫೋನ್ ಪೇ, ಗೂಗಲ್ ಪೇ ಮತ್ತು ಪೇಟಿಎಂ ಮೂಲಕ ವರ್ಗಾಯಿಸಿದ್ದಲ್ಲಿ ಎಂದಿನಂತೆಯೇ ಉಚಿತವಾಗಿಯೇ ಮುಂದುವರೆಯಲಿದೆ ಎಂದು ಹೇಳಲಾಗಿದೆ. ಕಳೆದ ಆರುವರ್ಷಗಳಿಂದ ಈ ರೀತಿಯ ಸೇವೆಗಳು ಉಚಿತವಾಗಿಯೇ ನಡೆಯುತ್ತಿದ್ದವು. ಇದರೊಂದಿಗೆ ಜನಸಾಮಾನ್ಯರ ದೈನಂದಿನ ಅಗತ್ಯ ಸೇವೆಗಳಾದ…
ಬೆಂಗಳೂರು: ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಗಳಾಗಿ 100 ದಿನಗಳನ್ನು ಯಶಸ್ವಿಯಾಗಿ ಪೂರೈಸಿರುವ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಗೌರಿಗದ್ದೆಯ ಅವದೂತರಾದ ವಿನಯ್ ಗುರೂಜಿ ಅವರು ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿ ಶುಭಾಶಯಗಳನ್ನು ಕೋರಿ ಆಶೀರ್ವದಿಸಿದ್ದಾರೆ. ಈ ಸಂದರ್ಭದಲ್ಲಿ ವಿನಯ್ ಗುರೂಜಿ ಅವರು ರಾಜ್ಯದ ಅದರಲ್ಲೂ ಮುಖ್ಯವಾಗಿ ಮಲೆನಾಡು ಭಾಗದ ರೈತರ ಜ್ವಲಂತ ಸಮಸ್ಯೆಗಳ ಕುರಿತು ಡಿ.ಕೆ.ಶಿವಕುಮಾರ್ ಅವರಲ್ಲಿ ಚರ್ಚೆ ನಡೆಸಿದ್ದಾರೆ. ಮಲೆನಾಡು ಭಾಗದ ರೈತರು ಎದುರಿಸುತ್ತಿರುವ ಸಂಕಷ್ಟಗಳು ಮತ್ತು ಅಡಿಕೆ ಬೆಳೆಗಾರರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳಿಗೆ ಶೀಘ್ರವೇ ಶಾಶ್ವತ ಪರಿಹಾರವನ್ನು ಒದಗಿಸುವಂತೆ ಕೋರಿದ್ದಾರೆ. ಇದರೊಂದಿಗೆ ರಾಜ್ಯದ ಪ್ರತಿಯೊಂದು ತಾಲ್ಲೂಕು ಕೇಂದ್ರಗಳಲ್ಲಿ ಸಾರ್ವಜನಿಕರಿಗೆ ಉತ್ತಮ ಮತ್ತು ಉಚಿತ ಸೇವೆ ದೊರಕುವಂತೆ ಮಾಡಲು ನೂರು ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಸ್ಥಾಪಿಸುವಂತೆ, ರಾಜ್ಯದ ಅಭಿವೃದ್ಧಿ ಮತ್ತು ಜನಸಾಮಾನ್ಯರ ಹಿತದೃಷ್ಟಿಯಿಂದ ತಕ್ಷಣವೇ ಕೈಗೊಳ್ಳಬೇಕಾದಂತಹ ಪ್ರಮುಖ ವಿಚಾರಗಳ ಕುರಿತು ಮಾತುಕತೆ ನಡೆಸಿ ಅಂತಿಮವಾಗಿ ಮನವಿ ಪತ್ರವನ್ನು ಕೂಡ ಸಲ್ಲಿಸಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ವಿನಯ್ ಗುರೂಜಿ ಅವರಿಂದ ಮನವಿ ಪತ್ರವನ್ನು…
ಬೆಳ್ತಂಗಡಿ: ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಘಟನೆ, ಸೋಮವಾರದಂದು ಗಣೇಶ ಚತುರ್ಥಿ ಹಬ್ಬದಂದು ನೇತ್ರಾವತಿಯ ಸರ್ವಿಸ್ ಸ್ಟೇಷನ್ ತಿರುವಿನಲ್ಲಿ ಸಂಭವಿಸಿದೆ. ಧರ್ಮಸ್ಥಳದಿಂದ ಉಜಿರೆಯತ್ತ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಕೋಲಾರ ಜಿಲ್ಲೆಯಿಂದ ನಾಲ್ಕು ಸದಸ್ಯರನ್ನು ಒಳಗೊಂಡ ಕುಟುಂಬವು ಟೊಯೊಟಾ ಈಟಿಯಾಸ್ ಕಾರಿನಲ್ಲಿ ಧರ್ಮಸ್ಥಳ ದೇವಸ್ಥಾನಕ್ಕೆ ತೆರಳಿ ಬಳಿಕ ಉಜಿರೆಗೆ ಹೋಗುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ. ಪರಿಣಾಮವಾಗಿ ಕಾರು ಚಾಲಕ ಶಶಿಕುಮಾರ್ ಸಹಿತ ಮೂವರು ಪ್ರಯಾಣಿಕರ ಕಾಲು ಮತ್ತು ಕೈಗಳಿಗೆ ಗಾಯವಾಗಿದೆ ಎನ್ನುವ ಮಾಹಿತಿ ಲಭಿಸಿದೆ. ತಕ್ಷಣ ಸ್ಥಳೀಯರು ಗಾಯಾಳುಗಳನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದಾರೆ. ಮಾಹಿತಿ ಲಭಿಸುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಬೆಳ್ತಂಗಡಿ ಸಂಚಾರಿ ಠಾಣೆಯ ಪೊಲೀಸರು ಪರಿಶೀಲನೆಯನ್ನು ನಡೆಸಿದರು ಎನ್ನುವ ಸಂಗತಿ ತಿಳಿದುಬಂದಿದೆ. •ಉಡುಪಿ: ಶಾಲಾ ಮಕ್ಕಳಿಗೆ ಕಳಪೆ ಆಹಾರ, ಹಳಸಿದ ಮೊಟ್ಟೆ, ಕಸ ಸೇರಿದ ಬೇಳೆ ಉಡುಪಿ: ಜಿಲ್ಲೆಯ ಹಲವಾರು ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ವಿತರಿಸಲಾಗುತ್ತಿರುವ ಮೊಟ್ಟೆ, ಅಕ್ಕಿ…
ಬೆಂಗಳೂರು: ರಾಜ್ಯಾದ್ಯಂತ ಗೌರಿ ಗಣೇಶ ಹಬ್ಬವನ್ನು ಅತ್ಯಂತ ಸಡಗರ ಮತ್ತು ಸಂಭ್ರಮದಿಂದ ಆಚರಿಸಿದ್ದು, ಈಗ ಎಲ್ಲೆಡೆ ಗಣೇಶೋತ್ಸವ ನಡೆಯುತ್ತಿದೆ. ಮೂರು, ಐದು ಮತ್ತು ಏಳು ದಿನಗಳ ಕಾಲ ಗಣೇಶೋತ್ಸವವನ್ನು ನಡೆಸಲಾಗುತ್ತಿದ್ದು ಕೊನೆಯ ದಿನದಂದು ಬೃಹತ್ ಶೋಭಾಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ಹುಲಿವೇಷ, ಕೇರಳದ ಚಂಡೆ ವಾದನ ಮತ್ತು ವಿವಿಧ ನಾಸಿಕ್ ಡೋಲುಗಳ ವೈಭವದೊಂದಿಗೆ ಗಣಪನಿಗೆ ಭವ್ಯ ವಿದಾಯವನ್ನು ಹೇಳಲು ಸಿದ್ಧತೆ ನಡೆದಿದೆ. ಸಾಂಸ್ಕೃತಿಕ ಸ್ಪರ್ಧೆಗಳ ಕಲರವ : ಗಣೇಶೋತ್ಸವದ ಅಂಗವಾಗಿ ಭಜನೆ, ನಾಟಕ, ಯಕ್ಷಗಾನ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅನೇಕ ವೇದಿಕೆಗಳಲ್ಲಿ ಸಾಧಕರಿಗೆ ಸನ್ಮಾನ ಮಾಡಲಾಗುತ್ತಿದೆ. ಈ ವರ್ಷ ಗಣೇಶೋತ್ಸವವನ್ನು ಆಚರಿಸುತ್ತಿದ್ದು ಡಿಜೆ, ಬೈಕ್ ರಾಲಿ, ಪೇಪರ್ ಬ್ಲಾಸ್ಟ್ ಮತ್ತು ಸಿಡಿಮದ್ದುಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸುವ ಮೂಲಕ ಶಾಂತಿಯುತವಾಗಿ ನಡೆಸುತ್ತಿದ್ದು, ಇವುಗಳನ್ನು ಅಕ್ಟೋಬರ್ 14ರ ವರೆಗೆ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಗಣೇಶನ ವಿಸರ್ಜನೆಯ ಸಂದರ್ಭದಲ್ಲಿ ಮಿತವಾದ ಸಂಖ್ಯೆಯಲ್ಲಿ ಭಕ್ತರು ತೆಪ್ಪಗಳಲ್ಲಿ ತೆರಳಬೇಕು ಎನ್ನುವ ಕಟ್ಟುನಿಟ್ಟಿನ ಕ್ರಮವನ್ನು ಸಹ ಕೈಗೊಳ್ಳಲಾಗಿದೆ. ಜೊತೆಗೆ ತೆಪ್ಪದಲ್ಲಿ ತೆರಳುವವರು ಜೀವ…
ಕೊಪ್ಪ: ಜುಲೈ ತಿಂಗಳಿನಲ್ಲಿ ಗಡಿಕಲ್ ಚೆಕ್ ಪೋಸ್ಟ್ ಬಳಿ ನಡೆದ ಗೋಕಳ್ಳತನಕ್ಕೆ ಸಂಬಂಧಿಸಿದಂತೆ ಆರೋಪಿಗಳಾಗಿದ್ದ ಇಬ್ಬರು ವ್ಯಕ್ತಿಗಳು ಕಳೆದ ಎರಡು ತಿಂಗಳಿನಿಂದ ತಲೆಮರೆಸಿಕೊಂಡಿದ್ದರು. ಇದೀಗ ಪೊಲೀಸರು ತೀವ್ರ ಕಾರ್ಯಾಚರಣೆಯನ್ನು ನಡೆಸಿ, ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳನ್ನು ಮುಬಾರಕ್ ಅಲಿಯಾಸ್ ಮುಬೀನಾ ಮತ್ತು ಅಹ್ಮದ್ ಬೇಗ್ ಅಲಿಯಾಸ್ ಚಾಂದ್ ಪಾಷಾ ಎಂದು ಗುರುತಿಸಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಅವರಿಗೆ 14 ದಿನಗಳ ನ್ಯಾಯಾಂಗ ಬಂಧನವನ್ನು ವಿಧಿಸಿದೆ ಎನ್ನುವ ಸಂಗತಿ ತಿಳಿದುಬಂದಿದೆ. •ನರಸಿಂಹರಾಜಪುರ: ಭೀಕರ ಆಟೋ ಅಪಘಾತ; ಮಹಿಳೆ ಸಾವು ನರಸಿಂಹರಾಜಪುರ: ಮಹಿಳೆಯೊಬ್ಬರು ಅನಾರೋಗ್ಯದಿಂದ ಬಳಲುತ್ತಿದ್ದ ಸಂಬಂಧಿಕರೊಬ್ಬರನ್ನು ಮಾತನಾಡಿಸಿಕೊಂಡು, ಆಟೋದಲ್ಲಿ ಮನೆಗೆ ಹಿಂತಿರುಗುತ್ತಿದ್ದ ಸಂದರ್ಭದಲ್ಲಿ, ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ, ಬಾಳೆಹೊನ್ನೂರಿನ ಕಾರ್ಗದ್ದೆ ಹಳ್ಳದ ಬಳಿಯಲ್ಲಿ ನಡೆದಿದೆ. ನಡೆದಿದೆ. ಆಟೋರಿಕ್ಷಾ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಬದಿಯಲ್ಲಿದ್ದ ಚರಂಡಿಗೆ ಉರುಳಿ ಬಿದ್ದಿದೆ. ಪರಿಣಾಮವಾಗಿ ಆಟೋ ಚಾಲಕರಾದ ಪ್ರಭಾಕರ್, ಪ್ರಯಾಣಿಕರಾದ ಶ್ರೀನಿವಾಸ್, ಅವರ ಪತ್ನಿ ಸುಮಾ ಮತ್ತು ಕೃಷ್ಣ ಅವರು ಗಾಯಗೊಂಡಿದ್ದರು.…
ಮೂಲ್ಕಿ: ಸೆಪ್ಟೆಂಬರ್ 1ರಂದು ಕಿಲ್ಪಾಡಿ ಗ್ರಾಮದ ಕೊರ್ದಬ್ಬು ದೇವಾಲಯದಲ್ಲಿ ಕಳುವು ಪ್ರಕರಣ ನಡೆದಿದ್ದು, ಅದಕ್ಕೆ ಕಾರಣರಾದ ಆರೋಪಿಗಳನ್ನು ಪೊಲೀಸರು ಪತ್ತೆಹಚ್ಚಿ, ಗುರುವಾರದಂದು ಬಂಧಿಸಿದ್ದಾರೆ. ಆರೋಪಿಗಳನ್ನು ಹೆಜಮಾಡಿ ಗ್ರಾಮದ ನಿವಾಸಿ ಜಾಹೀದ್ ಸಿನಾನ್, ಕಾರ್ಕಳ ತಾಲ್ಲೂಕಿನ ನಿಟ್ಟೆಯ ಪೋಸ್ಟ್ ಪಡ್ಡೆ ಅಂಗಡಿ ಹವಸ್ ನಿವಾಸಿ ಯಾಸೀನ್, ದಾವಣಗೆರೆಯ ಗೋಕುಲನಗರ ನಿವಾಸಿ ಮೊಹಮ್ಮದ್ ಅಫ್ರಿದ್, ದಾವಣಗೆರೆಯ ಜಾಲಿನಗರ ನಿವಾಸಿ ಅಬ್ದುಲ್ ಜುಮ್ಮಾನ್ ಎಂದು ಗುರುತಿಸಲಾಗಿದೆ. ದೇವಾಲಯದ ಗರ್ಭಗುಡಿಯ ಮುಖ್ಯದ್ವಾರಕ್ಕೆ ಹಾಕಲಾಗಿದ್ದ ಬೀಗವನ್ನು ತುಂಡರಿಸಿ, ಗರ್ಭಗುಡಿಯಲ್ಲಿದ್ದ ಕೊರ್ದಬ್ಬು ದೈವದ ಮೂರ್ತಿಗಳು ಮತ್ತು ದೈವದ ಚಿನ್ನಾಭರಣಗಳನ್ನು ಕಳುವು ಮಾಡಲಾಗಿತ್ತು. ಆರೋಪಿಗಳ ಬಳಿಯಿದ್ದ 4ಕೆಜಿ 521 ಗ್ರಾಂ ತೂಕದ ಬೆಳ್ಳಿ, 34.820 ಗ್ರಾಂ ತೂಕದ ಚಿನ್ನಾಭರಣಗಳು ಸೇರಿದಂತೆ ಕೃತ್ಯಕ್ಕೆ ಬಳಸಿದ ಬೈಕ್ ಮತ್ತು ಕಾರು ಸೇರಿದಂತೆ ಸುಮಾರು 17.20.000 ರೂಪಾಯಿ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. •ಬೈಂದೂರು: ಸರಣಿ ಅಪಘಾತ; ವ್ಯಕ್ತಿ ಸಾವು ಬೈಂದೂರು: ಸರಕು ತುಂಬಿದ ಲಾರಿ, ನಾಲ್ಕು ಬೈಕ್ ಮತ್ತು ಹೆದ್ದಾರಿಯಲ್ಲಿ ನಿಲ್ಲಿಸಿದ್ದ ಪೊಲೀಸರ ಗಸ್ತು ವಾಹನದ…
ಬೆಂಗಳೂರು: ಬ್ಯಾಂಕ್ ಸೇವೆ ಇಲ್ಲ.. ಬಸ್ ಸೀಟಿಲ್ಲ… ಹಬ್ಬಕ್ಕೆ ಎಫೆಕ್ಟ್! ಎಫೆಕ್ಟ್..!. ಹೌದು. ಒಂದು ಕಡೆ ಇಂದಿನಿಂದ 4 ದಿನ ಬ್ಯಾಂಕ್ ಸೇವೆ ಇಲ್ಲ, ಮತ್ತೊಂದು ಕಡೆ ಸತತವಾಗಿ ರಜೆ ಕಾರಣ ಹಬ್ಬಕ್ಕೆ ಊರಿಗೆ ಹೊರಟ ಜನ ಬಸ್, ರೈಲು ರಶ್ ರಶ್ ಆಗಿದೆ. ಗುರುವಾರದಿಂದಲೇ ಜನ ಊರಿಗೆ ಹೊರಟಿದ್ದಾರೆ. ಕೆ.ಎಸ್.ಆರ್.ಟಿ.ಸಿ, ಖಾಸಗಿ ಬಸ್, ರೈಲು ರಶ್ ಆಗಿವೆ. ಎಲ್ಲೆಡೆ ಹಬ್ಬದ ಸಂಭ್ರಮ ಜೋರಾಗಿದೆ. ಎಲ್ಲಾ ಬಸ್ ನಿಲ್ದಾಣಗಳಲ್ಲಿ ಜನರ ಸಂಖ್ಯೆ ಹೆಚ್ಚಿದೆ. ಸೆಪ್ಟೆಂಬರ್ 11ರಿಂದ ಬ್ಯಾಂಕ್ ಮುಷ್ಕರಕ್ಕೆ ಕರೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ದೇಶಾದ್ಯಂತ ಸೆಪ್ಟೆಂಬರ್ 11ರಂದು ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಿದೆ. ಇದರ ಪರಿಣಾಮ ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಬ್ಯಾಂಕ್ ಸೇವೆಗಳಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆಯಿದ್ದು, ಗ್ರಾಹಕರಿಗೆ ಸತತ ನಾಲ್ಕು ದಿನ ಬ್ಯಾಂಕ್ ಶಾಖೆಗಳ ಸೇವೆ ಲಭ್ಯವಾಗುವುದಿಲ್ಲ. ವಾರಕ್ಕೆ ಐದು ದಿನಗಳ ಕೆಲಸದ ಪದ್ಧತಿ ಜಾರಿಗೆ ತರುವುದು, ಪಿಂಚಣಿ…



