Author: NammurEXP

ತೀರ್ಥಹಳ್ಳಿ: ಶಿಕ್ಷಕರ ದಿನಾಚರಣೆಯ ಅಂಗವಾಗಿ ಮಲೆನಾಡ ಗ್ರಾಹಕರ ಮೆಚ್ಚಿನ ಚಿನ್ನಾಭರಣ ಮಳಿಗೆ ಗಾಯತ್ರಿ ಜುವೆಲ್ಲರ್ಸ್  ಅಲ್ಲಿ ಉತ್ತಮ ಶಿಕ್ಷಕರನ್ನು ಗುರುತಿಸಿ ಸನ್ಮಾನ ಮಾಡಿ ಗೌರವಿಸಲಾಯಿತು. ಸಾಮಾಜಿಕ ಕೆಲಸದಲ್ಲಿ ತೀರ್ಥಹಳ್ಳಿ ಕ್ಷೇತ್ರದ ಶಿಕ್ಷಣಾಧಿಕಾರಿ ಮಂಜುನಾಥ್ ಅವರು ದೀಪ ಬೆಳಗುವುದರ ಮೂಲಕ ಉದ್ಘಾಟನೆ ಮಾಡಿದರು. ಕಾರ್ಯಕ್ರಮದಲ್ಲಿ 2026-27ನೇ ಸಾಲಿನ ಉತ್ತಮ ಶಿಕ್ಷಕರು ಎಂದು ಸನ್ಮಾನಿಸಿ ಗೌರವಿಸಲಾಯಿತು. ಸುಮಾರು 13 ಶಿಕ್ಷಕರಿಗೆ ಹಾಗೂ ಪ್ರೌಢಶಾಲೆಯ ಎಸ್. ಡಿ. ಎಂ. ಸಿ ಅಧ್ಯಕ್ಷರು ಹಾಗೂ ಪ್ರಾಥಮಿಕ ಶಾಲೆಯ ಶಿಕ್ಷಣ ಅಧ್ಯಕ್ಷರು ಸನ್ಮಾನಿಸಲಾಯಿತು. ಗಾಯತ್ರಿ ಜ್ಯುವೆಲ್ಲರ್ಸ್ ಮಾಲೀಕ ಅನಂತ ಪದ್ಮನಾಭ ಸೇವಾ ಹೆಜ್ಜೆ ಸನ್ಮಾನದ ನಂತರ ಎಲ್ಲಾ ಶಿಕ್ಷಕರು ತಮ್ಮ ಶಿಕ್ಷಣ ದಿನಾಚರಣೆಯ ಶುಭ ನುಡಿಯನ್ನು ನುಡಿದರು. ಕಾರ್ಯಕ್ರಮ ಆಯೋಜನೆ ಮೂಲಕ ಶಿಕ್ಷಣ ಕ್ಷೇತ್ರದ ಸಾಧಕರನ್ನು ಗೌರವಿಸಿದ ಗಾಯತ್ರಿ ಜ್ಯುವೆಲ್ಲರ್ಸ್ ಮಾಲೀಕರಾದ ಅನಂತ ಪದ್ಮನಾಭ ಆಚಾರ್ಯ ಅವರು, ಸಮಾಜಕ್ಕೆ ಶಿಕ್ಷಕರ ಸೇವೆ ಅಪಾರ. ಮುಂದಿನ ವರ್ಷದಲ್ಲಿ ಉತ್ತಮ ಶಿಕ್ಷಕರು ಹಾಗೂ ಅತಿಥಿ ಶಿಕ್ಷಕರಿಗೂ ಕೂಡ ಉತ್ತಮ ಶಿಕ್ಷಕರನ್ನು ಆಯ್ಕೆ…

Read More

ತೀರ್ಥಹಳ್ಳಿ/ ಹೊಸನಗರ: ಮಲೆನಾಡಿನ ಕುಗ್ರಾಮದ ಸರ್ಕಾರಿ ಶಾಲೆಯೊಂದರಲ್ಲಿ ಸದ್ದಿಲ್ಲದೆ ಶಿಕ್ಷಣ ಕ್ರಾಂತಿ ಮಾಡುತ್ತಿದ್ದ ಶಿಕ್ಷಕಿಗೆ ಇದೀಗ ದೇಶದ ಅತ್ಯುನ್ನತ ಗೌರವ ಹುಡುಕಿಕೊಂಡು ಬಂದಿದೆ. 2026ನೇ ಸಾಲಿನ ಪ್ರತಿಷ್ಠಿತ ‘ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ’ಗೆ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಸಮಟಗಾರು ಶಾಲೆಯ ಮುಖ್ಯಶಿಕ್ಷಕಿ ರತ್ನಕುಮಾರಿ ಎಸ್. ಆಯ್ಕೆಯಾಗಿದ್ದಾರೆ. ವಿಶೇಷ ಅಂದರೆ, ಈ ಬಾರಿ ಇಡೀ ಕರ್ನಾಟಕದಿಂದ ಆಯ್ಕೆಯಾದ ಏಕೈಕ ಶಿಕ್ಷಕಿ ಇವರಾಗಿದ್ದಾರೆ. ಕುಗ್ರಾಮದಲ್ಲಿ ಅಕ್ಷರ ಕ್ರಾಂತಿ ಮಾಡಿದ ಟೀಚರ್! ಕನಿಷ್ಠ ಬಸ್ ಸೌಲಭ್ಯವೂ ಇಲ್ಲದ, ಸೌಕರ್ಯಗಳ ವಂಚಿತ ಮಲೆನಾಡಿನ ಹೊಸನಗರ ತಾಲೂಕಿನ ಸಮಟಗಾರು ಗ್ರಾಮ. ಈ ಕುಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದೆರಡು ದಶಕಗಳಿಂದ ಅಕ್ಷರ ದಾಸೋಹ ನಡೆಸುತ್ತಿರುವವರು ಮುಖ್ಯಶಿಕ್ಷಕಿ ರತ್ನಕುಮಾರಿ. 24 ವರ್ಷಗಳಿಂದ ಅದೇ ಶಾಲೆಯಲ್ಲಿ ಸೇವೆ ಪ್ರತಿದಿನ ತೀರ್ಥಹಳ್ಳಿ ಪಟ್ಟಣದಿಂದ ಬಸ್ ಹಿಡಿದು ಶಾಲೆಗೆ ತಲುಪುವ ರತ್ನಕುಮಾರಿ ಅವರು, ಕಳೆದ 24 ವರ್ಷಗಳಿಂದ ಇದೇ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. 15 ವರ್ಷಗಳಿಂದ ಪ್ರಭಾರಿ ಮುಖ್ಯಶಿಕ್ಷಕಿಯಾಗಿ ಶಾಲೆಯನ್ನು ಮಾದರಿಯಾಗಿ ಮುನ್ನಡೆಸುತ್ತಿದ್ದಾರೆ.…

Read More

ತೀರ್ಥಹಳ್ಳಿ: ತೀರ್ಥಹಳ್ಳಿ ತಾಲ್ಲೂಕಿನ ಶ್ರೀ ಚೌಡೇಶ್ವರಿ–ಸಯ್ಯಿದ್ ಸಾದತ್ ದರ್ಗಾದಲ್ಲಿ ನಡೆದ ಕಾಣಿಕೆ ಹುಂಡಿ ಎಣಿಕೆ ಕಾರ್ಯದ ನಂತರ ಒಟ್ಟಾರೆ ₹1,01,73,650/- (ಒಂದು ಕೋಟಿ ಒಂದು ಲಕ್ಷದ ಎಪ್ಪತ್ತಮೂರು ಸಾವಿರದ ಆರುನೂರ ಐವತ್ತು ರೂಪಾಯಿಗಳು) ನಗದು ಸಂಗ್ರಹವಾಗಿದೆ. ಜೊತೆಗೆ ಭಕ್ತಾದಿಗಳಿಂದ ಚಿನ್ನ ಹಾಗೂ ಬೆಳ್ಳಿಯ ಆಭರಣಗಳೂ ಕಾಣಿಕೆಯಾಗಿ ಸ್ವೀಕೃತಗೊಂಡಿರುತ್ತವೆ. ಸಂಗ್ರಹವಾದ ನಗದು ಮೊತ್ತವನ್ನು ನಿಯಮಾನುಸಾರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ. ಈ ಹುಂಡಿ ಎಣಿಕೆ ಕಾರ್ಯವನ್ನು ಜಿಲ್ಲಾಧಿಕಾರಿಗಳಾದ ಪ್ರಭುಲಿಂಗ ಕವಳಿಕಟ್ಟಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಎನ್. ಹೇಮಂತ್ ಕುಮಾರ್ ಹಾಗೂ ಡಾ.ಮೈತ್ರಿ, ಉಪವಿಭಾಗಾಧಿಕಾರಿಗಳು ರವರು ಖುದ್ದು ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ತಹಸೀಲ್ದಾರ್ ರಂಜಿತ್, ಮುಜರಾಯಿ ತಹಸೀಲ್ದಾರ್ ಆರ್. ಪ್ರದೀಪ್, ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಕೆರೆಹಳ್ಳಿ ರಾಮಪ್ಪ ಹಾಗೂ ಸಮಿತಿಯ ಸರ್ವ ಸದಸ್ಯರು, ಕಾರ್ಯನಿರ್ವಾಹಕ ಅಧಿಕಾರಿಗಳು, ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು, ಗ್ರಾಮ ಸಹಾಯಕರು, ದೇವಸ್ಥಾನದ ಸಿಬ್ಬಂದಿಗಳು, ಬ್ಯಾಂಕ್ ಸಿಬ್ಬಂದಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಮತ್ತು…

Read More

ಉಳ್ಳಾಲ: ಮೀನುಗಾರಿಕೆಗೆ ತೆರಳಿದ್ದ ಹಡಗೊಂದು ಸಮುದ್ರದಲ್ಲಿ ಮುಳುಗಿದ ಘಟನೆ ಮಂಗಳವಾರದಂದು ಅಳಿವೆಬಾಗಿಲುವಿನಲ್ಲಿ ನಡೆದಿದೆ. ಶರೀಫ್ ಎನ್ನುವವರಿಗೆ ಸೇರಿದ ಹಡಗಿನಲ್ಲಿ ಐವರು ಮೀನುಗಾರರು ಮೀನುಗಾರಿಕೆಗೆ ತೆರಳಿದ್ದರು ಎನ್ನಲಾಗಿದೆ. ಈ ಸಂದರ್ಭದಲ್ಲಿ ಸಮುದ್ರದ ಅಲೆಗಳಿಗೆ ಸಿಲುಕಿ ಹಡಗು ಮುಳುಗಿದ್ದು, ಬೇರೆ ಹಡಗಿನಲ್ಲಿದ್ದ ಮೀನುಗಾರರು, ಮುಳುಗಿದ ಹಡಗಿನಲ್ಲಿದ್ದ ಐವರು ಮೀನುಗಾರರನ್ನು ರಕ್ಷಿಸಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಹಡಗು ಸಮುದ್ರದಲ್ಲಿ ಮುಳುಗಿದ ಪರಿಣಾಮವಾಗಿ ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ ಎಂದು ಶರೀಫ್ ಅಳೇಕಲ ಅವರು ಉಳ್ಳಾಲ ಪೊಲೀಸರಿಗೆ ದೂರು ನೀಡಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ. •ಮಂಗಳೂರು: ಬೈಕ್ ಕಳ್ಳತನ ಹಾವಳಿ ಜೋರು ಮಂಗಳೂರು: ಇತ್ತೀಚಿನ ದಿನಗಳಲ್ಲಿ ಮಂಗಳೂರು ಭಾಗದಲ್ಲಿ ದ್ವಿಚಕ್ರವಾಹನ ಕಳುವು ಮತ್ತು ಬಸ್ ಗಳಲ್ಲಿ ಪಿಕ್ ಪಾಕೆಟ್ ಗಳು ಹೆಚ್ಚಳಗೊಂಡಿರುವುದು ಸಾರ್ವಜನಿಕರಲ್ಲಿ ಆತಂಕವನ್ನು ಸೃಷ್ಟಿಸಿದೆ. ಬೈಕ್ ಗಳಲ್ಲಿ ಕೀ ಅನ್ನು ಬಿಟ್ಟು ಹೋಗುವುದನ್ನೇ ಗುರಿಯನ್ನಾಗಿಸಿಕೊಂಡು ಕಳೆದ ಮೂರು ತಿಂಗಳಿನಲ್ಲಿ ಸುಮಾರು 25ಕ್ಕೂ ಅಧಿಕ ಬೈಕ್ ಮತ್ತು ಸ್ಕೂಟರ್ ಗಳು ಕಳುವಾಗಿವೆ ಎನ್ನುವ ಮಾಹಿತಿ ಲಭಿಸಿದೆ. ಅದೇ…

Read More

ಶ್ರಾವಣ ಮಾಸದಂದು ಬರುವ ಪ್ರಮುಖ ಹಬ್ಬಗಳಲ್ಲಿ ಕೃಷ್ಣಾಷ್ಟಮಿ ಕೂಡ ಒಂದು. ಇದು ಶ್ರೀಕೃಷ್ಣನು ಜನಿಸಿದ ದಿನವಾದ್ದರಿಂದ, ಪ್ರತಿ ವರ್ಷ ಶ್ರಾವಣ ಮಾಸದ ಕೃಷ್ಣಪಕ್ಷದ ಅಷ್ಟಮಿಯ ದಿನದಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. ಕೃಷ್ಣಜನ್ಮಾಷ್ಟಮಿ ಅಥವಾ ಗೋಕುಲಾಷ್ಟಮಿಯನ್ನು ಎರಡು ರೀತಿಯಲ್ಲಿ ಆಚರಿಸಲಾಗುತ್ತದೆ. ಅಂದರೆ ಚಾಂದ್ರಮಾನದ ಪ್ರಕಾರ ಈಗ ಆಚರಿಸುವಂತೆ ಶ್ರಾವಣ ಮಾಸದ ಕೃಷ್ಣಪಕ್ಷದ ಅಷ್ಟಮಿಯಂದು ಮತ್ತು ಸೌರಮಾನದಲ್ಲಿ ಸಿಂಹಮಾಸದ ರೋಹಿಣಿ ನಕ್ಷತ್ರದಂದು ಆಚರಿಸಲ್ಪಡುತ್ತದೆ. ಶ್ರೀಕೃಷ್ಣನು ಮಥುರಾದಲ್ಲಿನ ಕಾರಾಗೃಹವೊಂದರಲ್ಲಿ ದೇವಕಿ ಮತ್ತು ವಸುದೇವರ ಅಷ್ಟಮ ಪುತ್ರನಾಗಿ ಅಂದರೆ ಎಂಟನೇ ಮಗುವಾಗಿ ಮಧ್ಯರಾತ್ರಿಯಲ್ಲಿ ಜನಿಸಿದ ಹಿನ್ನೆಲೆಯಾಗಿ ಈ ಹಬ್ಬವನ್ನು ರಾತ್ರಿ ಸಮಯದಲ್ಲಿ ಆಚರಿಸುವುದು ಇತರ ಹಬ್ಬಗಳಿಗಿಂತ ಒಂದು ವಿಶಿಷ್ಟ ಮತ್ತು ವಿಭಿನ್ನ ರೀತಿಯ ಅನುಭವವನ್ನು ನೀಡುತ್ತದೆ. ಪುರಾಣ ಏನು ಹೇಳುತ್ತೆ…? ಇಂದಿನ ಉತ್ತರಪ್ರದೇಶ ರಾಜ್ಯದ ಮಥುರಾ ಹಿಂದೆ ಯಾದವ ಕುಲದ ರಾಜಧಾನಿಯಾಗಿತ್ತು. ಕಂಸನ ಅಟ್ಟಹಾಸದಿಂದ ಮತ್ತು ಸಹೋದರಿಯ ಮಗುವಿನಿಂದಲೇ ತನ್ನ ಸಾವು ಎಂದು ಕಂಸ ತಿಳಿದಿದ್ದರಿಂದ ಆತನ ಸ್ವಂತ ಸಹೋದರಿಯಾದ ತುಂಬು ಗರ್ಭಿಣಿ ದೇವಕಿ ಮತ್ತು ಆಕೆಯ…

Read More

ನವ ದೆಹಲಿ: ಕೇಂದ್ರ ಸರ್ಕಾರವು ಸಾಮಾಜಿಕ ಜಾಲತಾಣಗಳ ಬಳಕೆಗೆ ಸಂಬಂಧಿಸಿದಂತೆ ಮಹತ್ವದ ನಿರ್ಣಯವನ್ನು ಕೈಗೊಂಡಿದೆ. ಇದರ ಪ್ರಕಾರ 16 ವರ್ಷದೊಳಗಿನ ಮಕ್ಕಳು ಸಾಮಾಜಿಕ ಜಾಲತಾಣಗಳನ್ನು ಬಳಸುವುದನ್ನು ನಿರ್ಬಂಧಿಸುವ ಕುರಿತು ಚಿಂತನೆ ನಡೆಸಿದೆ. ಈ ಪ್ರಸ್ತಾವನೆಯು ವಾಟ್ಸಪ್, ಫೇಸ್ ಬುಕ್, ಇನ್ಸ್ಟಾಗ್ರಾಮ್ ಸೇರಿದಂತೆ ಪ್ರಮುಖ ಆ್ಯಪ್ ಗಳನ್ನು ಒಳಗೊಂಡಿದ್ದು, ಡಿಜಿಟಲ್ ಜಗತ್ತಿನಲ್ಲಿ ಎಳೆಯ ಬಳಕೆದಾರರನ್ನು ರಕ್ಷಿಸುವ ಉದ್ದೇಶದಿಂದ ಚರ್ಚೆ ನಡೆಸುತ್ತಿದೆ ಎನ್ನುವ ಮಾಹಿತಿ ಲಭಿಸಿದೆ. ಕೇಂದ್ರ ಸರ್ಕಾರದ ಈ ನಿಯಮವು ಒಂದು ವೇಳೆ ಜಾರಿಗೆ ಬಂದಿದ್ದೇ ಆದಲ್ಲಿ ಪ್ರಮುಖ ಸಾಮಾಜಿಕ ಮಾಧ್ಯಮ ಮತ್ತು ಸಂವಹನ ವೇದಿಕೆಗಳನ್ನು ಮಕ್ಕಳು ಬಳಸುವ ವಿಧಾನಗಳಲ್ಲಿ ದೊಡ್ಡ ಬದಲಾವಣೆಗಳು ಬರಲಿವೆ ಎನ್ನಲಾಗಿದೆ. ಅಷ್ಟೇ ಅಲ್ಲದೆ ವಯಸ್ಸಿನ ದೃಢೀಕರಣ, ಪೋಷಕರ ಒಳಗೊಳ್ಳುವಿಕೆ ಮತ್ತು ಈ ನಿಯಮವನ್ನು ಹೇಗೆ ಜಾರಿಗೊಳಿಸಬೇಕು ಎನ್ನುವ ಹಲವಾರು ಪ್ರಶ್ನೆಗಳಿಗೆ ಉತ್ತರವನ್ನು ಸಹ ನೀಡಬೇಕಾಗುತ್ತದೆ. ಮಕ್ಕಳ ಆನ್ ಲೈನ್ ಸುರಕ್ಷತೆ ಮತ್ತು ಜವಾಬ್ದಾರಿಯುತ ಡಿಜಿಟಲ್ ಬಳಕೆಯ ಕುರಿತು ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ಈ ಪ್ರಸ್ತಾವನೆ ಮುಂಚೂಣಿಯಲ್ಲಿದೆ. ಇದರೊಂದಿಗೆ…

Read More

ಮಂಗಳೂರು: ಕೇರಳ ಲಾಟರಿಯಲ್ಲಿ 8 ಲಕ್ಷ ರೂ. ಬಹುಮಾನ ಬಂದಿದೆ. ಅದನ್ನು ಪಡೆದುಕೊಳ್ಳಲು ತೆರಿಗೆ ಹಣ ಕಟ್ಟಬೇಕು ಎಂದು ನಂಬಿಸಿ ಅಪರಿಚಿತರು 3 ಲಕ್ಷದ 81 ಸಾವಿರ ರೂ.ಹಣ ವರ್ಗಾಯಿಸಲು ತಿಳಿಸಿ ವಂಚನೆ ಮಾಡಿರುವ ಬಗ್ಗೆ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 42 ವರ್ಷದ ದೂರುದಾರರಿಗೆ ಆ.14ರಂದು ಅಪರಿಚಿತ ಸಂಖ್ಯೆಯಿಂದ ಕರೆ ಬಂದಿದೆ. ಕರೆ ಮಾಡಿದ ವ್ಯಕ್ತಿ ಕೇರಳ ಲಾಟರಿಯಲ್ಲಿ 8 ಲಕ್ಷ ರೂ. ಬಂದಿದೆ ಎಂದು ನಂಬಿಸಿ ಹಣವನ್ನು ಪಡೆಯಲು ತೆರಿಗೆ ಕಟ್ಟಬೇಕು ಎಂದು ತಿಳಿಸಿದ್ದಾನೆ. ಇದನ್ನು ನಂಬಿದ ದೂರುದಾರರು ಅಪರಿಚಿತ ವ್ಯಕ್ತಿ ಕಳುಹಿಸಿದ ಗೂಗಲ್ ಪೇ, ಫೋನ್ ಪೇ ಸ್ಕ್ಯಾನರ್ ಗಳಿಗೆ ಆ.15ರಿಂದ 26ರ ವರೆಗೆ ಹಂತ ಹಂತವಾಗಿ 3,81,300 ರೂ. ವರ್ಗಾಯಿಸಿದ್ದಾರೆ. ಮತ್ತೆ ಕರೆ ಮಾಡಿದ ಅಪರಿಚಿತ ಲಾಟರಿ ಹಣ ಡಬಲ್ ಆಗಿದ್ದು, ಪುನಃ ಟ್ಯಾಕ್ಸ್ ಕಟ್ಟಬೇಕು ಎಂದು ಒತ್ತಾಯಿಸಿದ್ದಾನೆ. ಆಗ ದೂರುದಾರರಿಗೆ ಅದೊಂದು ಮೋಸದ ಜಾಲ ಎಂದು ಗೊತ್ತಾಗಿ ಸೈಬರ್ ಹೆಲ್ಪ್ ಲೈನ್ ಗೆ ಕರೆ…

Read More

ಮೂಡಿಗೆರೆ: ವೃದ್ಧರೊಬ್ಬರ ಮೇಲೆ ಕಾಡುಕೋಣವೊಂದು ದಿಢೀರ್ ದಾಳಿ ನಡೆಸಿದ ಘಟನೆ ಮಧುಗುಂಡಿ ಗ್ರಾಮದಲ್ಲಿ ನಡೆದಿದೆ. ನಂಜೇಗೌಡ ಎನ್ನುವವರು ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಕಾಡುಕೋಣದ ದಾಳಿಯಿಂದಾಗಿ ನಂಜೇಗೌಡ ಅವರ ಕೈ ಕಾಲು ಮತ್ತು ತೊಡೆಯ ಭಾಗಕ್ಕೆ ಗಂಭೀರ ಗಾಯಗಳಾಗಿದ್ದು, ತಕ್ಷಣ ಅವರನ್ನು ಬಣಕಲ್ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆಯನ್ನು ಕೊಡಿಸಿದ್ದಾರೆ ಎನ್ನಲಾಗಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಸ್ಥಳಾಂತರಿಸಿದ್ದು, ಸ್ಥಿತಿ ಗಂಭೀರವಾಗಿದೆ ಎನ್ನುವ ಮಾಹಿತಿ ಲಭಿಸಿದೆ. ಇತ್ತೀಚಿನ ದಿನಗಳಲ್ಲಿ ಮಲೆನಾಡು ಭಾಗದಲ್ಲಿ ಕಾಡುಕೋಣಗಳ ಹಾವಳಿ ಹೆಚ್ಚಾಗಿದ್ದು, ಸ್ಥಳೀಯರಲ್ಲಿ ಆತಂಕದ ವಾತಾವರಣವನ್ನು ಸೃಷ್ಟಿಸಿದೆ. •ನರಸಿಂಹರಾಜಪುರ: ಮದ್ಯ ಸೇವಿಸಿ ಈಜಲು ತೆರಳಿದ್ದ ಯುವಕ ಸಾವು ನರಸಿಂಹರಾಜಪುರ: ಸ್ನೇಹಿತರೊಂದಿಗೆ ಈಜಲು ತೆರಳಿದ ಯುವಕನೊಬ್ಬ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ, ಮಂಗಳವಾರದಂದು ಭೈರನಕಟ್ಟೆ ಸಮೀಪದ ಭದ್ರಾ ಹಿನ್ನೀರಿನಲ್ಲಿ ನಡೆದಿದೆ. ಈಜಲು ತೆರಳಿದ್ದ ಸಂದರ್ಭದಲ್ಲಿ ಯುವಕನು ಮದ್ಯಪಾನ ಮಾಡಿರುವುದೇ ಈ ದುರಂತಕ್ಕೆ ಕಾರಣವಾಗಿದೆ ಎನ್ನುವ ಮಾಹಿತಿ ಲಭಿಸಿದೆ. ಮೃತ ಯುವಕನನ್ನು…

Read More

ತೀರ್ಥಹಳ್ಳಿ: ತೀರ್ಥಹಳ್ಳಿ ಜೀವ ವಿಮಾ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಂಗಳೂರು ಮೂಲದ ಯುವ ಎಲ್ಐಸಿ ಅಧಿಕಾರಿ ಶಮಿತ್ (40 ವರ್ಷ) ತೀರ್ಥಹಳ್ಳಿ ಬೆಟ್ಟ ಮಕ್ಕಿಯಲ್ಲಿ ತಾವು ವಾಸವಾಗಿದ್ದ ಬಾಡಿಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸೆಪ್ಟೆಂಬರ್ 1 ರ ಸಂಜೆ 5:00 ವೇಳೆಗೆ ವಿಚಾರ ಮನೆ ಮಾಲೀಕರ ಗಮನಕ್ಕೆ ಬಂದಿದೆ. ಶಮಿತ್ ಅವರ ಕುಟುಂಬದವರು ಮಂಗಳೂರಿನಲ್ಲಿದ್ದು ಮನೆಯಲ್ಲಿ ಅವರೊಬ್ಬರೇ ಇದ್ದರು ಎನ್ನಲಾಗಿದೆ. ಸೆ.3ರಂದು ಕಸ್ತೂರಿರಂಗನ್ ವರದಿ ಜಾರಿ ವಿರೋಧಿಸಿ ಸಭೆ ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನ 157 ಗ್ರಾಮಗಳಿಗೆ ಆತಂಕ ಉಂಟು ಮಾಡಿರುವ ಕಸ್ತೂರಿರಂಗನ್ ವರದಿ ಜಾರಿ ವಿರೋಧಿಸಿ ತೀರ್ಥಹಳ್ಳಿ ತಾಲೂಕಿನ ಎಲ್ಲಾ ಸಂಘ ಸಂಸ್ಥೆಗಳು ಎಲ್ಲಾ ರಾಜಕೀಯ ಪಕ್ಷಗಳು ಸೇರಿ ತಾಲೂಕಿನ ವತಿಯಿಂದ ಈ ವರದಿಯನ್ನು ಖಂಡಿಸುವ ಸಲುವಾಗಿ ಸೆಪ್ಟೆಂಬರ್ 3 ನೇ ತಾರೀಕು ಮಧ್ಯಾಹ್ನ 3 ಘಂಟೆಗೆ ತೀರ್ಥಹಳ್ಳಿ ಶಾಂತವೇರಿ ಗೋಪಾಲ ಗೌಡ ರಂಗಮಂದಿರದಲ್ಲಿ ಸಭೆಯನ್ನು ಕರೆಯಲಾಗಿದೆ ತಾಲೂಕಿನ ಎಲ್ಲಾ ರಾಜಕೀಯ ಪಕ್ಷಗಳ ಅಧ್ಯಕ್ಷರು ಮುಖಂಡರು ಪದಾಧಿಕಾರಿಗಳು ಹಾಗೂ…

Read More

ತೀರ್ಥಹಳ್ಳಿ: ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಬಸ್ಸು ಏಕಾಏಕಿ ಹಿಮ್ಮುಖವಾಗಿ ಚಳಿಸಿದ ಪರಿಣಾಮ 5ಕ್ಕೂ ಹೆಚ್ಚು ಕಾರುಗಳು ಜಕಂಗೊಂಡ ಘಟನೆ ತೀರ್ಥಹಳ್ಳಿ ಪಟ್ಟಣದಲ್ಲಿ ಬುಧವಾರ ಸಂಜೆ ನಡೆದಿದೆ. ಘಟನೆಯಲ್ಲಿ ಯಾರಿಗೂ ಗಾಯವಾಗಿಲ್ಲ. ತೀರ್ಥಹಳ್ಳಿ ಪಟ್ಟಣದ ಆಗುಂಬೆ ಬಸ್ ನಿಲ್ದಾಣದ ಬಳಿ ಘಟನೆ ನಡೆದಿದ್ದು ರಾಜಲಕ್ಷ್ಮಿ ಬಸ್ ಡ್ರೈವರ್ ವಿರುದ್ಧ ಆಕ್ರೋಶ ಕೇಳಿ ಬಂದಿದೆ. ತೀರ್ಥಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈಗಾಗಲೇ ನೂರಾರು ಜನ ಸೇರಿದ್ದಾರೆ. ಹಳೆಯ ಬಸ್ ಇದಾಗಿದ್ದು ಭೀಕರ ಅಪಘಾತ ನಡೆಯುವ ಸಾಧ್ಯತೆ ಇತ್ತು. ಪೊಲೀಸರು ಜನರನ್ನು ಚದುರಿಸಿದರು

Read More