ಆರೋಗ್ಯ ಎಕ್ಸ್ ಪ್ರೆಸ್!
ಪಾದದ ನೋವು ನಿವಾರಣೆಗೆ ಇಲ್ಲಿದೆ ಸಿಂಪಲ್ ಸಲಹೆಗಳು
NAMMUR EXPRESS NEWS
ಲವಂಗದಲ್ಲಿ ನೋವು ನಿವಾರಕ ಅಂಶಗಳಿವೆ. ಲವಂಗ ಎಣ್ಣೆಯನ್ನು ಪಾದಗಳಿಗೆ ಮಸಾಜ್ ಮಾಡುವುದರಿಂದ ಪಾದದ ನೋವು ನಿವಾರಣೆಯಾಗುತ್ತದೆ.
ಪಾದದ ನೋವು ಮತ್ತು ಹಿಮ್ಮಡಿ ನೋವಿನಿಂದ ಅನೇಕ ಜನರು ಬಳುತ್ತಿರುತ್ತಾರೆ. ಇದಕ್ಕೆ ಒಂದು ಕಾರಣ ಹೈ ಹೀಲ್ಡ್ ಪಾದರಕ್ಷೆ ಧರಿಸುವುದು ಎಂದರೆ ತಪ್ಪಾಗಲಾರದು. ಇದಲ್ಲದೆ, ಹೊಸ ಮತ್ತು ಕಷ್ಟಕರವಾದ ವ್ಯಾಯಾಮ ಅಥವಾ ದೈಹಿಕ ಚಟುವಟಿಕೆಯಿಂದಾಗಿ ಹಿಮ್ಮಡಿ ನೋವು ಕಾಣಿಸಿಕೊಳ್ಳಬಹುದು.
ಕೆಲವೊಮ್ಮೆ, ಪಾದದ ನೋವು ತುಂಬಾ ಹೆಚ್ಚಾಗುತ್ತದೆ. ಇದರಿಂದ ಅಸಹನೀಯ ನೋವು ಮತ್ತು ಪಾದಗಳ ಕೆಳಗಿನ ಭಾಗದಲ್ಲಿ ಉರಿಯುವ ಅನುಭವವಾಗುತ್ತದೆ. ಕ್ಯಾಲ್ಸಿಯಂ ಕೊರತೆಯು ಪಾದದ ನೋವಿಗೆ ಒಂದು ಕಾರಣವಾಗಬಹುದು. ಕ್ಯಾಲ್ಸಿಯಂ ಕೊರತೆಯು ಮೂಳೆಗಳಲ್ಲಿ ನೋವು ಉಂಟುಮಾಡುತ್ತದೆ ಮತ್ತು ಮೂಳೆಗಳನ್ನು ದುರ್ಬಲಗೊಳಿಸುತ್ತದೆ. ಆದರೆ ಪಾದದ ನೋವಿನಿಂದ ಪರಿಹಾರ ಪಡೆಯಲು ನೀವು ಮನೆಮದ್ದುಗಳನ್ನು ಅಳವಡಿಸಿಕೊಳ್ಳಬಹುದು.
ಶುಂಠಿ ಕಷಾಯ
ಶುಂಠಿಯನ್ನು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಪಾದದ ನೋವನ್ನು ನಿವಾರಿಸಲು ಶುಂಠಿ ಸಹಾಯ ಮಾಡುತ್ತದೆ. ಶುಂಠಿ ಕಷಾಯವನ್ನು ಕುಡಿಯುವುದರಿಂದ ಪಾದದ ನೋವು ಮತ್ತು ಉರಿಯೂತವನ್ನು ನಿವಾರಿಸಬಹುದು.
ಲವಂಗ ಎಣ್ಣೆ
ಲವಂಗದಲ್ಲಿ ನೋವು ನಿವಾರಕ ಅಂಶಗಳಿವೆ. ಲವಂಗ ಎಣ್ಣೆಯನ್ನು ಪಾದಗಳಿಗೆ ಮಸಾಜ್ ಮಾಡುವುದರಿಂದ ನೋವು ನಿವಾರಣೆಯಾಗುತ್ತದೆ.








