ನಮ್ಮೂರ್ ಎಕ್ಸ್ಪ್ರೆಸ್ ಸ್ಪೋರ್ಟ್ಸ್ ನ್ಯೂಸ್ !!
* ಮುಂಬೈಗೆ ಮತ್ತೆ ಸೋಲಿನ ಶಾಕ್
* ಗಿಲ್ ಅಹಮದಾಬಾದ್ನಲ್ಲಿ 1000 ರನ್
* ಇಂದು ಎರಡು ಪಂದ್ಯ ಯಾರಿಗೆ ಬೇವು ಯಾರಿಗೆ ಬೆಲ್ಲ
NAMMUR EXPRESS SPORTS NEWS
ಅಹಮದಾಬಾದ್: ಕಳೆದ ಆವೃತ್ತಿಯ ಐಪಿಎಲ್ನಲ್ಲಿ ಕೊನೆಯ ಸ್ಥಾನ ಪಡೆದಿದ್ದ ಮುಂಬೈ ಇಂಡಿಯನ್ಸ್ ಈ ಐಪಿಎಲ್ನಲ್ಲೂ ಲಯ ಕಂಡುಕೊಳ್ಳಲು ಪರದಾಡುತ್ತಿದೆ ಎನಿಸುತ್ತಿದ್ದು, ಸತತ 2ನೇ ಸೋಲು ಅನುಭವಿಸಿದೆ. ಶನಿವಾರ ನಡೆದ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈಗೆ 36 ರನ್ಗಳ ಸೋಲು ಎದುರಾಯಿತು.
ಮೊದಲು ಬ್ಯಾಟ್ ಮಾಡಿದ ಗುಜರಾತ್ 20 ಓವರ್ನಲ್ಲಿ 8 ವಿಕೆಟ್ಗೆ 196 ರನ್ ಕಲೆಹಾಕಿತು.
ಗುಜರಾತ್ ದಾಖಲಿಸಿದ ಕಠಿಣ ಗುರಿಯನ್ನು ಚೇಸ್ ಮಾಡಲು ಬ್ಯಾಟಿಂಗ್ ಆರಂಭಿಸಿದ ಮುಂಬೈ ಆರಂಭದಲ್ಲೇ 8 ರನ್ ಗಳಿಸಿದ ರೋಹಿತ್ ವಿಕೆಟ್ ಕಳೆದುಕೊಂಡಿತು.
3ನೇ ವಿಕೆಟ್ಗೆ ಜೊತೆಯಾದ ತಿಲಕ್ ವರ್ಮಾ ಹಾಗೂ ನಾಯಕ ಸೂರ್ಯಕುಮಾರ್ ಯಾದವ್ ಉತ್ತಮ ಜೊತೆಯಾಟದ ಮೂಲಕ ತಂಡಕ್ಕೆ ಚೇತರಿಕೆ ನೀಡಿದರು. ಆದರೆ, ಇವರಿಬ್ಬರ ವಿಕೆಟ್ ಉರುಳಿದ ಬಳಿಕ ಮುಂಬೈ ಸೋಲಿನತ್ತ ಮುಖಮಾಡಿತು. 20 ಓವರ್ಗಳಲ್ಲಿ 6 ವಿಕೆಟ್ಗೆ 160 ರನ್ ಗಳಿಸಲಷ್ಟೇ ಶಕ್ತವಾಯಿತು.
ಗುಜರಾತ್ನ ಬೌಲರ್ಗಳಾದ ಪ್ರಸಿದ್ಧ್, ಸಿರಾಜ್, ಸಾಯಿ ಕಿಶೋರ್ ಉತ್ತಮ ಬೌಲಿಂಗ್ ಮಾಡಿದರು. ಇದಕ್ಕೂ ಮುನ್ನ ಗುಜರಾತ್ಗೆ ಮೊದಲ 3 ಬ್ಯಾಟರ್ಗಳಾದ ಸುದರ್ಶನ್ (63), ಗಿಲ್ (38) ಹಾಗೂ ಬಟ್ಲರ್ (39)ರ ಆಕರ್ಷಕ ಬ್ಯಾಟಿಂಗ್ ಉತ್ತಮ ಮೊತ್ತ ಕಲೆಹಾಕಲು ನೆರವಾಯಿತು.
* ಅಹಮದಾಬಾದ್ನಲ್ಲಿ ಗಿಲ್ 1000 ಐಪಿಎಲ್ ರನ್!
ಗುಜರಾತ್ ಟೈಟಾನ್ಸ್ನ ನಾಯಕ ಶುಭ್ಮನ್ ಗಿಲ್ ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ 1000 ಐಪಿಎಲ್ ರನ್ ಪೂರೈಸಿದ್ದಾರೆ. ಐಪಿಎಲ್ನಲ್ಲಿ ಕ್ರೀಡಾಂಗಣವೊಂದರಲ್ಲಿ ಅತಿವೇಗವಾಗಿ 1000 ರನ್ ಗಳಿಸಿದ ಬ್ಯಾಟರ್ಗಳ ಪಟ್ಟಿಯಲ್ಲಿ 2ನೇ ಸ್ಥಾನ ಪಡೆದಿದ್ದಾರೆ. ಗಿಲ್ ಕೇವಲ 20 ಇನ್ನಿಂಗ್ಸ್ಗಳಲ್ಲಿ ಈ ಮೈಲಿಗಲ್ಲು ತಲುಪಿದ್ದಾರೆ. ಕ್ರಿಸ್ ಗೇಲ್, ಆರ್ಸಿಬಿ ಪರ ಆಡುವಾಗ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೇವಲ 19 ಇನ್ನಿಂಗ್ಸ್ಗಳಲ್ಲಿ 1000 ರನ್ ಗಳಿಸಿದ್ದರು. ಸನ್ ರೈಸರ್ಸ್ ಪರ ಆಡುವ ಡೇವಿಡ್ ವಾರ್ನರ್, ಹೈದರಾಬಾದ್ನ ರಾಜೀವ್ ಗಾಂಧಿ ಕ್ರೀಡಾಂಗಣ ದಲ್ಲಿ 22 ಇನ್ನಿಂಗ್ಸ್ಲ್ಲಿ 1000 ರನ್ ಗಳಿಸಿದ್ದಾರೆ.
* ಇಂದು ಎರಡು ಪಂದ್ಯ ಯಾರಿಗೆ ಬೇವು, ಯಾರಿಗೆ ಬೆಲ್ಲ !??
ಯುಗಾದಿ ದಿನವಾದ ಇಂದು ಭಾನುವಾರವಾದ್ದರಿಂದ ಎರಡು ಪಂದ್ಯಗಳು ನಡೆಯಲಿವೆ.
ಮೊದಲನೇ ಪಂದ್ಯ ಡೆಲ್ಲಿ ಹಾಗೂ ಸನ್ ರೈಸರ್ಸ್ ತಂಡಗಳ ನಡುವೆ ಮದ್ಯಾಹ್ನ 3:30 ಕ್ಕೆ ವಿಶಾಖಪಟ್ನಂನಲ್ಲಿ ನಡೆಯಲಿದ್ದು, ಎರಡನೇ ಪಂದ್ಯ ಚೆನ್ನೈ ಹಾಗೂ ರಾಜಸ್ಥಾನ್ ತಂಡಗಳ ನಡುವೆ ರಾತ್ರಿ 7:30 ಕ್ಕೆ ಗುವಾಹಟಿಯಲ್ಲಿ ನಡೆಯಲಿದೆ. ಎರಡೂ ಪಂದ್ಯಗಳಲ್ಲಿನ ಜಯ 4 ತಂಡಗಳಿಗೆ ಮುಖ್ಯವಾಗಿದ್ದು ಇಂದು ಯಾರಿಗೆ ಬೇವು ಯಾರಿಗೆ ಬೆಲ್ಲ ಸಿಗುವುದೆಂದು ಕಾದು ನೋಡಬೇಕಿದೆ.







