ಗೃಹಲಕ್ಷ್ಮಿ ಯೋಜನೆಗೆ ಚಾಲನೆ: ಮಹಿಳೆಯರ ಹರ್ಷ!
– ತೀರ್ಥಹಳ್ಳಿ ಪಟ್ಟಣದಲ್ಲಿ ಕಾರ್ಯಕ್ರಮ: ಶಾಸಕರ ಗೈರು
– ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಾರ್ಯಕ್ರಮ
– ಮೈಸೂರಲ್ಲಿ ನಡೆದ ಕಾರ್ಯಕ್ರಮದ ಲೈವ್
NAMMUR EXPRESS NEWS
ತೀರ್ಥಹಳ್ಳಿ: ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ಎಲ್ಲೆಡೆ ಚಾಲನೆ ಸಿಕ್ಕಿದ್ದು ಮಹಿಳೆಯರು ಹರ್ಷ ವ್ಯಕ್ತಪಡಿಸಿದ್ದಾರೆ. ತೀರ್ಥಹಳ್ಳಿ ಪಟ್ಟಣದಲ್ಲಿ ಪಟ್ಟಣ ಪಂಚಾಯತ್ ವತಿಯಿಂದ ಶಾಂತವೇರಿ ಗೋಪಾಲ ಗೌಡ ರಂಗಮಂದಿರದಲ್ಲಿ ಕಾರ್ಯಕ್ರಮ ನಡೆದಿದ್ದು ಸ್ಥಳೀಯ ಶಾಸಕರಾದ ಆರಗ ಜ್ಞಾನೇಂದ್ರ ಗೈರು ಆಗಿದ್ದರು.
ತೀರ್ಥಹಳ್ಳಿ ತಾಲೂಕಿನ ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಾರ್ಯಕ್ರಮ ನಡೆದಿದ್ದು ಮೈಸೂರಲ್ಲಿ ನಡೆದ ಕಾರ್ಯಕ್ರಮದ ಲೈವ್ ಮಾಡಲಾಯಿತು. ಪ್ರತಿ ಗ್ರಾಮದಲ್ಲಿ ಸಾರಾರು ಮಹಿಳೆಯರು ಭಾಗಿಯಾಗಿದ್ರು.
ತೀರ್ಥಹಳ್ಳಿ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಅನ್ನಭಾಗ್ಯ, ಶಕ್ತಿ ಯೋಜನೆ, ಗೃಹ ಜ್ಯೋತಿ ಹಾಗೂ ಗೃಹಲಕ್ಷ್ಮಿ, ಯುವ ನಿಧಿ ಯೋಜನೆ ಕಾಂಗ್ರೆಸ್ ಸರ್ಕಾರದ ಹೆಮ್ಮೆಯ ಯೋಜನೆ ಆಗಿದೆ. ಇಂದು ಗೃಹಲಕ್ಷ್ಮಿ ಯೋಜನೆಯನ್ನು ಸಿದ್ದರಾಮಯ್ಯನವರು ಮೈಸೂರಿನಲ್ಲಿ ಇದಕ್ಕೆ ಚಾಲನೆ ಕೊಡುತ್ತಿದ್ದಾರೆ. ಒಂದು ಕೋಟಿ ಒಂಬತ್ತು ಲಕ್ಷದ 55 ಸಾವಿರ ಜನರು ಈಗಾಗಲೇ ಆಯ್ಕೆಯಾಗಿರುವುದರಿಂದ ಒಂದೇ ಸಲ ಚಾಲನೆ ಕೊಡುವುದರಿಂದ ಎಲ್ಲಾ ಅಕೌಂಟಟಿಗೆ 2000 ರೂ ಹಣ ಪ್ರತಿ ತಿಂಗಳು ಕೊಡಲಾಗುತ್ತದೆ. ನಿಮ್ಮ ಖಾತೆಗೆ ಹಣ ಬಂದ ತಕ್ಷಣ ನಿಮ್ಮ ಮೊಬೈಲ್ ಗೆ ಮೆಸೇಜ್ ಬರುತ್ತದೆ.
ಮೊದಲನೆಯದಾಗಿ ರಾಜ್ಯ ಸರ್ಕಾರ ತೆಗೆದುಕೊಂಡಿರುವಂತಹ ಈ ಗೃಹಲಕ್ಷ್ಮಿ ಯೋಜನೆಗೆ ಅಭಿನಂದನೆ ಸಲ್ಲಿಸುವಂತಹ ಕಾರ್ಯಕ್ರಮ ಎಲ್ಲೆಡೆ ನಡೆಯುತ್ತಿದೆ.
ಗೃಹಲಕ್ಷ್ಮಿ ಯೋಜನೆಯನ್ನು ಖಂಡಿಸಿದವರೆಲ್ಲ ಇಂದು ನಾನು ಯಾಕೆ ಖಂಡಿಸಿದೆ ಎನ್ನುವಂತಹ ಯೋಚನೆಯಲ್ಲಿದ್ದಾರೆ. ಈ ಕಾರ್ಯಕ್ರಮ ದೇಶಾದ್ಯಂತ ತಲುಪಬೇಕು ಎಂದರು. ಅಪೆಕ್ಸ್ ಬ್ಯಾಂಕ್ ಮಾಜಿ ಅಧ್ಯಕ್ಷರಾದ ಡಾ. ಆರ್ಎಂ ಮಂಜುನಾಥಗೌಡ, ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಸುಶೀಲ ಶೆಟ್ಟಿ, ಉಪಾಧ್ಯಕ್ಷರಾದ ಅಸಾದಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ರತ್ನಾಕರ್ ಶೆಟ್ಟಿ ಸದಸ್ಯರಾದ ಗಣಪತಿ, ಮಂಜುಳಾ ನಾಗೇಂದ್ರ, ಗೀತಾ ರಮೇಶ್, ಶಬನಂ, ನಮ್ರತ್, ಮುಖ್ಯ ಅಧಿಕಾರಿಗಳಾದ ಕುರಿಯಾ ಕೋಸ್, ತಾಲೂಕು ಪಂಚಾಯತ್ ಇಒ ಶೈಲಾ, ಡಾ.ಸುಂದರೇಶ್ ಸೇರಿದಂತೆ ಹಲವರು ಇದ್ದರು.