ಕೊಪ್ಪ ತಾಲೂಕಲ್ಲಿ ಆಶ್ರಯ ನಿವೇಶನ ಹಂಚಿಕೆ!
– ಶೃಂಗೇರಿ ಕ್ಷೇತ್ರದ ಶಾಸಕರಾದ ಟಿ. ಡಿ.ರಾಜೇಗೌಡ ಅವರಿಂದ ಮಾಹಿತಿ
– ಪ್ರತಿ ನಿವೇಶನಕ್ಕೂ ನಂಬರ್: ಸೂರಿಲ್ಲದವರಿಗೆ ಗುಡ್ ನ್ಯೂಸ್
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಕೊಪ್ಪ: ಬಹಳ ವರ್ಷಗಳಿಂದ ನಿವೇಶನ ಹಂಚಿಕೆ ವಿಚಾರವು ನೆನೆಗುದಿಗೆ ಬಿದ್ದಿದ್ದರಿಂದ ಈ ಭಾಗದ ಜನರು ನಿರಾಶ್ರಿತರಾಗಿಯೇ ಉಳಿದುಕೊಂಡಿದ್ದರು. ಇದೀಗ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರವು ನಿವೇಶನ ಹಂಚಿಕೆಗೆ ಮುಂದಾಗಿದೆ. ಶೃಂಗೇರಿ ಕ್ಷೇತ್ರದ ಶಾಸಕರಾದ ಟಿ. ಡಿ.ರಾಜೇಗೌಡ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಹಂಚಿಕೆಗೆ ಆಯ್ಕೆಯಾಗಿರುವ ನಿವೇಶನಗಳ ಸಂಖ್ಯೆ 83. ಅವುಗಳಲ್ಲಿ 18 ನಿವೇಶನಗಳು 2015ರ ಅನ್ವಯ ಹಂಚಿಕೆಯಾಗಿದೆ.
2025ರ ಅನ್ವಯ ಹಂಚಿಕೆ ಮಾಡಲಾದ ನಿವೇಶನಗಳ ಸಂಖ್ಯೆ 16. 2021ರ ಅನ್ವಯ ಸ್ಥಿರೀಕರಣದ ಹಿನ್ನೆಲೆಯಲ್ಲಿ ಆಯ್ಕೆ ಮಾಡಿರುವ ನಿವೇಶನಗಳ ಸಂಖ್ಯೆ 49. ಇನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಒಟ್ಟು 30 ಹಾಗೂ ವಿಕಲಚೇತನರಿಗೆ 4 ವಿಧವೆಯರಿಗೆ 6, ಸಾಮಾನ್ಯ ವರ್ಗದವರಿಗೆ 44 ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಇನ್ನು ಉಳಿದಿರುವ ಎರಡು ನಿವೇಶನಗಳನ್ನು ನಂಬರ್ ಗಳನ್ನು ಹಾಕುವ ಮುಖಾಂತರ ಇಬ್ಬರು ವಿಧವೆಯರಾದ ಗಿರಿಜಾ ಮತ್ತು ಆರತಿ ಎನ್ನುವವರಿಗೆ ವಿತರಣೆ ಮಾಡಲು ಸಭೆಯು ತೀರ್ಮಾನಿಸಿದೆ ಎಂದು ತಿಳಿಸಲಾಗಿದೆ.
ಪ್ರತಿ ನಿವೇಶನಕ್ಕೂ ನಂಬರ್!
ಪ್ರತಿಯೊಂದು ನಿವೇಶನಗಳಿಗೂ ನಂಬರ್ ಹಾಕುವ ಮೂಲಕ, ನಿವೇಶನವನ್ನು ಪಡೆಯಲು ಬಯಸುವವರು ಸ್ವತಃ ತಾವೇ ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ಕಲ್ಪಿಸಿಕೊಟ್ಟಿದೆ ಎನ್ನಲಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಸಾಮಾನ್ಯ ವರ್ಗದವರು, ವಿಧವೆಯರು, ವಿಧುರರು, ಪೌರ ಕಾರ್ಮಿಕರು ಎಲ್ಲರೂ ಒಂದೆಡೆ ನೆಲೆಸಿ ಸಾಮರಸ್ಯದಿಂದಿರಬೇಕೆನ್ನುವ ಉದ್ದೇಶದಿಂದ ಈ ರೀತಿಯ ಪ್ರಕ್ರಿಯೆಯನ್ನು ಕೈಗೊಳ್ಳಲಾಗಿದೆ ಎಂದು ಶಾಸಕರು ಮಾಹಿತಿ ನೀಡಿದ್ದಾರೆ.








