ಆರೋಗ್ಯ ಎಕ್ಸ್ ಪ್ರೆಸ್!
ಹಲ್ಲು ನೋವು ಕಮ್ಮಿ ಮಾಡುವ ಪವರ್ಫುಲ್ ಮನೆ ಮದ್ದುಗಳು!!
NAMMUR EXPRESS NEWS
ಮನೆಮದ್ದುಗಳು ಕೆಲವೊಂದು ಸಮಸ್ಯೆಗಳಿಗೆ ತುಂಬಾ ಪರಿಣಾಮಕಾರಿ ಆಗಿ ಕೆಲಸ ಮಾಡುವುದು.
ಹಲ್ಲುಗಳಲ್ಲಿ ನೋವು ಕಂಡುಬಂದರೆ ಆಗ ಖಂಡಿತವಾಗಿಯೂ ಇಂತಹ ನೋವು ತನ್ನ ಶತ್ರುವಿಗೂ ಕೊಡದಿರು ದೇವರೇ ಎಂದು ಕೆಲವರಾದರೂ ಬೇಡಿಕೊಳ್ಳುವರು. ಹಲ್ಲುಗಳಲ್ಲಿ ನೋವು ಕಂಡುಬಂದರೆ ಆಗ ತಲೆ, ಮುಖ ಭಾಗವು ನೋವಿನಿಂದ ಕೂಡಿರುವುದು
ಲವಂಗದ ಎಣ್ಣೆ!
ಲವಂಗದ ಎಣ್ಣೆ, ಲವಂಗದ ಹುಡಿ ಮತ್ತು ಇಡೀ ಲವಂಗವನ್ನು ಬಳಸಿಕೊಂಡು ಹಲ್ಲಿನ ನೋವು ಕಡಿಮೆ ಮಾಡಬಹುದು. ಪ್ರತಿಯೊಂದು ಮನೆಯ ಅಡುಗೆ ಮನೆಯಲ್ಲಿ ಲವಂಗವು ಇದ್ದೇ ಇರುವುದು.
ಲವಂಗದ ಎಣ್ಣೆ ಬಳಕೆ ಮಾಡುತ್ತಲಿದ್ದರೆ, ಆಗ ಒಂದು ಹತ್ತಿ ಉಂಡೆಗೆ ಕೆಲವು ಹನಿ ಲವಂಗದ ಎಣ್ಣೆಯನ್ನು ಹಾಕಿಕೊಂಡು ಅದನ್ನು ನೋವು ನೀಡುತ್ತಲಿರುವ ಹಲ್ಲಿನ ಭಾಗಕ್ಕೆ ಇಟ್ಟುಬಿಡಿ. ಜೊಲ್ಲಿನ ಜತೆಗೆ ಮಸಾಲೆಯು ಸೇರಿಕೊಂಡು ನೋವು ದೂರವಾಗುವುದು. ಇಡೀ ಲವಂಗವನ್ನು ಹಲ್ಲಿನ ಮೇಲೆ ಇಟ್ಟುಕೊಂಡು ಹಾಗೆ ಅದನ್ನು ಜಗಿಯಿರಿ. ಇದನ್ನು ಹಾಗೆ 30 ನಿಮಿಷ ಕಾಲ ಹಲ್ಲಿನಲ್ಲಿಡಿ.
ಉಪ್ಪು ನೀರು!
ಉಪ್ಪನ್ನು ಬಳಸಿಕೊಂಡು ದಂತನೋವನ್ನು ಕಡಿಮೆ ಮಾಡಬಹುದು. ಒಂದು ಕಪ್ ಬಿಸಿ ನೀರಿಗೆ ಒಂದು ಚಮಚ ಉಪ್ಪು ಹಾಕಿ ಮತ್ತು ಇದನ್ನು ಬಾಯಿಯಲ್ಲಿ 30 ಸೆಕೆಂಡುಗಳ ಕಾಲ ಮುಕ್ಕಳಿಸಿ.
ಉಪ್ಪು ನೀರು ನೋವು ಕಡಿಮೆ ಮಾಡುವುದು ಮತ್ತು ಊತ ಕಡಿಮೆ ಮಾಡುವುದು. ಹಲ್ಲಿಗೆ ಕಿರಿಕಿರಿ ಉಂಟು ಮಾಡುವ ಕಲ್ಮಷವನ್ನು ಇದು ಹೊರಗೆ ಹಾಕುವುದು.
ಬೆಳ್ಳುಳ್ಳಿ
ಬೆಳ್ಳುಳ್ಳಿಯನ್ನು ಬಳಸಿಕೊಂಡು ಹಲ್ಲಿನ ನೋವನ್ನು ಕಡಿಮೆ ಮಾಡಬಹುದು. ಇಡೀ ಬೆಳ್ಳುಳ್ಳಿಯನ್ನು ಹಲ್ಲಿನ ಮೇಲೆ ಇಡಬಹುದು ಅಥವಾ ಬೆಳ್ಳುಳ್ಳಿ ಕತ್ತರಿಸಿಕೊಂಡು ಅದನ್ನು ಹಲ್ಲಿನ ಭಾಗಕ್ಕೆ ಇಡಬಹುದು.
ಇಡೀ ಬೆಳ್ಳುಳ್ಳಿಯನ್ನು ಇಡುತ್ತಲಿದ್ದರೆ ಆಗ ಇದನ್ನು ನೇರವಾಗಿ ಹಲ್ಲಿನ ಮೇಲಿಡಿ ಮತ್ತು ಅದನ್ನು ಹಾಗೆ ಜಗಿಯಿರಿ. ಕತ್ತರಿಸಿಕೊಂಡ ಬೆಳ್ಳುಳ್ಳಿ ಬಳಸುತ್ತಿದ್ದರೆ ಆಗ ಅದನ್ನು ಹಲ್ಲಿನ ಮೇಲಿಡಿ.
ಜಜ್ಜಿಕೊಂಡ ಬೆಳ್ಳುಳ್ಳಿಯು ಅಲಿಸಿನ್ ಎನ್ನುವ ದ್ರವವನ್ನು ಬಿಡುಗಡೆ ಮಾಡುವುದು ಮತ್ತು ಇದು ನೈಸರ್ಗಿಕವಾಗಿ ರೋಗಗಳ ವಿರುದ್ಧ ಹೋರಾಡುವುದು. ಹೈಡ್ರೋಜನ್ ಪೆರಾಕ್ಸೈಡ್ ನಂತೆ ಅಲಿಸಿನ್ ಕೂಡ ಸೋಂಕಿನ ವಿರುದ್ಧ ಹೋರಾಡಲು ಸಹಕಾರಿ. ಇದು ಒಳ್ಳೆಯ ರುಚಿ ನೀಡದೇ ಇದ್ದರೂ ನೋವು ನಿವಾರಣೆ ಮಾಡಲು ಸಹಕಾರಿ ಆಗುವುದು.
ಶುಂಠಿ ಮತ್ತು ಮೆಣಸು
ಶುಂಠಿ ಮತ್ತು ಮೆಣಸನ್ನು ಸರಿಯಾದ ಪ್ರಮಾಣದಲ್ಲಿ ಹಾಕಿಕೊಂಡು ಪೇಸ್ಟ್ ಮಾಡಿ. ಇದರ ಬಳಿಕ ಅದನ್ನು ಹತ್ತಿ ಉಂಡೆಯಲ್ಲಿ ಅದ್ದಿಕೊಂಡು ಹಲ್ಲುಗಳ ಮೇಲಿಡಿ. ಇದನ್ನು ನೋವು ಕಡಿಮೆ ಆಗುವ ತನಕ ಹಾಗೆ ಬಿಡಿ.
ಪುದೀನಾ ಎಣ್ಣೆ
ಹಲ್ಲು ನೋವು ನಿವಾರಣೆ ಮಾಡಲು 10-15 ಹನಿಯಷ್ಟು ಪುದೀನಾ ಎಣ್ಣೆಯನ್ನು ಎರಡು ಚಮಚದಷ್ಟು ನೈಸರ್ಗಿಕ ಎಣ್ಣೆಯ ಜತೆಗೆ ಮಿಶ್ರಣ ಮಾಡಿಕೊಳ್ಳಿ. ಮಿಶ್ರಣ ಮಾಡಿರುವ ಪರಿಣಾಮವಾಗಿ ಅದು ಹಲ್ಲು ಮತ್ತು ಒಸಡಿಗೆ ಆಗುವಂತಹ ಹಾನಿ ತಪ್ಪಿಸುವುದು. ಒಂದು ಹತ್ತಿ ಉಂಡೆಯನ್ನು ಈ ಮಿಶ್ರಣದಲ್ಲಿ ಅದ್ದಿಕೊಂಡು ಹಲ್ಲುಗಳಿಗೆ ಹಚ್ಚಿ.
ಚೂಯಿಂಗ್ ಗಮ್
ಚೂಯಿಂಗ್ ಗಮ್
ಚೂಯಿಂಗ್ ಗಮ್ ಕೂಡ ಹಲ್ಲು ನೋವು ನಿವಾರಣೆ ಮಾಡಲು ತುಂಬಾ ಸಹಕಾರಿ ಆಗಿರುವುದು. ಚೂಯಿಂಗ್ ಗಮ್ ನ್ನು ದಂತಕುಳಿ ಇರುವ ಜಾಗಕ್ಕೆ ಇಡಬೇಕು. ಇದನ್ನು ತಾತ್ಕಾಲಿಕ ಬಳಕೆ ಮಾಡಬಹುದು.
ನೀವು ವೈದ್ಯರ ಬಳಿಗೆ ದಂತ ಸಮಸ್ಯೆಯನ್ನು ಸರಿಪಡಿಸುವ ತನಕ ಬಳಕೆ ಮಾಡಬಹುದು. ನೋವು ಉಂಟು ಮಾಡುತ್ತಿರುವ ಹಲ್ಲಿನಿಂದ ಚೂಯಿಂಗ್ ಗಮ್ ಜಗಿಯಬೇಡಿ.








