ನಮ್ಮೂರ್ ಎಕ್ಸ್ಪ್ರೆಸ್ ಸ್ಪೋರ್ಟ್ಸ ನ್ಯೂಸ್
ಐಪಿಎಲ್ -2025
* ಲೋ ಸ್ಕೋರ್ ಚೇಸ್ ಮಾಡಲಾಗದೇ ಸೋತ ಕೆಕೆಆರ್
* ಐಪಿಎಲ್ ಇತಿಹಾಸದಲ್ಲೇ ಅತೀ ಕಡಿಮೆ ರನ್ ಮಾಡಿ ಗೆದ್ದ ಪಂಜಾಬ್
* ಚಹಲ್ ಚಮತ್ಕಾರಕ್ಕೆ ಕೆಕೆಆರ್ ಉಡೀಸ್
NAMMMUR EXPRESS SPORTS NEWS
ಮುಲ್ಲಾನ್ ಪುರ:ಕಳೆದ ವರ್ಷ ಐಪಿಎಲ್ನ ಈಡನ್ ಗಾರ್ಡನ್ ಕ್ರೀಡಾಂಗಡದಲ್ಲಿ ಕೆಕೆಆರ್ ವಿರುದ್ಧ ಅತಿ ಹೆಚ್ಚು ರನ್ ಚೇಸ್ ಮಾಡಿ ಗೆದ್ದು ದಾಖಲೆ ಬರೆದಿದ್ದ ಪಂಜಾಬ್ ಈ ಬಾರಿ ಅತಿ ಕಡಿಮೆ ಸ್ಕೋರ್ ಮಾಡಿ ರಕ್ಷಿಸಿಕೊಂಡ ದಾಖಲೆ ನಿರ್ಮಿಸಿದೆ.
18ನೇ ಆವೃತ್ತಿಯ ಐಪಿಎಲ್ ಮತ್ತೊಂದು ರಣರೋಚಕ ಪಂದ್ಯಕ್ಕೆ ಸಾಕ್ಷಿಯಾಗಿದೆ.ಮುಲ್ಲನ್ಪುರದಲ್ಲಿ ನಡೆದ ಈ ಪಂದ್ಯದಲ್ಲಿ, ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆದರೆ ಕೆಕೆಆರ್ ಬೌಲರ್ಗಳು ಪಂಜಾಬ್ ಬ್ಯಾಟ್ಸ್ಮನ್ಗಳ ಮೇಲೆ ಮಾರಕ ದಾಳಿ ಮಾಡಿದರು.ಇದರಿಂದ ತತ್ತರಿಸಿದ ಪಂಜಾಬ್ ತಂಡ ಕೇವಲ 111 ರನ್ಗಳಿಗೆ ಆಲೌಟ್ ಆಯಿತು. ಪಂಜಾಬ್ ಬ್ಯಾಟ್ಸ್ಮನ್ಗಳ ಪೈಕಿ ಪ್ರಭು ಸಿಮ್ರಾನ್ ಸಿಂಗ್ 30, ಪ್ರಿಯಾಂಶ್ ಆರ್ಯ 22 ಮತ್ತು ಶಶಾಂಕ್ ಸಿಂಗ್ 18 ರನ್ ಗಳಿಸಿದರು. ಕೆಕೆಆರ್ ಪರ ಹರ್ಷಿತ್ ರಾಣಾ ಮೂರು ವಿಕೆಟ್ ಪಡೆದರೆ, ಸುನಿಲ್ ನರೈನ್ ಮತ್ತು ವರುಣ್ ಚಕ್ರವರ್ತಿ ತಲಾ 2 ವಿಕೆಟ್ ಪಡೆದರು.
ಸೂಪರ್ ಫಾರ್ಮ್ನಲ್ಲಿದ್ದ ಕೋಲ್ಕತ್ತಾ ತಂಡ ಈ ಕಡಿಮೆ ಸ್ಕೋರ್ ಅನ್ನು ಸುಲಭವಾಗಿ ಚೇಸ್ ಮಾಡಿ ಗೆಲ್ಲುವ ನಿರೀಕ್ಷೆಯಲ್ಲಿತ್ತು, ಆದರೆ ಪಂಜಾಬ್ ತಂಡ ಅದ್ಭುತ ಬೌಲಿಂಗ್ ಮೂಲಕ ಕೆಕೆಆರ್ ತಂಡವನ್ನು ಚಿಂದಿ ಉಡಾಯಿಸಿತು.ಕೆಕೆಆರ್ನ ಆರಂಭಿಕ ಬ್ಯಾಟರ್ ಸುನಿಲ್ ನರೈನ್ ಮತ್ತು ಕ್ವಿಂಟನ್ ಡಿ ಕಾಕ್ ಸಿಂಗಲ್ ಡಿಜಿಟ್ಗೆ ಔಟಾದರೆ, ಅಂಗ್ಕ್ರಿಶ್, ರಘುವಂಶಿ 37 ರನ್ಗಳ ಇನ್ನಿಂಗ್ಸ್ ಪಂದ್ಯಕ್ಕೆ ಜೀವ ತುಂಬಿತು. ರಹಾನೆ ಕೂಡ 17 ರನ್ ಗಳಿಸಿದರು. ಆದರೆ ಇವರಿಬ್ಬರ ವಿಕೆಟ್ ಬೀಳುತ್ತಿದ್ದಂತೆ ಪಂಜಾಬ್ ತಂಡ ಪಂದ್ಯದ ಮೇಲೆ ಹಿಡಿತ ಸಾಧಿಸಿತು.ಬಳಿಕ ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿದ ಪರಿಣಾಮ ಕೆಕೆಆರ್ ಸೋಲನುಭವಿಸಿತು. ಪಂಜಾಬ್ ಪರ ಯುಜುವೇಂದ್ರ ಚಹಲ್ ತನ್ನ ಚಮತ್ಕಾರಿ ಬೌಲಿಂಗ್ನಿಂದ 4 ವಿಕೆಟ್ ಪಡೆದು ಪಂದ್ಯದ ಗತಿಯನ್ನೇ ಬದಲಾಯಿಸಿದರು. ಇದರೊಂದಿಗೆ ಪಂಜಾಬ್ ಕಡಿಮೆ ಮೊತ್ತದ ಸ್ಕೋರ್ ರಕ್ಷಿಸಿಕೊಂಡ ತಂಡವಾಗಿ ದಾಖಲೆ ಬರೆದಿದೆ.
ಇದಕ್ಕೂ ಮೊದಲು, ಐಪಿಎಲ್ನಲ್ಲಿ ಅತಿ ಕಡಿಮೆ ಮೊತ್ತವನ್ನು ರಕ್ಷಿಸಿದ ದಾಖಲೆ ಚೆನ್ನೈ ಸೂಪರ್ ಕಿಂಗ್ಸ್ ಹೆಸರಿನಲ್ಲಿತ್ತು. 2009ರ ಐಪಿಎಲ್ನಲ್ಲಿ ಸಿಎಸ್ಕೆ 116/9 ಸ್ಕೋರ್ ಗಳಿಸಿತ್ತು. ಈಗ ಪಂಜಾಬ್ ಈ ದಾಖಲೆಯನ್ನು ಮುರಿದಿದೆ.








