ಆರೋಗ್ಯ ಎಕ್ಸ್ ಪ್ರೆಸ್
ಹಲ್ಲಿನ ಹೊಳಪನ್ನು ಹೆಚ್ಚಿಸಲು 5 ಸರಳ ಮನೆಮದ್ದು!
NAMMUR EXPRESS NEWS
ಹಲ್ಲು ನಮ್ಮ ಮುಖದ ಆಕರ್ಷಣೆ ಹಾಗೂ ಸೌಂದರ್ಯವನ್ನು ಹೆಚ್ಚಿಸುತ್ತದೆ. ಹಲ್ಲಿನ ಬಣ್ಣದಲ್ಲಿಯೂ ಭಿನ್ನತೆ ಇರುತ್ತದೆ. ವ್ಯಕ್ತಿಯ ಆನುವಂಶಿಕತೆ ಹಾಗೂ ದೇಹದ ಆರೋಗ್ಯದ ಆಧಾರದ ಮೇಲೆ ಬಿಳಿ ಬಣ್ಣದ ಮೇಲೆಯೇ ಕೆಲವು ಛಾಯೆಯು ಕಾಣಿಸಿಕೊಳ್ಳುವುದು.
ಹಲ್ಲನ್ನು ಸರಿಯಾಗಿ ಆರೈಕೆ ಮಾಡದೆ ಇದ್ದಾಗ, ಆಹಾರವನ್ನು ಸೇವಿಸಿದ ಬಳಿಕ ಬಾಯಿ ಮುಕ್ಕಳಿಸದೆ ಇರುವುದು, ಕೆಫೀನ್ ಸೇವನೆ, ಅತಿಯಾಗ ಬೆಲ್ಲ ಸೇವನೆ, ಮಾದಕ ವಸ್ತುಗಳ ಸೇವನೆ ಹೀಗೆ ವಿವಿಧ ಕಾರಣಗಳಿಗಾಗಿ ಹಲ್ಲು ಹಳದಿ ಬಣ್ಣವನ್ನು ಪಡೆದುಕೊಂಡಿರುತ್ತದೆ.
ಹಲ್ಲಿನ ಮೇಲೆ ಪ್ಲೇಕ್ ರಚನೆ ಆಗುವುದರಿಂದ ಹಳದಿ ಬಣ್ಣಕ್ಕೆ ತಿರುಗುವುದು. ಸರಿಯಾದ ಆರೈಕೆ ಮತ್ತು ಸುಚಿತ್ವ ಮಾಡದೆ ಇದ್ದಾಗ ಹಲ್ಲಿನ ಮೇಲೆ ಹಳದಿ ಬಣ್ಣವು ಶಾಶ್ವತವಾಗಿ ಉಳಿದು ಬಿಡುತ್ತದೆ. ದಂತ ಸವೆತ ಉಂಟಾದಾಗ ಅದರಲ್ಲಿ ಇರುವ ದಂತದ್ರವ್ಯವು ಹಲ್ಲುಗಳ ಮೇಲೆ ಬಂದು ಕುಳಿತುಕೊಳ್ಳುತ್ತವೆ. ಆಗ ಹಲ್ಲು ಹಳದಿ ಬಣ್ಣಕ್ಕೆ ತಿರುಗುವುದು.
– ಬಾಯಿ ಮುಕ್ಕಳಿಸಲು ಎಣ್ಣೆಯನ್ನು ಬಳಸಿ
ಬಾಯಲ್ಲಿ ಸ್ವಲ್ಪ ಎಣ್ಣೆಯನ್ನು ಹಾಕಿ, ಕುಚುಗುಡಿಸುತ್ತಿರಬೇಕು. ಸ್ವಲ್ಪ ಸಮಯಗಳ ಕಾಲ ಈ ಕ್ರಿಯೆಯನ್ನು ಮುಂದುವರಿಸಿ, ನಂತರ ಉಗುಳಬೇಕು. ಈ ಕ್ರಮವು ಅತ್ಯಂತ ಪ್ರಾಚೀನ ಪದ್ಧತಿ. ಆದರೆ ಹಲ್ಲು, ದಂತ ಹಾಗೂ ಬಾಯಿಯ ಆರೋಗ್ಯವನ್ನು ಕಾಪಾಡಲು ಸಹಕಾರಿ.
ಬಾಯಿ ಮುಕ್ಕಳಿಸಲು ತೆಂಗಿನ ಎಣ್ಣೆ, ಎಳ್ಳೆಣ್ಣೆ ಮತ್ತು ಸೂರ್ಯಕಾಂತಿಯ ಎಣ್ಣೆಯನ್ನು ಬಳಸಬಹುದು. ಇವು ಬಾಯಲ್ಲಿ ಲಾರಿಕ್ ಆಮ್ಲವನ್ನು ಹೆಚ್ಚಿಸುತ್ತವೆ. ಜೊತೆಗೆ ಉರಿಯೂತವನ್ನು ಕಡಿಮೆ ಮಾಡುತ್ತದೆ. ಬಾಯಲ್ಲಿ ಬ್ಯಾಕ್ಟೀರಿಯಾಗಳನ್ನು ಕಡಿಮೆ ಮಾಡುತ್ತದೆ.
– ಅಡುಗೆ ಸೋಡದೊಂದಿಗೆ ಬ್ರಷ್ ಮಾಡುವುದು
ಅಡುಗೆ ಸೋಡ ನೈಸರ್ಗಿಕವಾಗಿಯೇ ಬಿಳಿ ಮಾಡುವ ಶಕ್ತಿಯನ್ನು ಪಡೆದುಕೊಂಡಿರುತ್ತದೆ. ಇದನ್ನು ಪೇಸ್ಟ್ ಜೊತೆಗೆ ಸೇರಿಸಿ, ಹಲ್ಲನ್ನು ಉಜ್ಜುವುದರಿಂದ ಹಲ್ಲಿನ ಮೇಲಿರುವ ಕಲೆ, ಕೊಳೆ ಹಾಗೂ ಹಳದಿ ಬಣ್ಣವನ್ನು ಸುಲಭವಾಗಿ ನಿವಾರಿಸುವುದು.
ಬಾಯಲ್ಲಿ ಬ್ಯಾಕ್ಟೀರಿಯಾಗಳು ಬೆಳೆಯದಂತೆ ತಡೆಯುವುದು. ಒಂದು ಟೀ ಚಮಚ ಅಡುಗೆ ಸೋಡವನ್ನು 2 ಟೀ ಚಮಚ ನೀರಿನೊಂದಿಗೆ ಬೆರೆಸಿ ಹಲ್ಲುಜ್ಜಬಹುದು ಅಥವಾ ಬಾಯಿ ಮುಕ್ಕಳಿಸಬಹುದು. ವಾರಕ್ಕೆ 2- 3 ಬಾರಿ ಈ ಕ್ರಮವನ್ನು ಅನುಸರಿಸಿದರೆ ಉತ್ತಮ ಫಲವನ್ನು ಪಡೆಯಬಹುದು.
– ಹೈಡ್ರೋಜನ್ ಪೆರಾಕ್ಸೈಡ್
ಹೈಡ್ರೋಜನ್ ಪೆರಾಕ್ಸೈಡ್ ನೈಸರ್ಗಿಕ ಬ್ಲೀಚಿಂಗ್ ಏಜೆಂಟ್ಗಳು. ಅವು ಬಾಯಲ್ಲಿ ಇರುವ ಬ್ಯಾಕ್ಟೀರಿಯಾಗಳನ್ನು ಸಹ ಕೊಲ್ಲುತ್ತವೆ. ಇದು ಬ್ಯಾಕ್ಟೀರಿಯಾಗಳನ್ನು ಕೊಲ್ಲುವುದು ಮತ್ತು ಅವುಗಳ ವಿರುದ್ಧ ಹೋರಾಡುವುದರಿಂದ ಗಾಯಗಳನ್ನು ಶುದ್ಧಗೊಳಿಸಲು ಬಳಸುತ್ತಾರೆ.
ಅಡುಗೆ ಸೋಡಾ ಮತ್ತು ಶೇ.1ರಷ್ಟು ಹೈಡ್ರೋಜನ್ ಪೆರಾಕ್ಸೈಡ್ ಹೊಂದಿರುವ ಪೇಸ್ಟ್ ಗಳು ಹಲ್ಲುಗಳನ್ನು ಸ್ವಚ್ಛ ಹಾಗೂ ಹೊಳಪಿನಿಂದ ಕೂಡಿರುವಂತೆ ಮಾಡುತ್ತವೆಗೀ ಸಂಯೋಜನೆಯ ಪೇಸ್ಟ್ ಅನ್ನು ಆರು ವಾರಗಳ ಕಾಲ ಬಳಸಿದರೆ ಶೇ.62ರಷ್ಟು ಬಿಳಿ ಹಲ್ಲನ್ನು ಹೊಂದಬಹುದು. ಇದನ್ನು ಅಡುಗೆ ಸೋಡದೊಂದಿಗೆ ಬೆರೆಸಿ ಹಲ್ಲುಜ್ಜ ಬಹುದು ಅಥವಾ ಇದನ್ನು ಸ್ವಲ್ಪ ನೀರಿಗೆ ಸೇರಿಸಿ ಬಾಯಿ ಮುಕ್ಕಳಿಸಬಹುದು.
– ಹಣ್ಣು ಮತ್ತು ತರಕಾರಿಗಳನ್ನು ಸೇವಿಸಿ!
ಕುರುಕಲಾದಂತೆ ಇರುವ ಹಣ್ಣು ಮತ್ತು ತರಕಾರಿಗಳನ್ನು ಜಗೆಯುವಾಗ ಹಲ್ಲಿನ ಮೇಲಿರುವ ಫ್ಲೇಕ್ಗಳನ್ನು ತೆಗೆಯುವುದು. ಹಾಗಂತ ಇವುಗಳನ್ನು ಹಲ್ಲುಜ್ಜಲು ಪರ್ಯಾಯವಾಗಿ ಬಳಸಬಾರದು. ಅನಾನಸ್ ಮತ್ತು ಸ್ಟ್ರಾಬೆರಿ ಹಣ್ಣುಗಳು ನೈಸರ್ಗಿಕವಾಗಿ ಹಲ್ಲುಗಳನ್ನು ಬಿಳುಪಾಗಿಸುತ್ತವೆ.








