ಕರ್ನಾಟಕ ಟಾಪ್ ನ್ಯೂಸ್
– ಬೆಂಗಳೂರು: ಉಡದಾರ ಬಿಗಿದುಕೊಂಡು ಬಾಲಕ ಆತ್ಮಹತ್ಯೆ!
– ಮೈಸೂರು: ವಾಟ್ಸಾಪ್ ಮೆಸೇಜ್ಗೆ ಹೆದರಿ ಯುವತಿ ಸೂಸೈಡ್!
– ನಂಜನಗೂಡು: ಫೈನಾನ್ಸ್ ಕಿರುಕುಳ, ರಾಜ್ಯದಲ್ಲೇ ಮೊದಲ ಬಂಧನ
NAMMUR EXPRESS NEWS
ಬೆಂಗಳೂರು: ಮೊಬೈಲ್ ಯಾಕೆ ಅತಿಯಾಗಿ ಬಳಸುತ್ತೀಯ ಎಂದು ಹೆತ್ತವರು ಪ್ರಶ್ನೆ ಮಾಡಿದ್ದಕ್ಕೆ ಮನನೊಂದ 13 ವರ್ಷದ ಬಾಲಕ ತಂಗಿ ಮುಂದೆಯೇ ತನ್ನ ಸೊಂಟಕ್ಕೆ ಕಟ್ಟುವ ನೂಲಿನಿಂದ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾನೆ. ಮನೆಯವರ ಮಾತು ಕೇಳದೆ ಅತಿಯಾಗಿ ಮೊಬೈಲ್ ಬಳಸುತ್ತಿದ್ದ ಕಾರಣ ಮನೆಯಲ್ಲಿ ಮೊಬೈಲ್ ಇಡದೇ ಬಾಲಕನ ತಂದೆ, ತಾಯಿ ತಮ್ಮೊಂದಿಗೆ ಮೊಬೈಲ್ ತೆಗೆದುಕೊಂಡು ಹೋಗಿದ್ದರು. ಮನೆಯಲ್ಲಿ ಮೊಬೈಲ್ ಇಲ್ಲದೇ ಕೋಪಿತಗೊಂಡ ಬಾಲಕ ಸೊಂಟದಲ್ಲಿದ್ದ ಉಡದಾರವನ್ನು ಬಿಚ್ಚಿಕೊಂಡು ಫ್ಯಾನ್ಗೆ ಕಟ್ಟಿ ಅದರ ಕುತ್ತಿಗೆಗೆ ಬಿಗಿದುಕೊಂಡು ತಂಗಿಯ ಕಣ್ಣ ಮುಂದೆಯೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
* ಮೈಸೂರು: ವಾಟ್ಸಾಪ್ ಮೆಸೇಜ್ಗೆ ಹೆದರಿ ಯುವತಿ ಸೂಸೈಡ್!
ಮೈಸೂರು : ಮೃತ ಕವನಾಳ ಸ್ನೇಹಿತೆಗೆ ವಾಟ್ಸಾಪ್ನಲ್ಲಿ ಬೇರೆಯವರು ಮೆಸೇಜ್ ಮಾಡಿದ್ದರಂತೆ. ಈ ವಿಚಾರ ಪಕ್ಕದ ಮನೆಯವರಿಗೆ ಗೊತ್ತಾಗಿತ್ತು ಎನ್ನಲಾಗಿದೆ. ಆದರೆ ಈ ಕವನಳ ಸ್ನೇಹಿತೆಗೆ ಅಲ್ಲ, ಖುದ್ದು ಕವನಳಿಗೇ ಬರುತ್ತಿದ್ದ ಮೆಸೇಜ್ಗಳು ಅಂತ ಅಪಪ್ರಚಾರ ಮಾಡಿದ್ರಂತೆ. ಈ ಆರೋಪದಿಂದ ಕವನ ಬೇಸತ್ತಿದ್ದು, ಆಕೆಯ ಪೋಷಕರು ಕಿರುಕುಳ, ಅಪಮಾನ ಮಾಡುತ್ತಿದ್ದಾರೆಂದು ಮಾನಸಿಕವಾಗಿ ನೊಂದು ವಾಟ್ಸಾಪ್ ಮೆಸೇಜ್ಗೆ ಹೆದರಿ ಯುವತಿಯೊಬ್ಬಳು ಸೂಸೈಡ್ ಮಾಡಿಕೊಂಡಿದ್ದು, ಜೊತೆಗೆ ಸಾಯುವ ಮೊದಲು ಮನೆ ಬಾಗಿಲಲ್ಲಿ ಪಕ್ಕದ ಮನೆಯವರ ಹೆಸರು ಬರೆದು ನನ್ನ ಸಾವಿಗೆ ಇವರೇ ಕಾರಣ ಎಂದು ತಿಳಿಸಿದ್ದಾಳೆ. ಕವನ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ಈ ಬಗ್ಗೆ ಮೃತ ಕವನಳ ತಾಯಿ ಗಾಯತ್ರಿ ಗುಂಡ್ಲುಪೇಟೆ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
* ನಂಜನಗೂಡು: ಫೈನಾನ್ಸ್ ಕಿರುಕುಳ, ರಾಜ್ಯದಲ್ಲೇ ಮೊದಲ ಬಂಧನ
ನಂಜನಗೂಡು: ಮೈಕ್ರೋ ಫೈನಾನ್ಸ್ಗಳ ಕಿರುಕುಳ ರಾಜ್ಯವನ್ನೇ ವ್ಯಾಪಿಸುತ್ತಿರುವ ಸಂದರ್ಭದಲ್ಲಿ ನಂಜನಗೂಡು ಪೊಲೀಸರು ಸಾಲಗಾರರಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಐದು ಮೈಕ್ರೋಫೈನಾನ್ಸ್ಗಳ ಮೇಲೆ ಪ್ರಕರಣ ದಾಖಲಾಗದೇ, ನಾಲ್ವರನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಬಿಎಸ್ಎಸ್ ಕಂಪನಿಯ ಅರಸನಕರೆಯ ಆಕಾಶ, ಗ್ರಾಮೀಣ ಕೂಟದ ಸಿದ್ದರಾಜು ಹುಣಸಳ್ಳಿ, ಉಜ್ಜಿವನ್ -ನಾನ್ಸ್ನ ಲೋಕೇಶ, ಐಡಿಎಫ್ಎಸ್ ಕಂಪನಿಯ ಕೋಟೆ ಸಿದ್ದರಾಜು ಅವರನ್ನು 14 ದಿನಗಳ ಕಾಲ ಕಾಲಾವಧಿ ಬಂಧನಕ್ಕೆ ಕಳುಹಿಸಲಾಗಿದೆ. ಈ ಮೂಲಕ ನಂಜನಗೂಡಿನ ಡಿವೈಎಸ್ ಪಿ, ಹುಲ್ಲಹಳ್ಳಿ ಠಾಣಾಧಿಕಾರಿ ಚೇತನ್ ತಂಡ ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಹಗರಣದ ಮೊದಲ ಬಂಧನ ಮಾಡಿರುವ ಪ್ರಶಂಸೆಗೆ ಪಾತ್ರವಾಗಿದೆ. ಪ್ರಕರಣದ ಮತ್ತೊಬ್ಬ ಆರೋಪಿ ಧರ್ಮಸ್ಥಳ ಸ್ತ್ರೀಶಕ್ತಿ ಸಂಘದ ಸ್ಥಳೀಯ ವ್ಯವಸ್ಥಾಪಕರಿಗಾಗಿ ಬಲೆ ಬೀಸಲಾಗಿದೆ ಎಂದು ಸೂಚಿಸಲಾಗಿದೆ.