ತೀರ್ಥಹಳ್ಳಿಯಲ್ಲಿ ಸ್ವಾತಂತ್ರ್ಯ ಸಡಗರ!
– ಶಾಲಾ ವಿದ್ಯಾರ್ಥಿಗಳ ಸಾಂಸ್ಕೃತಿಕ ನಡಿಗೆ
– ಆರಗ ಜ್ಞಾನೇಂದ್ರ ಸೇರಿ ಅನೇಕ ಗಣ್ಯರ ಹಾಜರ್
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ತಾಲೂಕು ಆಡಳಿತ, ಪಟ್ಟಣ ಪಂಚಾಯತ್ ಆಡಳಿತ ಹಾಗೂ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಸ್ವಾತಂತ್ರ್ಯ ದಿನವನ್ನು ಆಚರಣೆ ಮಾಡಲಾಯಿತು. ಬೆಳಿಗ್ಗೆ ಎಲ್ಲಾ ಶಾಲೆ ಕಾಲೇಜು ವಿದ್ಯಾರ್ಥಿಗಳು ವಿವಿಧ ವೇಷಭೂಷಣ ಮತ್ತು ಬ್ಯಾಂಡ್ ಜತೆ ಪಥ ಸಂಚಲನ ನಡೆಸಿ ಬಳಿಕ ತೀರ್ಥಹಳ್ಳಿ ಅನಂತಮೂರ್ತಿ ಶಾಲೆ ಹಿಂಭಾಗದ ಮೈದಾನದಲ್ಲಿ ಧ್ವಜಾರೋಹಣ ಮಾಡಲಾಯಿತು. ಶಾಸಕ ಆರಗ ಜ್ಞಾನೇಂದ್ರ, ತಹಸೀಲ್ದಾರ್ ಲಿಂಗರಾಜ್, ಡಿವೈಎಸ್ಪಿ ಗಜಾನನ ವಾಮನ ಸುತಾರ, ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಸುಶೀಲಾ ಶೆಟ್ಟಿ, ಉಪಾಧ್ಯಕ್ಷರಾದ ಹಮತ್ ಉಲ್ಲಾ ಅಸಾದಿ,, ಕ್ಷೇತ್ರ ಶಿಕ್ಷಣಾಧಿಕಾರಿ ಗಣೇಶ್, ಪ್ರಾಂಶುಪಾಲರಾದ ಸುಧಾ, ಮುಖ್ಯೋಪಾಧ್ಯಾಯ ದೇವೇಂದ್ರ ನಾಯ್ಕ್, ತಾ .ಪಂ.ಕಾರ್ಯನಿರ್ವಾಹಣ ಅಧಿಕಾರಿ ಶೈಲ ಮುಖ್ಯಾಧಿಕಾರಿ ಕುರಿಯಾ ಕೋಸ್ ಸೇರಿದಂತೆ ಪಟ್ಟಣ ಪಂಚಾಯತ್ ಸದಸ್ಯರು, ಜನಪ್ರತಿನಿಧಿಗಳು, ಹಲವರು ಇದ್ದರು.
ಸ್ವದೇಶಿ ವಸ್ತು ಬಳಕೆ ಮಾಡಲು ಆರಗ ಕರೆ
ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ, ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ಅಗ್ನಿಪಥ್ ಯೋಜನೆ ಅಡಿಯಲ್ಲಿ ಇಬ್ಬರು ಸೇನೆಗೆ ಸೇರಿರುವುದು ತಾಲೂಕಿಗೆ ಕೀರ್ತಿ ಬಂದತಾಗಿದೆ. ವಿರೋಧ ಇದ್ದರೂ ಕೂಡಾ ಪ್ರಧಾನಿ ನರೇಂದ್ರ ಮೋದಿಯವರು ಯುವಕ ಯುವತಿಯರು ನಮ್ಮ ದೇಶ ಕಾಯುವ ಸೇನಾನಿಗಳಾಗಬೇಕೆಂದು ಅಗ್ನಿಪಥ್ ಯೋಜನೆಗೆ ಚಾಲನೆ ನೀಡಿದರು. ಈ ಪರಿಣಾಮ ಇಂದು ದೇಶದ ಯುವಕ ಯುವತಿಯರು ಸೇನೆಗೆ ಸೇರ್ಪಡೆಗೊಳ್ಳುತ್ತಿದ್ದಾರೆ. ನಮ್ಮ ತಾಲೂಕಿನ ಇಬ್ಬರು ಅಗ್ನಿಪಥ ಯೋಜನೆ ಪಾದಾರ್ಪಣೆ ಮಾಡುತ್ತಿದ್ದಾರೆ. ಇಬ್ಬರ ಭವಿಷ್ಯವು ಉಜ್ವಲವಾಗಿರಲಿ ಎಂದರು.
ಸ್ವಾತಂತ್ರೋತ್ಸವವನ್ನು ನಮ್ಮ ಮನೆಯ ಹಬ್ಬದಂತೆ ಆಚರಿಸುವ ಮನೋಸ್ಥೈರ್ಯವನ್ನು ಬೆಳಸಿಕೊಳ್ಳ ಬೇಕು. ಸ್ಪದೇಶಿ ವಸ್ತುಗಳ ಸದ್ದಳಕೆ ಮಾಡಿಕೊಳ್ಳಬೇಕು. ಮೈಸೂರು ಸ್ಯಾಂಡಲ್ ಸೋಪು ಹಾಗೂ ಇನ್ನಿತರ ವಸ್ತುಗಳನ್ನು ನಾವು ಸದಾಕಾಲ ಬಳೆಸಿಕೊಳ್ಳುವ ಮನಸ್ಸು ನಮ್ಮಲ್ಲಿರ ಬೇಕು. ಸ್ವಾತ೦ತ್ರೊತ್ಸವ ಬರಿ ಆಚರಣೆಯಾಗದೆ ನಮ್ಮ ನಿತ್ಯದ ಕಾಯಕವಾಗಬೇಕು
ಎಂದರು.
ಇದನ್ನೂ ಓದಿ : ತೀರ್ಥಹಳ್ಳಿ ರೆಸಾರ್ಟ್ ಅಲ್ಲಿ ಸಿಕ್ತು ವಿದೇಶಿ ಮದ್ಯ, ಪ್ರಾಣಿಗಳ ಕೊಂಬು!
HOW TO APPLY : NEET-UG COUNSELLING 2023