ಚಿಲುಮೆ ಜಡ್ಡು ದೇವಸ್ಥಾನದಲ್ಲಿ ಮಾರ್ಚ್ 13ರಂದು ಸಾಮೂಹಿಕ ಆಶ್ಲೇಷ ಬಲಿ
– ಪ್ರಸಿದ್ಧ ಶ್ರೀಬ್ರಾಹ್ಮರಿ, ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಪೂಜೆ
– ಸರ್ವ ಭಕ್ತರನ್ನು ಸ್ವಾಗತಿಸಿದ ದೇವಸ್ಥಾನ ಸಮಿತಿ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಶಿವಮೊಗ್ಗ: ತಾಲ್ಲೂಕಿನ ಚಿಲುಮೆಜೆಡ್ಡುವಿನ ಶ್ರೀಶಿವನಾಗ ಸೇವಾ ಟ್ರಸ್ಟ್ ವತಿಯಿಂದ ಶ್ರೀಬ್ರಾಹ್ಮರಿ, ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸಾಮೂಹಿಕ ಆಶ್ಲೇಷಬಲಿ ಪೂಜೆ ಕಾರ್ಯಕ್ರಮವನ್ನು 13 ಮಾರ್ಚ್ 2026ರ ಶುಕ್ರವಾರದಂದು ಹಮ್ಮಿಕೊಳ್ಳಲಾಗಿದೆ. ಶುಕ್ರವಾರದ ಬೆಳಗಿನ ಶುಭ ಮುಹೂರ್ತದಲ್ಲಿ ಶ್ರೀಬ್ರಾಹ್ಮರಿ ದುರ್ಗಾಪರಮೇಶ್ವರಿ ಅಮ್ಮನವರು ಹಾಗೂ ಶ್ರೀವಾಸುಕಿ ನಾಗದೇವರ ಸನ್ನಿಧಾನದಲ್ಲಿ ದೇವರ ಪ್ರಿತ್ಯಾರ್ಥವಾಗಿ ಸರ್ಪಶಾಂತಿ ಹೋಮವನ್ನು ಮತ್ತು ಅದೇ ದಿನ ಸಂಜೆ 5:00ಗಂಟೆಗೆ ಆಶ್ಲೇಷಬಲಿ ಪೂಜೆ, ನಾಗದರ್ಶನಗಳು ನೆರವೇರಲಿವೆ.
ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಭಕ್ತಾದಿಗಳಿಗೆ ಸಿರಿಮುಡಿ ಗಂಧ ಪ್ರಸಾದ ಮತ್ತು ಅನ್ನಪ್ರಸಾದವನ್ನು ವಿತರಿಸಲಾಗುವುದು. ಆಶ್ಲೇಷಬಲಿ ಪೂಜೆಯನ್ನು ಮಾಡಿಸಲು ಇಚ್ಛಿಸುವ ಭಕ್ತಾದಿಗಳು ಮುಂಚಿತವಾಗಿ ತಿಳಿಸಬೇಕಾಗಿ ದೇವಾಲಯದ ಧರ್ಮದರ್ಶಿಗಳಾದ ರಮೇಶ್ ನಾಗಪಾತ್ರಿಗಳು ಮಾಹಿತಿ ನೀಡಿದ್ದು, ಶಿವನಾಗ ಭಕ್ತವೃಂದ ಹಾಗೂ ಊರಿನ ಗ್ರಾಮಸ್ಥರು ಸರ್ವರಿಗೂ ಆದರದ ಸ್ವಾಗತವನ್ನು ಕೋರಿದ್ದಾರೆ.








