ಕರ್ನಾಟಕ ಹೋಟೆಲ್ ಕಾರ್ಮಿಕರ ಸಂಘದ ಕ್ಯಾಲೆಂಡರ್ ಬಿಡುಗಡೆ
– ಜಿಲ್ಲಾ ಅಧ್ಯಕ್ಷರು ಮತ್ತು ಜಿಲ್ಲಾ ಪದಾಧಿಕಾರಿಗಳ ಪದಗ್ರಹಣ ಸಂಭ್ರಮ
– ರಾಜ್ಯದ ವಿವಿಧ ಜಿಲ್ಲೆಯಿಂದ ಬಂದ ಹೋಟೆಲ್ ಕಾರ್ಮಿಕರು
NAMMUR EXPRESS NEWS
ಬೆಂಗಳೂರು: ಕರ್ನಾಟಕ ಹೋಟೆಲ್ ಕಾರ್ಮಿಕರ ಸಂಘ (ರಿ) ಇದರ 2025ನೇ ಸಾಲಿನ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮ ಮತ್ತು ಹೊಸದಾಗಿ ಆಯ್ಕೆಯಾದ ಜಿಲ್ಲಾ ಅಧ್ಯಕ್ಷರು ಮತ್ತು ಜಿಲ್ಲಾ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಹೋಟೆಲ್ ಕಾರ್ಮಿಕರ ಸಮ್ಮುಖದಲ್ಲಿ ಅತ್ಯಂತ ಅರ್ಥಪೂರ್ಣವಾಗಿ ರಾಜಧಾನಿಯಲ್ಲಿ ನಡೆಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಹೋಟೆಲ್ ಕಾರ್ಮಿಕರ ಸಂಘ (ರಿ) ರಾಜ್ಯಾಧ್ಯಕ್ಷರಾದ ಸತೀಶ್ ಜೋಗಿ ಅವರು ವಹಿಸಿದ್ದರು.
ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆಯ ಕಾರ್ಯಕ್ರಮವನ್ನು ಹಿರಿಯ ಹೋಟೆಲ್ ಕಾರ್ಮಿಕರಾದ ಚಂದ್ರಪ್ಪ ಕಾಫಿ ಮಾಸ್ಟರ್ ಅವರಿಂದ ನೆರವೇರಿಸಲಾಯಿತು.
ರಾಜ್ಯ ಸಮಿತಿಗೆ ರಾಜ್ಯ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಉಮೇಶ್ ಅವರನ್ನು ಆಯ್ಕೆ ಮಾಡಿ ಅಧಿಕಾರ ಹಸ್ತಾಂತರಿಸಿ ಪದಗ್ರಹಣ ಮಾಡಲಾಯಿತು.
ಜಿಲ್ಲಾ ಅಧ್ಯಕ್ಷರ ಪದಗ್ರಹಣ ಸಂಭ್ರಮ
ಬೆಂಗಳೂರು ಜಿಲ್ಲಾ ಅಧ್ಯಕ್ಷರಾಗಿ ರವಿ ಪೂಜಾರಿ ಅವರನ್ನು, ಮೈಸೂರು ಜಿಲ್ಲಾ ಅಧ್ಯಕ್ಷರಾಗಿ ಅವಿನಾಶ್ ಗೌಡ್ರು ಅವರನ್ನು, ಚಿಕ್ಕಮಗಳೂರು ಜಿಲ್ಲಾ ಅಧ್ಯಕ್ಷರಾಗಿ ಸತೀಶ್ ಪೂಜಾರಿ ಅವರನ್ನು, ಬಿಜಾಪುರ ಜಿಲ್ಲಾ ಅಧ್ಯಕ್ಷರಾಗಿ ರಫೀಕ್ ಅವರನ್ನು, ರಾಮನಗರ ಜಿಲ್ಲಾ ಅಧ್ಯಕ್ಷರಾಗಿ ದಿನೇಶ್ ಪಿ ಅವರನ್ನು, ವಿಜಯನಗರ ಜಿಲ್ಲಾ ಅಧ್ಯಕ್ಷರಾಗಿ ನಾಗರಾಜ್ ಅವರನ್ನು, ಕೋಲಾರ ಜಿಲ್ಲಾ ಅಧ್ಯಕ್ಷರಾಗಿ ಅನಿಲ್ ಡಿಸೋಜಾ ಅವರನ್ನು, ಮಂಗಳೂರು ಜಿಲ್ಲಾ ಅಧ್ಯಕ್ಷರಾಗಿ ಮೋಹನ್ ಟಿ ಅವರನ್ನು, ಆಯ್ಕೆ ಮಾಡಿ ಸಂಘದ ಗುರುತಿನ ಚೀಟಿ , ಪ್ರಮಾಣ ಪತ್ರ, ಮತ್ತು ಸನ್ಮಾನ ಮಾಡುವುದರೊಂದಿಗೆ ಪದಗ್ರಹಣ ಮಾಡಲಾಯಿತು.
ರಾಜ್ಯ ನಿರ್ದೇಶಕರಾದ ಅಣ್ಣಪ್ಪ ಎಸ್ ಪೂಜಾರಿ, ಸತ್ಯನಾರಾಯಣ ಸೇರಿಗಾರ್, ಸಂಗೀತ ಕೋಟೆಬಾಗಿ, ಬೆಂಗಳೂರು ಘಟಕದ ಮನೋಹರ್ ಎನ್ ಎಸ್ (ಕಾರ್ಯಾಧ್ಯಕ್ಷರು),
ನವೀನ್.ಕೆ.ದೇವಾಡಿಗ(ಸಹ ಕಾರ್ಯದರ್ಶಿಗಳು), ರಾಜೇಶ್ (ಶ್ರೀ ಶೈಲಂ)ಸಂಘಟನಾ ಕಾರ್ಯದರ್ಶಿ, ಚೇತನ್ ಕುಮಾರ್ ಸಂಘಟನಾ ಕಾರ್ಯದರ್ಶಿ, ನಾಗರಾಜ್ ಗಾಣಿಗ(ಜಿಲ್ಲಾ ನಿರ್ದೇಶಕರು ), ರವೀಂದ್ರ ನಾಯ್ಕ, ಜಿಲ್ಲಾ ನಿರ್ದೇಶಕರು, ವೆಂಕಟೇಶ್ ಬಿ.ಟಿ ಜಿಲ್ಲಾ ಸಲಹೆಗಾರರು ಸೇರಿ ಅನೇಕರು ಹಾಜರಿದ್ದರು. ವಿದ್ಯಾರ್ಥಿ ಪ್ರೋತ್ಸಾಹ ಧನ, ಅರ್ಹ ಕಾರ್ಮಿಕರಿಗೆ ಅನಾರೋಗ್ಯ ತುತ್ತಾದಲ್ಲಿ ಆರೋಗ್ಯ ಸಹಾಯಧನ, ಸರ್ಕಾರದ ಕಾರ್ಮಿಕರ ಸೌಲಭ್ಯ ಹಾಗೂ ಯೋಜನೆಯನ್ನು ಹೋಟೆಲ್ ಕಾರ್ಮಿಕರಿಗೆ ತಲುಪಿಸುವಲ್ಲಿ ಕರ್ನಾಟಕ ಹೋಟೆಲ್ ಕಾರ್ಮಿಕರ ಸಂಘ ಶ್ರಮಿಸುತ್ತಿದೆ. ರಾಜ್ಯದ ಪ್ರತಿ ಜಿಲ್ಲೆ ಹಾಗೂ ತಾಲೂಕಲ್ಲಿ ತನ್ನ ಸಂಘಟನೆ ವಿಸ್ತರಣೆ ಮಾಡುತ್ತಿದೆ.