ತೀರ್ಥಹಳ್ಳಿ ಮಾರಿಕಾಂಬಾ ಜಾತ್ರೆ ಸಂಭ್ರಮ!
– ಫೆ. 25ರವರೆಗೆ ಜಾತ್ರೆ: ಪ್ರತಿ ದಿನ ಸಾವಿರಾರು ಜನರಿಗೆ ಅನ್ನ ಸಂತರ್ಪಣೆ
– ಅಮ್ಮನಿಗೆ ವಿಶೇಷ ಅಲಂಕಾರ: ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ತೀರ್ಥಹಳ್ಳಿ: ತೀರ್ಥಹಳ್ಳಿ ಶ್ರೀ ಮಾರಿಕಾಂಬಾ ಅಮ್ಮನವರ ಜಾತ್ರೆ ಮಹೋತ್ಸವ ಸಂಭ್ರಮದಿಂದ ನಡೆಯುತ್ತಿದೆ. ಪ್ರತಿ ದಿನ ಸಾವಿರಾರು ಮಂದಿ ಭಕ್ತರು ಭೇಟಿ ನೀಡಿ ಅಮ್ಮನವರ ದರ್ಶನ ಮಾಡಿ ಪುನೀತರಾಗುತ್ತಿದ್ದಾರೆ. ಟಿ. ಎ. ಪಿ. ಸಿ ಎಂ ಎಸ್ ಅಲ್ಲಿ ಸರ್ವರಿಗೂ ಊಟದ ವ್ಯವಸ್ಥೆ ಮಾಡಲಾಗುತ್ತಿದೆ. ಬುಧವಾರ ಸ್ಥಳೀಯ ಕಲಾವಿದರ ‘ನೃತ್ಯ ಸಂಗಮ ಕಾರ್ಯಕ್ರಮವನ್ನು ‘ತೀರ್ಥಹಳ್ಳಿಯ ಶ್ರೀ ಸುಮುಖ ಸಂಗೀತ ನೃತ್ಯ ಶಾಲೆ ತಂಡದಿಂದ ಹಾಗೂ ಶ್ರೀ ರಾಜರಾಜೇಶ್ವರಿ ನೃತ್ಯ ಶಾಲೆಯ ಕಲಾವಿದರು ನಡೆಸಿಕೊಟ್ಟರು. ಸಾಂಸ್ಕೃತಿಕ ಕಾರ್ಯಕ್ರಮ ವೇದಿಕೆ ಕಾರ್ಯಕ್ರಮ ನಡೆಯಿತು.
ಇಂದು, ನಾಳೆ ಏನೇನು?
➡ ಫೆ.19 ರ ಗುರುವಾರ, ಪಾರಾಯಣ, ಜಾತ್ರಾ ವಿಶೇಷ ಪೂಜೆ, ಮಹಾಮಂಗಳಾರತಿ ಮತ್ತು ಅನ್ನ ಸಂತರ್ಪಣೆ ರಾತ್ರಿ: ರಂಗಪೂಜೆ ಇರಲಿದ್ದು, ಖ್ಯಾತ ಯಕ್ಷ ಕಲಾವಿದ ಪಟ್ಲ ಸತೀಶ್ ಶೆಟ್ಟಿ ರವರ ಸಾರಥ್ಯದಲ್ಲಿ ‘ಸಂಪೂರ್ಣ ದೇವಿ ಮಹಾತ್” ಯಕ್ಷಗಾನ ಪ್ರದರ್ಶನ ನಡೆಸಲಿದ್ದಾರೆ.
➡ ಫೆ.20ರ ಶುಕ್ರವಾರ, ಪಾರಾಯಣ, ಜಾತ್ರಾ ವಿಶೇಷ ಪೂಜೆ, ಮಹಾಪೂಜೆ, ಮಹಾಮಂಗಳಾರತಿ, ಮತ್ತು ಅನ್ನ ಸಂತರ್ಪಣೆ ರಂಗಪೂಜೆ ಹಾಗೂ ಅದೇ ದಿನ ಸಂಜೆ ಶ್ರೀ ಗಣೇಶ ದೇಸಾಯಿ ಮತ್ತು ಶ್ರೀಮತಿ ಸುರೇಖ ಹೆಗಡೆ ನೇತೃತ್ವದಲ್ಲಿ “ಕಾವ್ಯ ಸಂಗೀತ ಕಲಾಕುಂಚ ” ಸುಶ್ರಾವ್ಯ ಸಂಗೀತ ಸಂಜೆ ಏರ್ಪಡಿಸಿದ್ದು ಬಣ್ಣದ ಚಿತ್ತಾರದ ಅನಾವರಣವನ್ನ ಶ್ರೀ ನೀರ್ನಳ್ಳಿ ಗಣಪತಿ ಹೆಗಡೆ ನಿರ್ವಹಿಸಲಿದ್ದಾರೆ.
➡ ಫೆ.21ರ ಶನಿವಾರ ಬೆಳಿಗ್ಗೆ ಚಂಡಿಕಾ ಹೋಮ, ಮಧ್ಯಾಹ್ನ 12.30ಕ್ಕೆ ಪೂರ್ಣಾಹುಷಿ ಮಹಾ ಮಂಗಳಾರತಿ ಮತ್ತು ಅನ್ನ ಸಂತರ್ಪಣೆ ಕಾರ್ಯಕ್ರಮ. ಈ ದಿನಸಂಜೆ ಸ್ಥಳೀಯ ಕಲಾವಿದರಾದ ಡ್ಯಾನ್ಸ್ ಪ್ಯಾಲೆಸ್ ರವರಿಂದ ಸಾಂಸ್ಕೃತಿಕ ಕಲರವ ಮತ್ತು ನೃತ್ಯ ವೈವಿದ್ಯ ಜರುಗಲಿದ್ದು, ಸ್ಥಳೀಯ ಗಾಯಕರಿಂದ ಸಂಗೀತ ಸುದೆ ಎಂಬ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಿಕೊಡಲಿದ್ದಾರೆ.
➡ ಫೆ.22ರ ಭಾನುವಾರ,ಪಾರಾಯಣ, ಜಾತ್ರಾ ವಿಶೇಷ ಪೂಜೆ, ಮಹಾಪೂಜೆ, ಮಹಾಮಂಗಳಾರತಿ ಮತ್ತು ಅನ್ನಸಂತರ್ಪಣೆ, ಬೆಂಗಳೂರಿನ ಖ್ಯಾತ ಗಾಯಕ ಶ್ರೀ ರಾಜಗುರು ಹೊಸಕೋಟೆರವರ ತಂಡದಿಂದ ಜಾನಪದ ಸಂಗೀತ ಕಾರ್ಯಕ್ರಮ ಜರುಗಲಿದೆ.








