ಬಸ್ಸಿನ ಬಾಗಿಲಿಗೆ ಜೋತು ಬಿದ್ದು ಹೋಗುತ್ತಿರುವ ವಿದ್ಯಾರ್ಥಿಗಳು
– ಕಿತ್ತೂರು ಹಾಗೂ ಎಂ.ಕೆ. ಹುಬ್ಬಳ್ಳಿ ಪಟ್ಟಣದಿಂದ ಶಾಲಾ, ಕಾಲೇಜುಗಳಿಗೆ ಹೋಗುತ್ತಿರುವ ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಬಸ್ ವ್ಯವಸ್ಥೆ ಇಲ್ಲದೆ ಪರದಾಡುವಂತಾಗಿದೆ.
ಕಿತ್ತೂರು ಹಾಗೂ ಎಂ ಕೆ ಹುಬ್ಬಳ್ಳಿ ಪಟ್ಟಣದಿಂದ ಪ್ರತಿದಿನ ನೂರಾರು ವಿದ್ಯಾರ್ಥಿಗಳು ಬೆಳಗಾವಿ, ಧಾರವಾಡ ಕಾಲೇಜುಗಳಿಗೆ ಹೋಗುತ್ತಾರೆ. ಆದರೆ ಬಸ್ ಗಳು ಸರಿಯಾದ ಸಮಯಕ್ಕೆ ಬರುವುದಿಲ್ಲ, ಒಂದು ವೇಳೆ ಬಸ್ ಬಂದರು ಕೂಡ ಬಸ್ಸಿನ ತುಂಬಾ ಜನರನ್ನು ತುಂಬಿಕೊಂಡು ಬರುತ್ತವೆ. ವಿದ್ಯಾರ್ಥಿಗಳಿಗೆ ಬಸ್ ನಲ್ಲಿ ಹತ್ತಲು ಕೂಡ ಸ್ಥಳ ಇರುವುದಿಲ್ಲ. ಬಸ್ಸಿನ ಬಾಗಿಲಿಗೆ ಜೋತು ಬಿದ್ದು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಾಗಿ ಸರಿಯಾದ ಸಮಯಕ್ಕೆ ಶಾಲೆಗೆ ಹೋಗಲು ಆಗುತ್ತಿಲ್ಲ ಎಂದು ವಿದ್ಯಾರ್ಥಿಗಳು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಇದನ್ನೂ ಓದಿ : ಖರ್ಗೆ ಮೈಬಣ್ಣದ ವಿವಾದ: ಜ್ಞಾನೇಂದ್ರ ಕ್ಷಮೆಗೆ ಕಾಂಗ್ರೆಸ್ ಪಟ್ಟು!
HOW TO APPLY : NEET-UG COUNSELLING 2023