ಟಾಪ್ 6 ನ್ಯೂಸ್ ಕರ್ನಾಟಕ
– ಅಂಕೋಲಾ : ಬ್ಯಾಂಕ್ ನ ಹ್ಯಾಕ್ ಮಾಡಿ 33 ಲಕ್ಷ ದೋಚಿದ ಸೈಬರ್ ಕಳ್ಳರು !
– ರಾಯಚೂರು : ಕಾಲೇಜು ವಿದ್ಯಾರ್ಥಿನಿಯ ಕತ್ತು ಕೊಯ್ದು ಬರ್ಬರ ಹತ್ಯೆ..!
– ಹಾಸನ : ಎಟಿಎಂ ಅನ್ನೇ ಕಳ್ಳತನ ಮಾಡಿದ ದುಷ್ಕರ್ಮಿಗಳು..!
– ಮೈಸೂರು: ದೇವರಿಗೆ ಬಿಟ್ಟಿದ್ದ ಗೂಳಿ ಮೇಲೆ ಮಚ್ಚಿನಿಂದ ಹಲ್ಲೆ..!
– ವಿಜಯಪುರ : ಮದ್ಯಪಾನದಲ್ಲಿ ಆ್ಯಸಿಡ್ ಬೆರೆಸಿ ಕುಡಿದ ವ್ಯಕ್ತಿ ಸಾವು
– ಹಾಸನ : ಖಾಸಗಿ ಬಸ್ ಅಡ್ಡಗಟ್ಟಿ ಲಾಂಗ್ ಬೀಸಿದ ಹಾಸನದ ಪುಡಿ ರೌಡಿ
NAMMUR EXPRESS NEWS
ಅಂಕೋಲಾ : ಆರ್ಟಿಜಿಎಸ್ ಮೂಲಕ ಬೇರೆ ಖಾತೆದಾರರಿಗೆ ಹೋಗಬೇಕಿದ್ದ ಹಣವನ್ನು ಸೈಬರ್ ಕಳ್ಳರು ಹ್ಯಾಕ್ಸ್ ಮಾಡಿ 33,42,845 ಲಕ್ಷವನ್ನು ದೋಚಿರುವ ಘಟನೆ ಅಂಕೋಲಾ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ನ ಕೇಂದ್ರ ಕಚೇರಿಯಲ್ಲಿ ನಡೆದಿದೆ. ಜ.24, 27ರಂದು ನಡೆದಿದೆ ಎಂದು ಅಂದಾಜಿಸಲಾಗಿದೆ. ಕಾರವಾರದಲ್ಲಿ ಸೈಬರ್ ಕ್ರೈಂ ವಿಭಾಗದ ಠಾಣೆಯಲ್ಲಿ ದೂರು ದಾಖಲಾಗಿದೆ. ಅಂಕೋಲಾ ಕೇಂದ್ರ ಕಚೇರಿಯಲ್ಲಿ ಖಾತೆದಾರರಾದ ಮೀನಾಕ್ಷಿ ಕೃಷ್ಣಗೌಡರಿಂದ ವ್ಯವಸಾಯ ಸೇವಾ ಸಹಕಾರಿ ಸಂಘಕ್ಕೆ ಆರ್ಟಿಜಿಎಸ್ ಮಾಡಿದ ₹5 ಲಕ್ಷ, ವೆಂಕಟೇಶ್ವರ ಗ್ಯಾಸ್ ಸೆಂಟರ್ನಿಂದ ವೆಂಕಟೇಶ್ವರ ಗ್ಯಾಸ್ ಸೆಂಟರ್ಗೆ ಆರ್ಟಿಜಿಎಸ್ ₹5,46,000 ಲಕ್ಷ, ಇವರದೇ ಮತ್ತೊಂದು ಖಾತೆಗೆ ₹6,60,000 ಲಕ್ಷ, ಸವಿತಾ ವೆಂಕಟರಮಣ ನಾಯ್ಕರಿಂದ ಟಾಫೆ ಅಕ್ಸೆಸ್ ಲಿ.ಗೆ ಆರ್ಟಿಜಿಎಸ್ ಮಾಡಿದ ₹16, 36,895 ಲಕ್ಷ ಸೇರಿ ಒಟ್ಟು 33,42,895 ಲಕ್ಷ ಹಣವು ಖಾತೆಗೆ ಜಮೆ ಆಗದೇ ಹ್ಯಾಕ್ ಆಗಿದೆ ಎಂದು ದೂರು ನೀಡಲಾಗಿದೆ.
– ರಾಯಚೂರು : ಕಾಲೇಜು ವಿದ್ಯಾರ್ಥಿನಿಯ ಕತ್ತು ಕೊಯ್ದು ಬರ್ಬರ ಹತ್ಯೆ..!
ರಾಯಚೂರು : ಕತ್ತು ಸೀಳಿ ಎಂಎಸ್ಸಿ ವಿದ್ಯಾರ್ಥಿನಿಯ ಬರ್ಬರ ಹತ್ಯೆ ಮಾಡಿರುವಂತಹ ಘಟನೆ ಜಿಲ್ಲೆಯ ಸಿಂಧನೂರಿನ ಹೊರ ಭಾಗದಲ್ಲಿ ನಡೆದಿದೆ. ಸಿಂಧನೂರು ಸರ್ಕಾರಿ ಕಾಲೇಜಿನಲ್ಲಿ ಎಂಎಸ್ಸಿ ಓದುತ್ತಿದ್ದ ಶಿಫಾ ಮೃತ ವಿದ್ಯಾರ್ಥಿನಿ. ಹಾಡಹಗಲೇ ನಡುರಸ್ತೆಯಲ್ಲಿ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿ ಮುಬಿನ್ ಅನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಸಿಂಧನೂರು ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಲಿಂಗಸುಗೂರಿನ ನಿವಾಸಿಯಾಗಿರುವ ಶಿಫಾಳನ್ನು ಪರಿಚಯಸ್ಥರೇ ಹತ್ಯೆಗೈದಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಸ್ಥಳಕ್ಕೆ ಸಿಂಧನೂರು ಪಟ್ಟಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
– ಹಾಸನ : ಎಟಿಎಂ ಅನ್ನೇ ಕಳ್ಳತನ ಮಾಡಿದ ದುಷ್ಕರ್ಮಿಗಳು..!
ಹಾಸನ: ದುಷ್ಕರ್ಮಿಗಳು ಇಂಡಿಯಾ ಒನ್ ಎಟಿಎಂ ಯಂತ್ರವನ್ನೇ ಕಳವು ಮಾಡಿರುವ ಘಟನೆ ಹಾಸನದ ಪಂಚಮುಖಿ ಬೃಹತ್ ಆಂಜನೇಯ ವಿಗ್ರಹದ ಸಮೀಪದಲ್ಲೇ ಇರುವ ಇಂಡಿಯಾ ಒನ್ ಎಟಿಎಂ ಯಂತ್ರ ಕಳ್ಳರು ಕದ್ದೊಯ್ದಿದ್ದಾರೆ. ಮೊದಲೇ ಸಂಚು ಮಾಡಿ ಎಟಿಎಂ ಪಕ್ಕದಲ್ಲಿರುವ ಮನೆಗಳ ಚಿಲಕ ಹಾಕಿ ಎಟಿಎಂಗೆ ನುಗ್ಗಿದ್ದಾರೆ. ಸೈರನ್ ಬಾರದಂತೆ ನಿಗಾ ವಹಿಸಿದ್ದು, ನಂತರ ಹಣದ ಸಮೇತ ಎಟಿಎಂ ಬಾಕ್ಸನ್ನೆ ಕದ್ದೊಯ್ದಿದ್ದಾರೆ. ಬೆಳಗಿನ ವೇಳೆ ಜನರಿಗೆ ಎಟಿಎಂ ಕಳ್ಳತನ ಆಗಿರುವ ಬಗ್ಗೆ ತಿಳಿದು ಬಂದಿದೆ.
– ಮೈಸೂರು: ದೇವರಿಗೆ ಬಿಟ್ಟಿದ್ದ ಗೂಳಿ ಮೇಲೆ ಮಚ್ಚಿನಿಂದ ಹಲ್ಲೆ
ಮೈಸೂರು: ದೇವರಿಗೆ ಹರಕೆಗೆ ಬಿಟ್ಟಿದ್ದ ಗೂಳಿ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿರುವ ಅಮಾನವೀಯ ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರು ಜಿಲ್ಲೆಯ ಜಯಪುರ ಹೋಬಳಿಯ ಹನಗಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ದುಷ್ಕರ್ಮಿಗಳು ಗೂಳಿಯ ಹಿಂಭಾಗಕ್ಕೆ ಮಚ್ಚಿನಿಂದ ಹಲ್ಲೆ ನಡೆಸಿ ಓಡಿ ಹೋಗಿದ್ದಾರೆ. ಗಾಯಗೊಂಡ ಗೂಳಿಗೆ ಸ್ಥಳೀಯರು ಅರಿಶಿಣ ಹಚ್ಚಿ ಚಿಕಿತ್ಸೆ ಕೊಡಿಸಿದ್ದಾರೆ. ರಾಜ್ಯದಲ್ಲಿ ಗೋವುಗಳ ಮೇಲೆ ಸಾಲು ಸಾಲು ಹಲ್ಲೆ ಪ್ರಕರಣಗಳು ನಡೆಯುತ್ತಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
– ವಿಜಯಪುರ : ಮದ್ಯಪಾನದಲ್ಲಿ ಆ್ಯಸಿಡ್ ಬೆರೆಸಿ ಕುಡಿದ ವ್ಯಕ್ತಿ ಸಾವು
ವಿಜಯಪುರ: ಬಾರ್ನಲ್ಲಿ ಮದ್ಯ ಸೇವನೆಗೆ ಹೋಗಿದ್ದ ವ್ಯಕ್ತಿ ನೀರು ಎಂಬುದಾಗಿ ಭಾವಿಸಿ ಮದ್ಯಕ್ಕೆ ಆ್ಯಸಿಡ್ ಬೆರೆಸಿಕೊಂಡು ಕುಡಿದು ಸಾವನ್ನಪ್ಪಿರುವ ಘಟನೆ ವಿಜಯಪುರದಲ್ಲಿ ನಡೆದಿದೆ. ಅವರ ಸಾವಿಗೆ ಸಂಬಂಧಿಸಿದಂತೆ ಬಾರ್ ಮಾಲೀಕ, ಬಿಜೆಪಿ ಮುಖಂಡನ ವಿರುದ್ಧ ಎಫ್ಐಆರ್ ದಾಖಲಾಗಿದೆ. ವಿಜಯಪುರದ ನಿವಾಸಿ ಮಹಮ್ಮದ್ ಶಫೀಕ್ ಮೃತ ದುರ್ದೈವಿ. ಅವರು ನಗರದ ಸಿದ್ಧಾರ್ಥ್ ಬಾರ್ಗೆ ಮದ್ಯ ಸೇವನೆಗೆ ತೆರಳಿದ್ದರು. ಈ ವೇಳೆ, ಗ್ರಾಹಕರು ಕುಳಿತುಕೊಳ್ಳುವ ಟೇಬಲ್ ಮೇಲೆ ಇಟ್ಟಿದ್ದ ಆ್ಯಸಿಡ್ಅನ್ನು ನೀರೆಂದು ಭಾವಿಸಿ ಮದ್ಯಕ್ಕೆ ಬೆರೆಸಿಕೊಂಡು ಕುಡಿದಿದ್ದಾರೆ. ಕೂಡಲೇ ಅವರಿಗೆ ಹೊಟ್ಟೆ ಉರಿ ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಖಾಸಗಿ ಬಸ್ ಅಡ್ಡಗಟ್ಟಿ ಲಾಂಗ್ ಬೀಸಿದ ಹಾಸನದ ಪುಡಿ ರೌಡಿ ಹಾಸನದಲ್ಲಿ ಪುಡಿರೌಡಿಯೊಬ್ಬ ಅಟ್ಟಹಾಸ ಮೆರೆದಿದ್ದಾನೆ. ಖಾಸಗಿ ಬಸ್ ತಡೆದು ಲಾಂಗ್ನಿಂದ ಹಲ್ಲೆಗೆ ಯತ್ನಿಸಿದ್ದಾನೆ. ಹಾಸನ ಹೊರವಲಯದ ಬೈಪಾಸ್ ರಸ್ತೆಯಲ್ಲಿ ರಾತ್ರಿ 2 ಗಂಟೆಗೆ ಈ ಘಟನೆ ನಡೆದಿದೆ. ಬೆಂಗಳೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಸುಗಮಾ ಬಸ್ ದೇವರಾಯಪಟ್ಟಣ ಬಳಿ ಬಂದಾಗ KA 51 MV 8912 ನಂಬರ್ನ ಸ್ವಿಫ್ಟ್ ಕಾರನ್ನು ಬಸ್ಸಿನ ಮುಂದೆ ಅಡ್ಡ ಹಾಕಿದ್ದಾನೆ. ಕಾರಿನಿಂದ ಇಳಿದು ಗಲಾಟೆ ಮಾಡಿ ಬಸ್ ಗಾಜನ್ನು ಒಡೆದಿದ್ದು, ಬಸ್ನಲ್ಲಿದ್ದ ಪ್ರಯಾಣಿಕರು ಭಯಭೀತರಾಗಿದ್ದಾರೆ. ಬಸ್ ದೇವರಾಯಪಟ್ಟಣ ಬಳಿ ಬಂದಾಗ KA 51 MV 8912 ನಂಬರ್ನ ಸ್ವಿಫ್ಟ್ ಕಾರನ್ನು ಬಸ್ಸಿನ ಮುಂದೆ ಅಡ್ಡ ಹಾಕಿದ್ದಾನೆ. ಕಾರಿನಿಂದ ಇಳಿದು ಗಲಾಟೆ ಮಾಡಿ ಬಸ್ ಗಾಜನ್ನು ಒಡೆದಿದ್ದು, ಬಸ್ನಲ್ಲಿದ್ದ ಪ್ರಯಾಣಿಕರು ಭಯಭೀತರಾಗಿದ್ದಾರೆ.