ಶುರುವಾಯ್ತು ಐಪಿಎಲ್ ರಂಗು..!
– ಬೆಂಗಳೂರಲ್ಲೇ ಮೊದಲ ಮ್ಯಾಚ್: ಅಭಿಮಾನಿಗಳ ಕಾತುರ
– ದೇಶದ ಮಹಾ ನಗರಗಳಲ್ಲಿ ಪಂದ್ಯ: ಬೆಟ್ಟಿಂಗ್ ಬ್ಯಾನ್..!
– 11 ಮಂದಿ ಮೃತರ ನೆನಪಲ್ಲಿ 11 ಕುರ್ಚಿ ಖಾಲಿ!
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಕ್ರಿಕೆಟ್ ಪ್ರೇಮಿಗಳ ಮೆಚ್ಚಿನ ಕ್ರಿಕೆಟ್ ಪಂದ್ಯಾವಳಿ ಐಪಿಎಲ್ 19ನೇ ಆವೃತ್ತಿಗೆ ಕ್ಷಣಗಣನೆ ಆರಂಭವಾಗಿದೆ., ದೇಶ ವಿದೇಶದ ನೂರಾರು ಸ್ಟಾರ್ ಆಟಗಾರರು ಈ ಪ್ರತಿಷ್ಠಿತ ಟೂರ್ನಿಯಲ್ಲಿ ಆಟ ಆಡಲಿದ್ದಾರೆ.
ಐಪಿಎಲ್ ಮೊದಲ 20 ಪಂದ್ಯಗಳ ವಿವರವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) ಬಿಡುಗಡೆಗೊಳಿಸಿದೆ. ಮಾರ್ಚ್ 28ರಂದು ಐಪಿಎಲ್ ಗೆ ಅದ್ಧೂರಿ ಚಾಲನೆ ದೊರೆಯಲಿದ್ದು, ಈ ಬಾರಿ ಐಪಿಎಲ್ ಉದ್ಘಾಟನಾ ಪಂದ್ಯ ಕರ್ನಾಟಕದ ರಾಜಧಾನಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ಸಂಜೆ 7:30ಕ್ಕೆ ನಡೆಯಲಿದೆ. ಐಪಿಎಲ್ ನೂರಾರು ಕೋಟಿ ವ್ಯವಹಾರ. ಆದರೆ ಜನ ಬೆಟ್ಟಿಂಗ್ ಗೀಳಿಗೆ ಬೀಳುವ ಸಾಧ್ಯತೆ ಇದೆ. ಪೊಲೀಸ್ ಹಾಗೂ ಭಾರತ ಸರ್ಕಾರ ಇಂತಹ ಚಟುವಟಿಕೆ ಮೇಲೆ ನಿಗಾ ಇಡಬೇಕಿದೆ.
ಮೊದಲ ಪಂದ್ಯದಲ್ಲೇ ಆರ್.ಸಿ.ಬಿ ಆಟ!
ಐಪಿಎಲ್ ಕ್ರಿಕೆಟ್ ನ ಮೊದಲ ಪಂದ್ಯವು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ರೈಸರ್ಸ್ ಹೈದರಾಬಾದ್ ನಡುವೆ ನಡೆಯಲಿದೆ. ಬಳಿಕ ಏಪ್ರಿಲ್ 5ರ ಭಾನುವಾರದಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಚೆನ್ನೈ ಸೂಪರ್ ಕಿಂಗ್ಸ್ ಜೊತೆಗೆ ಸೆಣಸಾಡಲಿದೆ. ಅಂತಿಮ ಪಂದ್ಯ 31 ಮೇ 2026ರಂದು ನಡೆಯಲಿದೆ. ಸುಮಾರು 84 ಪಂದ್ಯಗಳಿದ್ದು, ಪ್ರತಿಯೊಂದು ತಂಡ ಸುಮಾರು 14 ಲೀಗ್ ಪಂದ್ಯಗಳನ್ನು ಆಡಲಿದೆ. ಅಗ್ರ 4 ತಂಡಗಳು ಪ್ಲೇಆಫ್ಗೆ ಪ್ರವೇಶಿಸುತ್ತವೆ. ದೇಶದ ವಿವಿಧ ನಗರಗಳಾದ ಬೆಂಗಳೂರು, ಮುಂಬೈ, ದೆಹಲಿ, ಚೆನ್ನೈ, ಅಹಮದಾಬಾದ್ ಅಲ್ಲಿ ಪಂದ್ಯಗಳು ನಡೆಯಲಿದ್ದು ಕ್ರಿಕೆಟ್ ಅಭಿಮಾನಿಗಳಿಗೆ ದೊಡ್ಡ ಕ್ರೀಡಾ ಹಬ್ಬವಾಗಲಿದೆ.
11 ಜನರ ನೆನಪಿಗೆ 11 ಕುರ್ಚಿ ಖಾಲಿ!
ಕಳೆದ ವರ್ಷ 18 ವರ್ಷದ ಬಳಿಕ ಕಪ್ ಗೆದ್ದ ಆರ್.ಸಿ.ಬಿ ಸಂಭ್ರಮಾಚರಣೆ ವೇಳೆ 11 ಮಂದಿ ಅಭಿಮಾನಿಗಳು ಕಾಲು ತುಳಿತಕ್ಕೆ ಬಲಿಯಾದ ಘಟನೆ ನಡೆದಿತ್ತು. ಅವರ ಸ್ಮರಣಾರ್ಥ 11 ಕುರ್ಚಿಗಳನ್ನು ಖಾಲಿ ಬಿಡಲಾಗಿದೆ. ಮೆಟ್ರೋ, ಬಸ್, ವಾಹನ ಟ್ರಾಫಿಕ್ ಇರಲಿದೆ.
ಭಾಗವಹಿಸುವ ತಂಡಗಳು
ರಾಯಲ್ ಚಾಲೆಂಜರ್ಸ್ ಬೆಂಗಳೂರು
ಚೆನೈ ಸೂಪರ್ ಕಿಂಗ್ಸ್
ಮುಂಬೈ ಇಂಡಿಯನ್ಸ್
ಕೊಲ್ಕತ್ತಾ ನೈಟ್ ರೈಡರ್ಸ್
ಡೆಲ್ಲಿ ಕ್ಯಾಪಿಟಲ್ಸ್
ಪಂಜಾಬ್ ಕಿಂಗ್ಸ್
ರಾಜಸ್ತಾನ್ ರಾಯಲ್ಸ್
ಸನ್ ರೈಸರ್ಸ್ ಹೈದರಾಬಾದ್
ಗುಜರಾತ್ ಟೈಟಾನ್ಸ್
ಲಕ್ನೌ ಸೂಪರ್ ಗೈಟ್ಸ್








