ನಮ್ಮೂರ್ ಎಕ್ಸ್ಪ್ರೆಸ್ ಸ್ಪೋರ್ಟ್ಸ್ ನ್ಯೂಸ್
ಐಪಿಎಲ್ -2025
* 18 ವರ್ಷದ ಕನಸು ಈ ಸಲ ಕಪ್ ನಮ್ದಾಯ್ತು
* ಆರ್ಸಿಬಿ ಸಂಘಟಿತ ಹೋರಾಟ, ಪಂಜಾಬ್ ವಿರುದ್ಧ ರೋಚಕ ಜಯ
* ಅಭಿಮಾನಿಗಳು ಫುಲ್ ಖುಷ್,ನೆಕ್ಟ್ಸ್ ಲೆವೆಲ್ ಸೆಲೆಬ್ರೇಷನ್
NAMMMUR EXPRESS SPORTS NEWS
ಅಹಮದಾಬಾದ್: ರಜತ್ ಪಾಟಿದಾರ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡವು ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ವಿರುದ್ಧ 6 ರನ್ಗಳಿಂದ ರೋಚಕ ಗೆಲುವು ಸಾಧಿಸಿ, ತನ್ನ 18 ವರ್ಷಗಳ ಐಪಿಎಲ್ ಟ್ರೋಫಿಯ ಕನಸನ್ನು ನನಸಾಗಿಸಿದೆ. ತಂಡವು ಫೈನಲ್ನಲ್ಲಿ ಅದ್ಭುತ ಪ್ರದರ್ಶನ ನೀಡಿ, ತನ್ನ ಮೊದಲ ಐಪಿಎಲ್ ಟೈಟಲ್ ಗೆದ್ದುಕೊಂಡಿದೆ.ಈ ಮೂಲಕ ತನ್ನ ಜಯವನ್ನು ತಂಡದ ಶ್ರೇಷ್ಠ ಆಟಗಾರ,ಸತತ 18 ವರ್ಷಗಳು ತಂಡವನ್ನು ಮುನ್ನಡೆಸಿದ ಹಾಗೂ ಒಂದೇ ತಂಡದಲ್ಲಿದ್ದು ಟ್ರೋಫಿಗಾಗಿ ಕಾಯುತ್ತಿದ್ದ ವಿರಾಟ್ ಕೊಹ್ಲಿ ಹಾಗೂ ತಂಡದ ಗೆಲುವಿಗಾಗಿ ಹಾರೈಸಿ ಪ್ರತಿಬಾರಿಯು ಈ ಸಲ ಕಪ್ ನಮ್ದೆ ಎಂದು ತಂಡವನ್ನು ಹುರಿದುಂಬಿಸುತ್ತಿದ್ದ,ತಂಡ ಕಪ್ ಗೆಲ್ಲದಿದ್ದಾಗಲು ತಂಡದ ಜೊತೆ ನಿಂತು ಬೆನ್ನು ತಟ್ಟಿದ ಅಭಿಮಾನಿಗಳಿಗೆ,ತಂಡದ ಎಲ್ಲಾ ಸದಸ್ಯರಿಗೂ ಅರ್ಪಿಸಿದೆ.
ಅದ್ಭುತ ಪ್ರದರ್ಶನ ನೀಡಿ, ತನ್ನ ಮೊದಲ ಐಪಿಎಲ್ ಟೈಟಲ್ ಗೆದ್ದುಕೊಂಡಿದೆ.ಅದ್ಭುತ ಪ್ರದರ್ಶನ ನೀಡಿ, ತನ್ನ ಮೊದಲ ಐಪಿಎಲ್ ಟೈಟಲ್ ಗೆದ್ದುಕೊಂಡಿದೆ.ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ಪಂಜಾಬ್ ಕಿಂಗ್ಸ್, ಆರ್ಸಿಬಿಯನ್ನು 20 ಓವರ್ಗಳಲ್ಲಿ 190/9 ರನ್ಗಳಿಗೆ ಕಟ್ಟಿಹಾಕಿತು. ಪಿಬಿಕೆಎಸ್ನ ಅರ್ಶದೀಪ್ ಸಿಂಗ್ (3/40) ಮತ್ತು ಕೈಲ್ ಜೇಮಿಸನ್ (3/48) ತಮ್ಮ ಅದ್ಭುತ ಬೌಲಿಂಗ್ನಿಂದ ಆರ್ಸಿಬಿಯ ಬ್ಯಾಟಿಂಗ್ಗೆ ಕಡಿವಾಣ ಹಾಕಿದರು. ಆರ್ಸಿಬಿಯ ಪರ ವಿರಾಟ್ ಕೊಹ್ಲಿ 35 ಎಸೆತಗಳಲ್ಲಿ 43 ರನ್ ಗಳಿಸಿ ತಂಡದ ಗರಿಷ್ಠ ಸ್ಕೋರರ್ ಆಗಿ ಹೊರಹೊಮ್ಮಿದರು. ಆದರೆ, ನಿಯಮಿತ ಅಂತರದಲ್ಲಿ ವಿಕೆಟ್ಗಳನ್ನು ಕಳೆದುಕೊಂಡ ಆರ್ಸಿಬಿ ದೊಡ್ಡ ಮೊತ್ತ ಕಲೆಹಾಕಲು ವಿಫಲವಾಯಿತು.
ಚೇಸಿಂಗ್ನಲ್ಲಿ ಪಂಜಾಬ್ ಕಿಂಗ್ಸ್ 20 ಓವರ್ಗಳಲ್ಲಿ 184/7 ರನ್ಗಳಿಗೆ ಸೀಮಿತವಾಯಿತು. ಆರ್ಸಿಬಿಯ ಬೌಲರ್ಗಳಾದ ಭುವನೇಶ್ವರ್ ಕುಮಾರ್ (2/38) ಮತ್ತು ಕೃನಾಲ್ ಪಾಂಡ್ಯ (2/17) ತಮ್ಮ ಮಾಂತ್ರಿಕ ಬೌಲಿಂಗ್ನಿಂದ ಪಿಬಿಕೆಎಸ್ ಬ್ಯಾಟಿಂಗ್ ಲೈನ್ ಅಪ್ ನ್ನು ನಿಯಂತ್ರಿಸಿದರು. ಈ ರೋಚಕ ಗೆಲುವಿನೊಂದಿಗೆ, ಆರ್ಸಿಬಿ ತನ್ನ ಚೊಚ್ಚಲ ಐಪಿಎಲ್ ಟ್ರೋಫಿಯನ್ನು ಎತ್ತಿಹಿಡಿದಿದೆ.
ಇಂದು ಬೆಂಗಳೂರಿಗೆ ಆಗಮಿಸುತ್ತಿರುವ ಆರ್ಸಿಬಿ ಬಾಯ್ಸ್
ಐಪಿಎಲ್- 2025ರ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದು ಬೀಗಿದ ರಾಯಲ್ ಚಾಲೇಂಜರ್ಸ್ ಬೆಂಗಳೂರು ತಂಡ ಇಂದು ತನ್ನ ತವರು ಬೆಂಗಳೂರಿಗೆ ಆಗಮಿಸುತ್ತಿದೆ. ಇಂದು ಮಧ್ಯಾಹ್ನ ಆರ್ಸಿಬಿ ಬಾಯ್ಸ್ ರಾಜ್ಯ ರಾಜಧಾನಿಗೆ ಎಂಟ್ರಿಯಾಗುತ್ತಿದ್ದು, ವಿಜಯ ಯಾತ್ರೆ ನಡೆಸಲಿದ್ದಾರೆ. ಈಗಾಗಲೇ ವಿಜಯಯಾತ್ರೆಗೆ ಮತ್ತು ಆರ್ಸಿಬಿ ಬಾಯ್ಸ್ ಸ್ವಾಗತಕ್ಕೆ ಎಲ್ಲಾ ತಯಾರಿ ಮಾಡಲಾಗಿದೆ. ಇನ್ನು ತಂಡದ ಗೆಲುವಿನ ಕ್ಷಣಕ್ಕೆ ಮಾಜಿ ಆಟಗಾರರಾದ ಎಬಿ ಡಿವಿಲಿಯರ್ಸ್,ಕ್ರಿಸ್ ಗೇಲ್ ಸಾಕ್ಷಿಯಾದರು. ವಿರಾಟ್ರನ್ನು ತಬ್ಬಿ ತಮ್ಮದೇ ಶೈಲಿಯ ಸೆಲೆಬ್ರೇಷನ್ ಆಚರಿಸಿದರು.
* ಆರ್ಸಿಬಿ ಗೆಲುವಿಗೆ ಕುಣಿದು ಕುಪ್ಪಳಿಸಿದ ಅಭಿಮಾನಿಗಳು
ಈ ಸಲ ಕಪ್ ನಮ್ದೇ ಅಲ್ಲ, ಈ ಸಲ ಕಪ್ ನಮ್ದು. 2008 ರಿಂದ 2025 ಅಂದರೆ 18 ವರ್ಷ. ಸುದೀರ್ಘ 18 ವರ್ಷಗಳ ಪ್ರಯಾಣದ ಅಮರ ಪ್ರೇಮದ ಯಾತ್ರೆ. ಈ ಪ್ರಯಾಣದಲ್ಲಿ ಅನುಭವಿಸಿದ ಅವಮಾನ, ಟೀಕೆ, ಹಿಂಸೆ ಅದೆಷ್ಟೋ. ಪ್ರತಿಷ್ಠೆ, ಆತ್ಮಾಭಿಮಾನಕ್ಕೆ ಧಕ್ಕೆಯಾದರೂ ಆರ್ಸಿಬಿ ಫ್ಯಾನ್ಸ್ ಡೋಂಟ್ಕೇರ್ ಅಂದಿದ್ರು. ನಮ್ಮ ಆರ್ಸಿಬಿ ನಮ್ಮ ಹೆಮ್ಮೆ ಎಂದಿದ್ದರು. ಇಂತ ಅಲ್ಟಿಮೇಟ್ ಕನಸು ನನಸಾಗಿದೆ. ಕೊನೆಗೂ ಆರ್ಸಿಬಿ ಐಪಿಎಲ್ ಟ್ರೋಫಿಗೆ ಮುತ್ತಿಟ್ಟಿದೆ. ಅಭಿಮಾನಿಗಳ ಸಂಭ್ರಮ ಅಂತೂ ನೆಕ್ಸ್ಟ್ ಲೆವೆಲ್ನಲ್ಲಿತ್ತು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಫೈನಲ್ ಪಂದ್ಯ ಗೆಲ್ಲುತ್ತಿದ್ದಂತೆ ಆರ್ಸಿಬಿ ಅಭಿಮಾನಿಗಳು ಕುಣಿದು ಕುಪ್ಪಳಿಸಿದರು. ಸಿಲಿಕಾನ್ ಸಿಟಿ ಬೆಂಗಳೂರು, ಮೈಸೂರು, ಶಿವಮೊಗ್ಗ,ಚಿಕ್ಕಮಗಳೂರು ಬೆಳಗಾವಿ, ರಾಯಚೂರು, ಕಲಬುರಗಿ, ಧಾರವಾಡ, ದಾವಣಗೆರೆ, ಮಂಡ್ಯ, ರಾಮನಗರ, ಕೊಪ್ಪಳ ಸೇರಿದಂತೆ ರಾಜ್ಯಾದ್ಯಂತ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು. ಹಲವೆಡೆ ಲೈವ್ ಸ್ಕ್ರೀನ್ನಲ್ಲಿ ಪಂದ್ಯ ವೀಕ್ಷಿಸಿದ ಫ್ಯಾನ್ಸ್ ಸಂಭ್ರಮಾಚರಣೆ ನಡೆಸಿದರು. ಪಟಾಕಿ ಸಿಡಿಸಿ ಸಂಭ್ರಮಿಸಿ, ಕೇಕ್ ಕತ್ತರಿಸಿ, ಸಿಹಿ ಹಂಚಿ ಸೆಲೆಬ್ರೇಟ್ ಮಾಡಿದರು.
ಆರ್ಸಿಬಿ ಸ್ಟಾರ್ ವಿರಾಟ್ ಕೊಹ್ಲಿ ಪಂದ್ಯ ಗೆಲ್ಲುವ ಹಂತದಲ್ಲಿದ್ದಾಗ ಮೈದಾನದಲ್ಲಿ ಅಳುವುದನ್ನು ಕಂಡು ಹಲವು ಅಭಿಮಾನಿಗಳು ಕಣ್ಣೀರಿಟ್ಟರು. ಏಕೆಂದರೆ ಆರ್ಸಿಬಿ ತಂಡದಲ್ಲಿ ಕಳೆದ 18 ವರ್ಷಗಳಿಂದ ಕೊಹ್ಲಿ ಶ್ರಮವಹಿಸಿದ್ದಾರೆ. ಹೀಗಾಗಿ ಟ್ರೋಫಿ ಕೈಗೆ ಬರುತ್ತಿದೆಯಲ್ಲ ಎಂದು ಕೊಹ್ಲಿ ಭಾವನೆಗೆ ಸಿಕ್ಕಿ ಕಣ್ಣೀರು ಸುರಿದರು. ಈ ಎಲ್ಲಾ ಭಾವನೆಗಳೂ ಒಂದಾಗಿ ಅಭಿಮಾನದ ಹಬ್ಬದ ಆಚರಣೆಗೆ ರಾತ್ರಿ ಇಡೀ ಕರುನಾಡು ಸಾಕ್ಷಿಯಾಯಿತು.








