ನಮ್ಮೂರ್ ಎಕ್ಸ್ಪ್ರೆಸ್ ಸ್ಪೋರ್ಟ್ಸ್ ನ್ಯೂಸ್
ಐಪಿಎಲ್ – 2025
* ನಾಳೆಯಿಂದ ಪುನರಾರಂಭಗೊಳ್ಳಲಿದೆ ಐಪಿಎಲ್ -2025
* ಪ್ಲೇ ಆಫ್ ರೇಸ್ನಲ್ಲಿರೋ ಏಳು ತಂಡಗಳು
NAMMMUR EXPRESS SPORTS NEWS
ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯಿಂದಾಗಿ ಐಪಿಎಲ್ – 2025ರ ಪಂದ್ಯಗಳನ್ನು ಒಂದು ವಾರ ಸ್ಥಗಿತಗೊಳಿಸಲಾಗಿತ್ತು. ಇದೀಗ ಮೇ 17ರಿಂದ ಮತ್ತೆ ಐಪಿಎಲ್ ಆರಂಭವಾಗಲಿದ್ದು, ಎಲ್ಲಾ ತಂಡಗಳು ಸಿದ್ಧತೆ ಆರಂಭಿಸಿವೆ. ಈಮಧ್ಯೆ, ತವರಿಗೆ ಮರಳಿರುವ ಕೆಲವು ವಿದೇಶಿ ಆಟಗಾರರ ಅಲಭ್ಯತೆ ಕುರಿತು ಫ್ರಾಂಚೈಸಿಗಳಿಗೆ ಇದೀಗ ತಲೆನೋವು ಶುರುವಾಗಿದೆ.
2025ನೇ ಆವೃತ್ತಿಯಲ್ಲಿ ಟ್ರೋಫಿಯ ಕನಸು ಏಳು ತಂಡಗಳಿಗೆ ಇನ್ನೂ ಜೀವಂತವಾಗಿದೆ. ಇದೀಗ ಪ್ಲೇಆಫ್ ತಲುಪಲು ಯಾವ ತಂಡಗಳು ಎಷ್ಟೆಷ್ಟು ಅಂಕ ಗಳಿಸಿದೆ ಎನ್ನುವ ಕುರಿತು ಮಾಹಿತಿ ಇಲ್ಲಿದೆ. ಐಪಿಎಲ್ 2025 ಪ್ಲೇಆಫ್ ತಲುಪಲು 17 ಅಂಕಗಳನ್ನು ಗಳಿಸಬೇಕಿದೆ.
* ಗುಜರಾತ್ ಟೈಟಾನ್ಸ್ – 16 ಅಂಕಗಳು, NRR 0.793
* ಆರ್ಸಿಬಿ – 16 ಅಂಕಗಳು, NRR 0.482
* ಪಂಜಾಬ್ ಕಿಂಗ್ಸ್ – 15 ಅಂಕಗಳು, NRR 0.376
* ಮುಂಬೈ ಇಂಡಿಯನ್ಸ್ – 14 ಅಂಕಗಳು, NRR 1.156
* ಡೆಲ್ಲಿ ಕ್ಯಾಪಿಟಲ್ಸ್ – 13 ಅಂಕಗಳು, NRR 0.362
* ಕೋಲ್ಕತ್ತಾ ನೈಟ್ ರೈಡರ್ಸ್ – 11 ಅಂಕಗಳು, NRR 0.193
* ಲಕ್ನೋ ಸೂಪರ್ ಜೈಂಟ್ಸ್ – 10 ಅಂಕಗಳು, NRR -0.469
ಆರ್ಸಿಬಿ ತಂಡಕ್ಕೆ ಮರಳಿದ ಲಿವಿಂಗ್ ಸ್ಟೋನ್ ಮತ್ತು ರೊಮೊರಿಯೋ ಶೆಫರ್ಡ್ !
ನಾಳೆಯಿಂದ ಪುನರಾರಂಭಗೊಳ್ಳಲಿರುವ ಐಪಿಎಲ್ ಪಂದ್ಯದ ಮೊದಲ ಪಂದ್ಯ ಆರ್ಸಿಬಿ ಹಾಗೂ ಕೊಲ್ಕತ್ತಾ ತಂಡಗಳ ನಡುವೆ ನಡೆಯಲಿದ್ದು,ಈ ನಡುವೆ ಸ್ವದೇಶಕ್ಕೆ ಮರಳಿದ್ದ ರೊಮಾರಿಯೋ ಶೆಫರ್ಡ್ ಮತ್ತು ಲಿಯಾಮ್ ಲಿವಿಂಗ್ ಸ್ಟೋನ್ ಆರ್ ಸಿಬಿ ತಂಡ ಸೇರಿಕೊಳ್ಳಲಿದ್ದಾರೆ. ಇಡೀ ಐಪಿಎಲ್ ಟೂರ್ನಿಯಲ್ಲಿ ರೊಮಾರಿಯೋ ಶೆಫರ್ಡ್ ತಂಡದಲ್ಲಿರಲಿದ್ದಾರೆ. ಬಳಿಕ ಅವರ ರಾಷ್ಟ್ರೀಯ ತಂಡದ ಸೇವೆಗೆ ನಿಯೋಜನೆಯಾಗಲಿದ್ದಾರೆ ಎಂದು ಹೇಳಲಾಗಿದ್ದು, ಲಿವಿಂಗ್ ಸ್ಟೋನ್ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗದ ಕಾರಣ ಆರ್ ಸಿಬಿಯಲ್ಲಿ ಮುಂದುವರೆಯಲಿದ್ದಾರೆ ಎಂದು ಹೇಳಲಾಗಿದೆ.
ಉಳಿದಂತೆ ಜೇಕ್ ಫ್ರೇಸರ್-ಮೆಕ್ಗುರ್ಕ್ ಬದಲಿಗೆ ಮುಸ್ತಾಫಿಜುರ್ ರೆಹಮಾನ್ ಅವರನ್ನು ತಾತ್ಕಾಲಿಕ ಬದಲಿ ಆಟಗಾರ ಎಂದು ಪರಿಗಣಿಸಲಾಗಿದೆ ಎಂದು ಆರ್ ಸಿಬಿ ತಂಡದ ಮೂಲಗಳು ತಿಳಿಸಿವೆ.
ಈ ನಡುವೆ ಗಾಯಗೊಂಡು ಹೊರಗುಳಿದಿರುವ ದೇವದತ್ ಪಡಿಕ್ಕಲ್ ಬದಲಿಗೆ ಕನ್ನಡಿಗ ಮಯಾಂಕ್ ಅಗರ್ವಾಲ್ ಈಗಾಗಲೇ ತಂಡ ಸೇರಿಕೊಂಡಿದ್ದು, ನಾಯಕ ರಜತ್ ಪಾಟಿದಾರ್ ಗಾಯದ ಸಮಸ್ಯೆ ತಂಡಕ್ಕೆ ತಲೆನೋವಾಗಿದೆ.
ಮತ್ತೊಂದೆಡೆ ಹೇಜಲ್ ವುಡ್ ಬದಲಿಗೆ ಶ್ರೀಲಂಕಾದ ಬೇಬಿ ಮಲಿಂಗಾ ಎಂದೇ ಖ್ಯಾತಗಳಿಸಿರುವ ನುವಾನ್ ತುಷಾರ ಆರ್ ಸಿಬಿ ತಂಡ ಸೇರಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಇದಲ್ಲದೇ ನ್ಯೂಜಿಲೆಂಡ್ ಬೌಲರ್ ಮ್ಯಾಟ್ ಹೆನ್ರಿ ಮತ್ತು ಫಿಲ್ ಸಾಲ್ಟ್ ಕೂಡ ಆರ್ ಸಿಬಿ ಪರ ಆಡಲಿದ್ದಾರೆ ಎಂದು ಹೇಳಲಾಗಿದೆ.








