ನಮ್ಮೂರ್ ಎಕ್ಸ್ಪ್ರೆಸ್ ಸ್ಪೋರ್ಟ್ಸ್ ನ್ಯೂಸ್
ಐಪಿಎಲ್-2025
* ಕೆಕೆಅರ್ಗೆ ಒಂದು ರನ್ ಜಯ,ಪ್ಲೇ ಆಫ್ ಕನಸು ಜೀವಂತ
* ಪಂಜಾಬ್ ಆರ್ಭಟಕ್ಕೆ ಲಖನೌ ನಿರುತ್ತರ
NAMMMUR EXPRESS SPORTS NEWS
* ಕೆಕೆಅರ್ಗೆ ಒಂದು ರನ್ ಜಯ,ಪ್ಲೇ ಆಫ್ ಕನಸು ಜೀವಂತ
ಕೊಲ್ಕತ್ತಾ:ರಾಜಸ್ಥಾನ ರಾಯಲ್ಸ್ ವಿರುದ್ಧ ನಡೆದ ರೋಮಾಂಚಕಾರಿ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಕೊನೆಯ ಎಸೆತದಲ್ಲಿ 1 ರನ್ನಿಂದ ಜಯ ಸಾಧಿಸಿದೆ.ತಮ್ಮ ತವರು ಮೈದಾನವಾದ ಈಡನ್ ಗಾರ್ಡನ್ಸ್ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ 206 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಕೊನೆಯವರೆಗೂ ಹೋರಾಟ ನೀಡಿದ ರಾಜಸ್ಥಾನ ತಂಡ 205 ರನ್ ಕಲೆಹಾಕಿ ಕೇವಲ 1 ರನ್ನಿಂದ ಸೋಲೊಪ್ಪಿಕೊಂಡಿತು. ರಾಜಸ್ಥಾನ್ ಪರ ರಿಯಾನ್ ಪರಾಗ್ 95 ರನ್ಗಳ ನಾಯಕನ ಇನ್ನಿಂಗ್ಸ್ ಆಡಿದರಾದರೂ ತಂಡವನ್ನು ಗೆಲುವಿನ ದಡ ಮುಟ್ಟಿಸಲು ಸಾಧ್ಯವಾಗಲಿಲ್ಲ. ಈ ಗೆಲುವಿನೊಂದಿಗೆ ಕೋಲ್ಕತ್ತಾ ತಂಡ ಆಡಿರುವ 11 ಪಂದ್ಯಗಳಲ್ಲಿ 11 ಅಂಕಗಳನ್ನು ಸಂಪಾದಿಸಿದ್ದು, ತನ್ನ ಪ್ಲೇ ಆಫ್ಗೆ ಅರ್ಹತೆ ಪಡೆಯುವ ಕನಸನ್ನು ಇನ್ನೂ ಜೀವಂತವಾಗಿರಿಸಿಕೊಂಡಿದೆ.
* ಪಂಜಾಬ್ ಆರ್ಭಟಕ್ಕೆ ಲಖನೌ ನಿರುತ್ತರ
ಪಂಜಾಬ್: ಕಿಂಗ್ಸ್ ಲಖನೌ ಸೂಪರ್ ಜೈಂಟ್ಸ್ ಹಾಗೂ ಪಂಜಾಬ್ ವಿರುದ್ಧ ನಡೆದ ಪಂದ್ಯದಲ್ಲಿ ಪಂಜಾಬ್ 37 ರನ್ಗಳ ಭರ್ಜರಿ ಜಯ ಸಾಧಿಸಿ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದೆ. ಧರ್ಮಾಶಾಲಾದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ 236 ರನ್ಗಳ ಬೃಹತ್ ಮೊತ್ತ ದಾಖಲಿಸಿತ್ತು. 237 ರನ್ಗಳ ಗುರಿ ಬೆನ್ನಟ್ಟಿದ ಲಖನೌ ಸೂಪರ್ ಜೈಂಟ್ಸ್ ಆಯುಷ್ ಬದೋನಿ (74) ಹಾಗೂ ಅಬ್ದುಲ್ (45) ಅತ್ಯುತ್ತಮ ಪ್ರದರ್ಶನದ ಹೊರತಾಗಿಯೂ 20 ಓವರ್ಗಳಲ್ಲಿ ವಿಕೆಟ್ ಕಳೆದುಕೊಂಡು 199 ರನ್ಗಳಿಸಿದಷ್ಟೇ ಶಕ್ತವಾಯಿತು.








