1 ನೇ ತರಗತಿ ದಾಖಲಾತಿಗೆ 6 ವರ್ಷದ ಮಿತಿ ಸಡಿಲಿಕೆ
– ರಾಜ್ಯ ಸರ್ಕಾರ ಆದೇಶ: ವಿಧಾನ ಸಭೆಯಲ್ಲಿ ಮಧು ಬಂಗಾರಪ್ಪ ಪ್ರಸ್ತಾಪ
– ಎರಡು ತಿಂಗಳು ಮಾತ್ರ ಸಡಿಲಿಕೆ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಬೆಂಗಳೂರು: 2026-27 ನೇ ಸಾಲಿಗೆ 1 ನೇ ತರಗತಿಯ ದಾಖಲಾತಿಗೆ ಕಾದು ಕುಳಿತ್ತಿದ್ದ ಪೋಷಕರಿಗೆ ರಾಜ್ಯ ಸರ್ಕಾರ ಬಿಗ್ ರಿಲೀಫ್ ನೀಡಿದ್ದು, ದಾಖಲಾತಿಗೆ ಆರು ವರ್ಷದ ಮಿತಿ ಸಡಿಲಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಬಗ್ಗೆ ವಿಧಾನ ಮಂಡಲದ ಅಧಿವೇಶನದಲ್ಲಿ ಮಹತ್ವದ ಘೋಷಣೆ ಮಾಡಿರುವ ಶಿಕ್ಷಣ ಸಚಿವ ಮಧು ಬಂಗಾರಪ್ಪ ಒಂದನೇ ತರಗತಿಯ ದಾಖಲಾತಿಗೆ ಇದ್ದ ಆರು ವರ್ಷದ ಮಿತಿಯನ್ನು ಎರಡು ತಿಂಗಳು ಸಡಿಲಿಕೆ ಮಾಡಲಾಗುವುದು ಎಂದು ಘೋಷಣೆ ಮಾಡಿದ್ದಾರೆ.








