ಗೀತಾ ರಮೇಶ್ ಅವರಿಗೆ ತೀರ್ಥಹಳ್ಳಿ ಪ.ಪಂ ಅಧ್ಯಕ್ಷಗಿರಿ!?
– ಅಧ್ಯಕ್ಷರಾಗಿದ್ದ ಸುಶೀಲಾ ಶೆಟ್ಟಿಯವರ ರಾಜೀನಾಮೆ
– ಒಪ್ಪಂದದಂತೆ ಅಧಿಕಾರ ಹಂಚಿಕೆ: ಗೀತಾ ರಮೇಶ್ ಅವರಿಗೆ ಅಧಿಕಾರ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣ ಪಂಚಾಯುತಿಯ ಅಧ್ಯಕ್ಷರಾಗಿದ್ದ ಸುಶೀಲಾ ಶೆಟ್ಟಿಯವರ ರಾಜೀನಾಮೆ ಅಂಗೀಕಾರವಾಗಿದ್ದು, ಎರಡನೇ ಬಾರಿ ಪಟ್ಟಣ ಪಂಚಾಯತ್ ಸದಸ್ಯರಾಗಿರುವ ಗೀತಾ ರಮೇಶ್ ಅವರ ಆಯ್ಕೆ ಬಹುತೇಕ ಪಕ್ಕಾ ಆಗಲಿದೆ. ತೀರ್ಥಹಳ್ಳಿಯ ಪ್ರಮುಖ ಮುಖಂಡರಲ್ಲಿ ಒಬ್ಬರಾಗಿ ಪಕ್ಷ ನಿಷ್ಠೆ ಮೂಲಕ ಗುರುತಿಸಿಕೊಂಡಿರುವ ಗೀತಾ ರಮೇಶ್ ಅವರಿಗೆ ಒಪ್ಪಂದದಂತೆ ಇನ್ನುಳಿದ ಅಧಿಕಾರ ಅವಧಿ ಸಿಗಲಿದೆ ಎನ್ನಲಾಗಿದೆ. ತೀರ್ಥಹಳ್ಳಿ ಪಟ್ಟಣ ಪಂಚಾಯಿತಿಯಯಲ್ಲಿ 15 ಜನ ಸದಸ್ಯರನ್ನು ಒಳಗೊಂಡಿದ್ದು 9 ಜನ ಕಾಂಗ್ರೆಸ್ 6 ಜನ ಬಿಜೆಪಿ ಸದಸ್ಯರಿದ್ದಾರೆ. ಇದೀಗ ಮೂರನೇ ಅವಧಿಗೆ ಗೀತಾ ರಮೇಶ್ ಅವರು ಅಧಿಕಾರ ವಹಿಸಿಕೊಳ್ಳುವ ಸಾಧ್ಯತೆ ಇದೆ.
ಎರಡೂವರೆ ವರ್ಷ ಮೂರು ಅಧ್ಯಕ್ಷರು!
ಎರಡುವರೆ ವರ್ಷ ಅವಧಿಯಲ್ಲಿ ಮೂವರ ನಡುವೆ ಒಡಂಬಡಿಕೆ ಆಗಿತ್ತು. 30 ತಿಂಗಳ ಸವಧಿಯಲ್ಲಿ 10 ತಿಂಗಳು ಶಬನಂ ಅಧ್ಯಕ್ಷರಾಗಿ ಕೆಳಗಿಳಿದಿದ್ದಾರೆ. ಎರಡನೇ ಅವಧಿಗೆ ಆಯ್ಕೆಯಾಗಿದ್ದ ಸುಶೀಲಾ ಶೆಟ್ಟಿ ಅವರ ಅವಧಿ 10 ತಿಂಗಳೆಂದು ನಿಗದಿ ಪಡಿಸಲಾಗಿತ್ತು. ಅವರ ರಾಜೀನಾಮೆ ಈಗ ಅಂಗೀಕಾರವಾಗಿರುವುದರಿಂದ ಅಖಾಡದಲ್ಲಿರುವ ಗೀತಾ ರಮೇಶ್ ಮುಂದಿನ ಅವಧಿಗೆ ತೀರ್ಥಹಳ್ಳಿಯ ಪಟ್ಟಣ ಪಂಚಾಯಿತಿ ಅಧ್ಯಕ್ಷರಾಗಿ ಆಯ್ಕೆಯಾಗುವ ಸಂಭವವಿದೆ. ನೂತನ ಅಧ್ಯಕ್ಷರು ಆಯ್ಕೆಯಾಗುವವರೆಗೆ ಈಗಿರುವ ಉಪಾಧ್ಯಕ್ಷರಾದ ರೆಹಮತ್ ಉಲ್ಲಾ ಅಸಾದಿ ಪ್ರಭಾರಿಯಾಗಿ ಮುಂದುವರಿಯಲಿದ್ದಾರೆ.