ನಮ್ಮೂರ್ ಎಕ್ಸ್ಪ್ರೆಸ್ ಸ್ಪೋರ್ಟ್ಸ್ ನ್ಯೂಸ್
ಐಪಿಎಲ್ – 2025
* ರಾಜಸ್ಥಾನ್ ಮೇಲೆ ರಾಯಲ್ ಸವಾರಿ ಮಾಡಿದ ಟೈಟಾನ್ಸ್
* ಇಂದು ತನ್ನ ತವರಲ್ಲೇ ಆರ್ಸಿಬಿಗೆ ಡೆಲ್ಲಿ ಸವಾಲ್
NAMMMUR EXPRESS SPORTS NEWS
ಅಹಮದಾಬಾದ್: ಐಪಿಎಲ್ -18 ನೇ ಆವೃತ್ತಿಯಲ್ಲಿ ಗುಜರಾತ್ ಟೈಟಾನ್ಸ್ 4ನೇ ಗೆಲುವು ಸಾಧಿಸಿದೆ, ಗುಜರಾತ್ ಟೈಟಾನ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ನಡುವೆ ನಡೆದ ಪಂದ್ಯದಲ್ಲಿ ರಾಜಸ್ಥಾನ 3ನೇ ಸೋಲು ಕಂಡಿದೆ, ಪಂದ್ಯದಲ್ಲಿ ಗುಜರಾತ್ 58 ರನ್ಗಳ ಭರ್ಜರಿ ಗೆಲುವು ದಾಖಲಿಸಿ,ಪಾಂಯಿಂಟ್ ಟೇಬಲ್ನಲ್ಲಿ ಅಗ್ರ ಸ್ಥಾನಕ್ಕೇರಿದೆ.
ಮೊದಲು ಬ್ಯಾಟ್ ಮಾಡಿದ ಗುಜರಾತ್ ಸಾಯ್ ಸುದರ್ಶನ್ 53 ಎಸೆತಕ್ಕೆ 82, ಬಟ್ಲರ್ 36, ಶಾರುಖ್ ಖಾನ್ 36, ರಾಹುಲ್ ತೆವಾಟಿಯಾ24 ರನ್ಗಳ ಮೂಲಕ 6 ವಿಕೆಟ್ ನಷ್ಟಕ್ಕೆ 217 ರನ್ ಕಲೆಹಾಕಿತು. ದೊಡ್ಡ ಗುರಿ ಬೆನ್ನತ್ತಿದ ರಾಯಲ್ಸ್ ತನ್ನ ಬ್ಯಾಟಿಂಗ್ ವೈಫಲ್ಯದಿಂದ 19.2 ಓವರ್ಗಳಲ್ಲಿ 159 ರನ್ಗೆ ಆಲೌಟಾಯಿತು. ಹೆಟ್ಮೇಯರ್ (32 ಎಸೆತಕ್ಕೆ 52), ಸಂಜು ಸ್ಯಾಮ್ಸನ್ರ (41) ಹೋರಾಟ ವ್ಯರ್ಥವಾಯಿತು.12 ರನ್ಗೆ 2 ವಿಕೆಟ್ ಕಳೆದುಕೊಂಡಿದ್ದ ತಂಡ, ಪವರ್ -ಪ್ಲೇ ಅಂತ್ಯಕ್ಕೆ 57 ರನ್ ಗಳಿಸಿತ್ತು. ಆದರೆ 7ನೇ ಓವರ್ನಲ್ಲಿ ರಿಯಾನ್ (26) ಔಟಾದ ಬಳಿಕ ತಂಡ ಚೇತರಿಸಿಕೊಳ್ಳಲಿಲ್ಲ. ಪ್ರಸಿದ್ ಕೃಷ್ಣ 3 ವಿಕೆಟ್ ಪಡೆದರು.
* ಇಂದು ತನ್ನ ತವರಲ್ಲೇ ಆರ್ಸಿಬಿಗೆ ಡೆಲ್ಲಿ ಸವಾಲ್
ಬೆಂಗಳೂರು: ಇಂದು ಆರ್ಸಿಬಿ ಐಪಿಎಲ್ -2025 ರ ತನ್ನ 5 ನೇ ಪಂದ್ಯವನ್ನಾಡಲಿದೆ. ಇಂದು ನಡೆಯುವ ಪಂದ್ಯದಲ್ಲಿ ಆರ್ಸಿಬಿ ಡೆಲ್ಲಿ ತಂಡವನ್ನು ಎದುರಿಸಲಿದೆ. ಕೋಲ್ಕತ್ತಾ,ಮುಂಬೈ,ಚೆನ್ನೈನಲ್ಲಿ ಗೆದ್ದಿರುವ ಆರ್ಸಿಬಿ ತವರಲ್ಲಾಡಿದ ಒಂದು ಪಂದ್ಯ ಸೋತಿದ್ದು ಈಗ ಮತ್ತೆ ತವರಿನ ಪಂದ್ಯ ಗೆಲ್ಲಲೇ ಬೇಕಾದ ಪ್ರತಿಷ್ಠೆ ಎದುರಾಗಿದೆ. ಸತತ 3 ಪಂದ್ಯಗಳನ್ನು ಗೆದ್ದಿರುವ ಡೆಲ್ಲಿ ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದೆ.
ಆರ್ಸಿಬಿ ಬ್ಯಾಟರ್ಸ್ ಹಾಗೂ ಡೆಲ್ಲಿ ಸ್ಪಿನ್ನರ್ಗಳ ನಡುವೆ ತೀವ್ರ ಪೈಪೋಟಿ ಇರಲಿದ್ದು ಪಂದ್ಯ ಭಾರೀ ಕುತೂಹಲ ಕೆರಳಿಸಿದೆ.








