ನಮ್ಮೂರ್ ಎಕ್ಸ್ಪ್ರೆಸ್ ಸ್ಪೋರ್ಟ್ಸ್ ನ್ಯೂಸ್
ಐಪಿಎಲ್ -2025
* ಮುಂಬೈ ವಿರುದ್ಧ ಗೆಲುವಿನ ಚಾಲೆಂಜ್ ಗೆದ್ದ ಆರ್ಸಿಬಿ
* ಕೊಹ್ಲಿ,ಪಟಿದಾರ್,ಕೃನಾಲ್ ಅದ್ಭುತ ಆಟ
NAMMMUR EXPRESS SPORTS NEWS
ಮುಂಬೈ: ಕಳೆದ 10 ವರ್ಷಗಳಲ್ಲಿ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಗೆಲುವಿಗೆ ಹಾತೊರೆಯುತ್ತಿದ್ದ ಆರ್ಸಿಬಿಗೆ ಕೊನೆಗೂ ಯಶಸ್ಸು ಸಿಕ್ಕಿದೆ. ಸೋಮವಾರ ಮುಂಬೈ ಇಂಡಿಯನ್ಸ್ ವಿರುದ್ಧ ಪಂದ್ಯದಲ್ಲಿ ಆರ್ಸಿಬಿ 12 ರನ್ ಗೆಲುವು ಸಾಧಿಸಿದೆ. ಇದು 2015ರ ಬಳಿಕ ವಾಂಖೆಡೆಯಲ್ಲಿ ಆರ್ಸಿಬಿಗೆ ಸಿಕ್ಕ ಮೊದಲ ಜಯ. ಆರ್ಸಿಬಿ ಈ ಬಾರಿ ಆಡಿದ 4ರಲ್ಲಿ 3 ಗೆದ್ದರೆ, ಮುಂಬೈ ತಂಡ 5ರಲ್ಲಿ 4ನೇ ಸೋಲಿನ ಮುಖಭಂಗ ಅನುಭವಿಸಿತು.
ಮೊದಲು ಬ್ಯಾಟ್ ಮಾಡಿದ ಆರ್ಸಿಬಿ ಕೋಹ್ಲಿ,ನಾಯಕ ಪಟಿದಾರ್,ಜಿತೇಶ್ ರ ಆಕರ್ಷಕ ಆಟದಿಂದ 5 ವಿಕೆಟ್ಗೆ 221 ರನ್ ಬೃಹತ್ ಮೊತ್ತ ಕಲೆಹಾಕಿತು. ದೊಡ್ಡ ಗುರಿ ಬೆನ್ನತ್ತಿದ ಮುಂಬೈ 9 ವಿಕೆಟ್ ಗೆ 209 ರನ್ ಗಳಿಸಿ ಸೋಲೊಪ್ಪಿಕೊಂಡಿತು. 12 ಓವರಲ್ಲಿ 99 ರನ್ಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ತಿಲಕ್ 29
ಎಸೆತಕ್ಕೆ 56, ಹಾರ್ದಿಕ್ 15 ಎಸೆತಗಳಲ್ಲಿ 42 ರನ್ ಗಳಿಸಿ ತಂಡದ ಗೆಲುವಿನ ಆಸೆ ಜೀವಂತವಾಗಿರಿಸಿಕೊಂಡರು. ಆದರೆ 18, 19ನೇ ಓವರಲ್ಲಿ 4 ಎಸೆತಗಳ ಅಂತರದಲ್ಲಿ ಇಬ್ಬರೂ ವಿಕೆಟ್ ಒಪ್ಪಿಸಿ ತಂಡ ಸೋಲಿನತ್ತ ಮುಖಮಾಡಿತು.
* ಆರ್ಸಿಬಿ ಬ್ಯಾಟಿಂಗ್ ಅಬ್ಬರ
ಇದಕ್ಕೂ ಮುನ್ನ ಆರ್ಸಿಬಿ ತಂಡ ಮುಂಬೈನಲ್ಲಿ ಆರಂಭದಲ್ಲೇ ಅಬ್ಬರಿಸಿತು. ವಿರಾಟ್ ಕೊಹ್ಲಿ 42 ಎಸೆತಕ್ಕೆ 67, ದೇವದತ್ 37 ರನ್ ಗಳಿಸಿ ಔಟಾದರೆ, ನಾಯಕ ರಜತ್ ಪಾಟೀದಾರ್ 32 ಎಸೆತಗಳಲ್ಲಿ 64, ಜಿತೇಶ್ ಶರ್ಮಾ 19 ಎಸೆತಕ್ಕೆ ಔಟಾಗದೆ 40 ರನ್ ಸಿಡಿಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು.
* ಗರಿಷ್ಠ ವಿಕೆಟ್ ಭುವಿ ನಂ.1 ವೇಗಿ
ಐಪಿಎಲ್ನಲ್ಲಿ ಗರಿಷ್ಠ ವಿಕೆಟ್ ಕಿತ್ತ ವೇಗದ ಬೌಲರ್ ಪಟ್ಟಿಯಲ್ಲಿ ಭುವನೇಶ್ವರ್ ಅಗ್ರ ಸ್ಥಾನಕ್ಕೇರಿದ್ದಾರೆ. 179 ಪಂದ್ಯಗಳಲ್ಲಿ 184 ವಿಕೆಟ್ ಕಿತ್ತಿರುವ ಭುವನೇಶ್ವರ್, ಡೇಮ್ಸ್ ಬ್ರಾವೋ(183 ವಿಕೆಟ್) ರನ್ನು ಹಿಂದಿಕ್ಕಿದರು. ಒಟ್ಟಾರೆ ವಿಕೆಟ್ಗಳಿಕೆಯಲ್ಲಿ ಭುವಿ 3ನೇ ಸ್ಥಾನದಲ್ಲಿದ್ದಾರೆ. ಚಹಲ್ 206, ಚಾವ್ಲಾ 192 ವಿಕೆಟ್ ಪಡೆದಿದ್ದಾರೆ.
* 13000 ಟಿ20 ರನ್ ಕ್ಲಬ್ಗೆ ವಿರಾಟ್
ರನ್ ಮೆಷಿನ್ ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್ನಲ್ಲಿ ಮತ್ತೊಂದು ದಾಖಲೆ ಬರೆದಿದ್ದಾರೆ. ಅವರು 13000 ರನ್ ಮೈಲುಗಲ್ಲು ಸಾಧಿಸಿದ್ದು, ಈ ಸಾಧನೆ ಮಾಡಿದ ಭಾರತದ ಮೊದಲ ಬ್ಯಾಟರ್ ಹಾಗೂ
ವಿಶ್ವದ 5ನೇ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ನಿನ್ನೆ ನಡೆದ ಮುಂಬೈ ವಿರುದ್ಧದ ಪಂದ್ಯ ದಲ್ಲಿ 17 ರನ್ ಗಳಿಸಿದ್ದಾಗ ಅವರು ಈ ರೆಕಾರ್ಡ್ ಮಾಡಿದ್ದಾರೆ. ಪಂದ್ಯದಲ್ಲಿ ಅವರು 42 ಎಸೆತಗಳಲ್ಲಿ 8
ಬೌಂಡರಿ, 2 ಸಿಕ್ಸರ್ಗಳೊಂದಿಗೆ
67 ರನ್ ಬಾರಿಸಿದರು. ಇದರೊಂದಿಗೆ ಟಿ20ಯಲ್ಲಿ ಅವರ 13050 ರನ್ ಗಳಿಸಿದಂತಾಗಿದೆ. ಅವರು 403 ಪಂದ್ಯಗಳ 386 ಇನ್ನಿಂಗ್ಸ್ಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಈ ಪೈಕಿ ಐಪಿಎಲ್ನಲ್ಲಿ 8168 ರನ್ ಕಲೆಹಾಕಿದ್ದಾರೆ. ವೆಸ್ಟ್ ಇಂಡೀಸ್ನ ದಿಗ್ಗಜ ಕ್ರಿಕೆಟಿಗ ಕ್ರಿಸ್ ಗೇಲ್ 14562 ರನ್ ಗಳಿಸಿದ್ದು, ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಹೇಲ್ಸ್ 13610, ಶೋಯೆಬ್ ಮಲಿಕ್
13557, ಪೊಲ್ಲಾರ್ಡ್ 13537 ರನ್ ಕಲೆಹಾಕಿದ್ದಾರೆ.








