ಹೊಸದುರ್ಗದಲ್ಲಿ ಬಿಜೆಪಿ ವಿಜಯೋತ್ಸವ!
– ದೇಶದ ಸುಭದ್ರತೆಗೆ ಮೋದಿ ಆಡಳಿತ ಅನಿವಾರ್ಯ: ಬಿಜೆಪಿ ಮುಖಂಡ ಸದ್ಗುರು ಪ್ರದೀಪ್
– ಗೋವಿಂದ್ ಎಂ ಕಾರಜೋಳ ಗೆಲುವಿಗೆ ಸಂಭ್ರಮ
NAMMUR EXPRESS NEWS
ಹೊಸದುರ್ಗ: ಹೊಸದುರ್ಗದಲ್ಲಿ ಬಿಜೆಪಿ ವಿಜಯೋತ್ಸವ ಸಂಭ್ರಮದಿಂದ ನಡೆಯಿತು.
ಚಿತ್ರದುರ್ಗ ನೂತನ ಸಂಸದ ರಾಗಿ ಗೋವಿಂದ್ ಎಂ ಕಾರಜೋಳ ಗೆಲುವಿಗೆ ಕ್ಷೇತ್ರದಲ್ಲಿ ಎಲ್ಲೆಡೆ ಸಂಭ್ರಮ ವ್ಯಕ್ತವಾಗಿದೆ.
ದೇಶದ ಭದ್ರತೆ ಹಾಗೂ ನರೇಂದ್ರ ಮೋದಿ ಅವರ ಸುಭದ್ರ ಆಡಳಿತಕ್ಕೆ ಮತ್ತೊಮ್ಮೆ ಮತದಾರರು ಅವಕಾಶ ಮಾಡಿಕೊಟ್ಟಿದ್ದಾರೆ. ಬಸವಣ್ಣನವರ ನಾಡಿನಿಂದ ಬಂದಿರುವ ಗೋವಿಂದ್ ಎಂ ಕಾರಜೋಳ ಅವರು ಕಲ್ಲಿನಕೋಟೆ ಚಿತ್ರದುರ್ಗದ ಜನರು ಹಾಗೂ ಕಾರ್ಯಕರ್ತರ ಪ್ರೀತಿ, ವಿಶ್ವಾಸಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಬಿಜೆಪಿ ಮುಖಂಡ ಉದ್ಯಮಿ ಪ್ರದೀಪ್ ಡಿ.ಎಸ್. ಸಂತಸ ವ್ಯಕ್ತಪಡಿಸಿದರು. ಬಿಜೆಪಿ ಅಭ್ಯರ್ಥಿ ಗೋವಿಂದ್ ಎಂ.ಕಾರಜೋಳ ಅವರು ಗೆಲುವು ಸಾಧಿಸುತ್ತಿದ್ದಂತೆ ಪಟ್ಟಣದ ಟಿ.ಬಿ ವೃತ್ತದಲ್ಲಿ ಸಂಭ್ರಮಾಚರಣೆಯಲ್ಲಿ ಪಟ್ಟಣದ ಟಿ.ಬಿ. ವೃತ್ತದಿಂದ ಮದಕರಿ ವೃತ್ತದವರೆಗೂ ಮೆರವಣಿಗೆ ನಡೆಸಿ ಅವರು ಮಾತನಾಡಿದರು.
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಚಿತ್ರದುರ್ಗ ಕ್ಷೇತ್ರಕ್ಕೆ ಬಿಜೆಪಿಗೆ ಈ ನಿಟ್ಟಿನ ಬೆಂಬಲವನ್ನು ನೀಡಿರುವುದು ಚಿತ್ರದುರ್ಗ.
ಲೋಕಸಭಾ ಕ್ಷೇತ್ರದ ಮತದಾರರ ಪ್ರಬುದ್ಧತೆಯನ್ನು ಮೆರೆದಿದೆ. ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರ ಒಗ್ಗಟ್ಟಿನ ಕೆಲಸವೇ ಈ ಗೆಲುವಿಗೆ ಕಾರಣ. ನರೇಂದ್ರ ಮೋದಿ ಹಾಗೂ ಸಜ್ಜನ ವ್ಯಕ್ತಿತ್ವದ ಗೋವಿಂದ ಕಾರಜೋಳರವರ ವ್ಯಕ್ತಿತ್ವವನ್ನು ಮೆಚ್ಚಿ ಈ ಬಾರಿ ಹೊಸದುರ್ಗದ ಮತದಾರ ಅತ್ಯಂತ ಹೆಚ್ಚು ಮತ ಹಾಕುವುದರ ಮೂಲಕ ಸಹಕರಿಸಿದ್ದಾರೆ ಎಂದು ಅವರು ಹೇಳಿದರು.
ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಜಗದೀಶ್ ರಾಮಯ್ಯ, ಎಸ್.ಸಿ ಮೋರ್ಚ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೂಳಿಹಟ್ಟಿ ಕೃಷ್ಣಮೂರ್ತಿ, ಜೆ.ಡಿ.ಎಸ್ ತಾಲ್ಲೂಕು ಅಧ್ಯಕ್ಷ ಗಣೇಶ್ ಮೂರ್ತಿ, ಪುರಸಭಾ ಸದಸ್ಯರುಗಳಾದ ಶ್ರೀನಿವಾಸ್, ದಾಳಿಂಬೆ ಗಿರೀಶ್, ಕೆ. ಎಲ್ ನಾಗರಾಜ್, ಸರೋಜಮ್ಮ, ಮೀನಾಕ್ಷಿ ನಂದೀಶ್, ಪಾರ್ವತಮ್ಮ, ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಪಂಪ, ಬಿಜೆಪಿ ಉಪಾಧ್ಯಕ್ಷ ಲಿಂಗದೇವರು ಸಾ,ಚ ಮಂಜಯ್ಯ, ಬಿಜೆಪಿ ಮುಖಂಡರುಗಳಾದ ಆರ್ ಹನುಮಂತಪ್ಪ, ಜಿ.ಎನ್.ಕೆರೆ ಎಸ್. ಶಿವಪ್ರಸಾದ್, ನರೇಂದ್ರ, ಮದುರೆ ಪ್ರವೀಣ್, ರವಿಕಿರಣ್ ಪಾಟೀಲ್, ಸಿದ್ದೇಶ್, ವಿರುಪಾಕ್ಷಪ್ಪ, ಮಾವಿನಕಟ್ಟೆ ಮಲ್ಲಿಕಾರ್ಜುನ್ ಸೇರಿದಂತೆ ಕಾರ್ಯಕರ್ತರಿದ್ದರು.