ನಮ್ಮೂರ್ ಎಕ್ಸ್ಪ್ರೆಸ್ ಸ್ಪೋರ್ಟ್ಸ್ ನ್ಯೂಸ್
ಐಪಿಎಲ್ -2025
* ಪಂದ್ಯ ಪುನರಾರಂಭಕ್ಕೆ ಮಳೆಯದ್ದೇ ಆಟ,ಅಭಿಮಾನಿಗಳಿಗೆ ನಿರಾಸೆ
* ಆರ್ಸಿಬಿ ಟೇಬಲ್ ಟಾಪರ್,ಕೆಕೆಆರ್ ಪ್ಲೇ ಆಫ್ ಹಾದಿ ಕಷ್ಟ
NAMMMUR EXPRESS SPORTS NEWS
ಬೆಂಗಳೂರು: ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಜೆ 7.30ಕ್ಕೆ ಪಂದ್ಯ ಆರಂಭವಾಗಬೇದ್ದ ಆರ್ಸಿಬಿ ಹಾಗೂ ಕೆಕೆಆರ್ ನಡುವಿನ ಪಂದ್ಯ ಭಾರೀ ಮಳೆಯ ಕಾರಣ ರದ್ದಾಗಿದೆ,ಸಂಜೆ 6 ಗಂಟೆಯಿಂದಲೇ ಆರಂಭವಾದ ಧಾರಾಕಾರ ಮಳೆ ರಾತ್ರಿ 10 ಗಂಟೆಯಾದರೂ ಬಿಡುವು ನೀಡಲಿಲ್ಲ. ಪಂದ್ಯದ ಓವರ್ಗಳನ್ನು ಕಡಿತಗೊಳಿಸುವ ಬಗ್ಗೆ ಅಂಪೈರ್ಗಳು ಚರ್ಚೆ ನಡೆಸಿದರಾದರೂ ಮಳೆ ನಿಲ್ಲಲೇ ಇಲ್ಲ.
ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿದ ನಂತರ ವಿರಾಟ್ ಕೊಹ್ಲಿ ಬೆಂಗಳೂರಿನಲ್ಲಿ ಮೊದಲ ಐಪಿಎಲ್ ಪಂದ್ಯ ಆಡಲು ಸಜ್ಜಾಗಿದ್ದ ಕಾರಣ ಅಪಾರ ಸಂಖ್ಯೆಯಲ್ಲಿ ಪ್ರೇಕ್ಷಕರು ಮಳೆಯ ಮುನ್ಸೂಚನೆ ನಡುವೆಯೂ ಮೈದಾನಕ್ಕೆ ಆಗಮಿಸಿದ್ದರು. ಆದರೆ ವರುಣ ಇತ್ತಂಡಗಳ ಆಟಕ್ಕೆ ಅವಕಾಶ ನೀಡಲಿಲ್ಲ. ಇದು ಅಭಿಮಾನಿಗಳನ್ನು ತೀವ್ರ ನಿರಾಸೆಗೀಡು ಮಾಡಿತು. ಎರಡೂ ತಂಡಗಳಿಗೂ ತಲಾ ಒಂದಂಕ ಹಂಚಿಕೆ ಮಾಡಲಾಯಿತು.
ಈ ಒಂದು ಅಂಕದೊಂದಿಗೆ ಆರ್ಸಿಬಿ ಆಡಿದ 12 ಪಂದ್ಯಗಳಲ್ಲಿ 17 ಅಂಕಗಳನ್ನು ಕಲೆ ಹಾಕಿದ್ದು ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ಸೇನಾ ಸಂಘರ್ಷದಿಂದ ಒಂದು ವಾರ ಮುಂದೂಡಿಕೆಯಾಗಿದ್ದ ಐಪಿಎಲ್ 18ನೇ ಆವೃತ್ತಿಯು ಬೆಂಗಳೂರಿನಲ್ಲಿ ಆರ್ಸಿಬಿ ಮತ್ತು ಕೆಕೆಆರ್ ನಡುವಿನ ಪಂದ್ಯದೊಂದಿಗ ಪುನಾರಂಭವಾಗಬೇಕಿತ್ತು,ಆದರೆ ಮಳೆ ಇದಕ್ಕೆ ಅಡ್ಡಿಪಡಿಸಿತು.
* ಅಭಿಮಾನಿಗಳಿಂದ ವಿರಾಟ್ಗೆ ಗೌರವ
ಟೀಮ್ ಇಂಡಿಯಾದ ಸ್ಟಾರ್ ಪ್ಲೇಯರ್ ವಿರಾಟ್ ಕೊಹ್ಲಿ ಇತ್ತೀಚಿಗೆ ಟೆಸ್ಟ್ ಪಂದ್ಯಗಳಿಗೆ ವಿದಾಯ ಹೇಳಿದ್ದರು. ವಿರಾಟ್ ವಿದಾಯದಿಂದ ಅಭಿಮಾನಿಗಳು ಬೇಸರವಾಗಿದ್ದಾರೆ. ಇನ್ನು ಇವರಿಗೆ ವಿಶೇಷ ಗೌರವ ಸೂಚಿಸಲು ಅಭಿಮಾನಿಗಳು ಆರ್ಸಿಬಿ ಹಾಗೂ ಕೆಕೆಆರ್ ನಡುವಣ ಪಂದ್ಯದ ವೇಳೆ ಬಿಳಿ ಬಣ್ಣದ ಜೆರ್ಸಿ ಹಾಕಿಕೊಂಡು ಮೈದಾನಕ್ಕೆ ಬಂದಿದ್ದರು. ಈ ಮೂಲಕ ಆರ್ಸಿಬಿ ಅಭಿಮಾನಿಗಳು ವಿಶೇಷ ಗೌರವ ನೀಡಿದರು.
* ಕೆಕೆಆರ್ ಮುಂದಿನ ಭವಿಷ್ಯ ಏನು?
ಹಾಲಿ ಚಾಂಪಿಯನ್ ಕೆಕೆಆರ್ ತಂಡದ ಪ್ಲೇ ಆಫ್ ಪ್ರವೇಶಿಸುವ ಆಸೆ ಕಷ್ಟ ಕಷ್ಟವಾಗಿದೆ. ಕೆಕೆಆರ್ ಆಡಿದ 13 ಪಂದ್ಯಗಳಲ್ಲಿ 5 ಜಯ, 6 ಸೋಲು ಕಂಡಿದೆ. ಅಲ್ಲದೆ 2 ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಹೀಗಾಗಿ ಕೆಕೆಆರ್ ಮುಂದಿನ ಒಂದು ಪಂದ್ಯವನ್ನು ಗೆದ್ದರೆ 14 ಅಂಕಗಳನ್ನು ಕಲೆ ಹಾಕಬಹುದು. ಈ ಮೂಲಕ ಕೆಕೆಆರ್ ಬೇರೆ ತಂಡಗಳ ಫಲಿತಾಂಶವನ್ನು ಕಾದು ನೋಡಬೇಕಿದೆ. ಕೆಕೆಆರ್ ಪ್ಲೇ ಆಫ್ ಪ್ರವೇಶಿಸುವುದು ಕೊಂಚ ಕಷ್ಟವಾಗಿದೆ. ಮೇಲಿರುವ ಮುಂಬೈ, ಡೆಲ್ಲಿ ತಂಡಗಳು ಮುಂದಿನ ಪಂದ್ಯಗಳಲ್ಲಿ ಸೋತು, ರನ್ ರೇಟ್ನಲ್ಲಿ ಹಿಂದಿರಬೇಕಾಗುತ್ತದೆ. ಆಗ ಮಾತ್ರ ಕೆಕೆಆರ್ ಮುಂದಿನ ಹಂತ ಪ್ರವೇಶಿಸುವ ಪಡೆಯುವ ಸಾಧ್ಯತೆ ಇದೆ.








