ಗ್ರಾಮ ಪಂಚಾಯತ್ ಚುನಾವಣೆ ಸದ್ಯಕ್ಕೆ ಡೌಟು!
– ಮೀಸಲಾತಿ ಪ್ರಕಟಣೆಗೆ ಸಮಯ ಕೋರಿದ ರಾಜ್ಯ ಸರ್ಕಾರ
– ಪ್ರತಿ ಗ್ರಾಮದಲ್ಲೂ ಭಾರೀ ಪೈಪೋಟಿ ಸಾಧ್ಯತೆ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಬೆಂಗಳೂರು: ಗ್ರಾಮ ಪಂಚಾಯತ್ ಚುನಾವಣೆಗೆ ರಾಜ್ಯ ಸರ್ಕಾರ ಸಿದ್ಧ ಆಗುತ್ತಿದ್ದು, ಮೀಸಲಾತಿ ಪ್ರಕಟಣೆಗೆ ಸಮಯ ಕೋರಿದೆ. ರಾಜ್ಯದಲ್ಲಿ 5,950 ಗ್ರಾಮ ಪಂಚಾಯಿತಿಗಳಿದ್ದು ಅವುಗಳ ಸದಸ್ಯರ ಅಧಿಕಾರ ಅವಧಿ ಫೆಬ್ರವರಿಯಲ್ಲಿ ಮುಗಿದಿದೆ. ರಾಜ್ಯದಲ್ಲಿ ಒಟ್ಟು 96 ಸಾವಿರಕ್ಕೂ ಅಧಿಕ ಸದಸ್ಯರಿದ್ದಾರೆ. ಆದ್ದರಿಂದ, ಹೊಸದಾಗಿ ಜನಸಂಖ್ಯೆಗೆ ಅನುಗುಣವಾಗಿ ಒಟ್ಟು ಸದಸ್ಯರ ಸಂಖ್ಯೆ ಗುರುತಿಸಲು ನಾಲ್ಕು ವಾರ ಬೇಕು ಎಂದು ರಾಜ್ಯ ಸರ್ಕಾರ ಹೈಕೋರ್ಟ್ಗೆ ಲಿಖಿತ ಮನವಿ ಮಾಡಿದೆ. ಇದರಿಂದ ಚುನಾವಣೆ ಇನ್ನು ಎರಡು ತಿಂಗಳು ಡೌಟು.
ಗ್ರಾಮ ಪಂಚಾಯತ್ ಚುನಾವಣೆ ನಡೆಸಲು ಮೀಸಲಾತಿ ಪ್ರಕಟಣೆಗೆ ಸಮಯ ಬೇಕಿದೆ. ಜತೆಗೆ ಸ್ಥಳೀಯ ಸಂಸ್ಥೆ ಚುನಾವಣೆ ಇರುವುದರಿಂದ ಯಾವಾಗ ದಿನಾಂಕ ನಿಗದಿ ಆಗಲಿದೆ ಎಂಬ ಅನುಮಾನ ಮೂಡಿದೆ. ಅಲ್ಲದೆ ಮಳೆಗಾಲದಲ್ಲಿ ಚುನಾವಣೆ ನಡೆಸಲು ಸಾಧ್ಯ ಇಲ್ಲ. ಅವಧಿ ಮುಗಿದ ಬಳಿಕ 6 ತಿಂಗಳು ಸಮಯ ಇರುವುದರಿಂದ ಮಳೆ ಮುಗಿದ ಬಳಿಕ ಚುನಾವಣೆ ನಡೆಯುವ ಸಾಧ್ಯತೆ ಇದೆ.
ಪ್ರತಿ ಗ್ರಾಮದಲ್ಲೂ ಭಾರೀ ಪೈಪೋಟಿ ಸಾಧ್ಯತೆಗ್ರಾಮ ಪಂಚಾಯತ್ ಚುನಾವಣೆ ಸ್ಥಳೀಯವಾಗಿ ಮಹತ್ವದ ಚುನಾವಣೆ. ಈ ನಿಟ್ಟಿನಲ್ಲಿ ಸ್ಥಳೀಯರು ಚುನಾವಣೆ ನಿಲ್ಲಲು ಭಾರೀ ಕಸರತ್ತು ನಡೆಸುತ್ತಿದ್ದಾರೆ. ಅಲ್ಲದೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಬೆಂಬಲಿತರು ಸಿದ್ಧತೆ ನಡೆಸುತ್ತಿದ್ದಾರೆ. ಇಲ್ಲಿ ಪಕ್ಷದ ಜತೆಗೆ ವಯುಕ್ತಿಕ ವರ್ಚಸ್ಸು, ಸೇವೆ, ಹೆಸರು ಕೈ ಹಿಡಿಯಲಿದೆ.








