ತೀರ್ಥಹಳ್ಳಿಯಲ್ಲಿ ಬ್ರಹ್ಮ ಶ್ರೀ ನಾರಾಯಣ ಗುರು ಜನ್ಮ ಜಯಂತಿ!
– ಅದ್ದೂರಿ ಮೆರವಣಿಗೆ: ಸರಳ ಕಾರ್ಯಕ್ರಮ
– ಸಮುದಾಯದ ಅಭಿವೃದ್ಧಿ ಎಸ್.ಎನ್.ಜಿ.ವಿ ಸಂಘಟನೆಯ ಮೂಲ ದ್ಯೇಯ: ವಿಶಾಲ್ ಕುಮಾರ್
NAMMUR EXPRESS
ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ಶ್ರೀ ನಾರಾಯಣ ಗುರುಗಳ 169ನೇ ಜಯಂತಿಯನ್ನು ಆಚರಣೆ ಮಾಡಲಾಯಿತು.
ತೀರ್ಥಹಳ್ಳಿಯ ಪಟ್ಟಣದಲ್ಲಿ ಮೆರವಣಿಗೆ ಮೂಲಕ ಸಾಗಿದ ಸಮಾಜದ ಪ್ರಮುಖರು ಶಾಂತವೇರಿ ಗೋಪಾಲಗೌಡ ರಂಗ ಮಂದಿರದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ನಾರಾಯಣ ಗುರುಗಳ ವಿಚಾರ ಧಾರೆಗಳ ಬಗ್ಗೆ ಗಣ್ಯರು ಮಾತನಾಡಿದರು.
ತೀರ್ಥಪಟ್ಟ ತಾಲ್ಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ,ಆರ್ಯ ಈಡಿಗ ಸಂಘ, ಬ್ರಹ್ಮಶ್ರೀ ನಾರಾಯಣಗುರು ಬಿಲ್ಲವ ಸಮಾಜ ಸೇವಾಸಂಘ, ಶ್ರೀ ನಾರಾಯಣ ಗುರು ವಿಚಾರ ವೇದಿಕೆ 5ಹಾಗೂ ವಿವಿಧ ಸಂಘ-ಸಂಸ್ಥೆಗಳು ಸೇರಿ ಈ ಕಾರ್ಯಕ್ರಮ ಯಶಸ್ವಿಗೊಳಿಸಿದವು.
ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಶಾಸಕ ಆರಗ ಜ್ಞಾನೇಂದ್ರ, ಬ್ರಹ್ಮಶ್ರೀ ನಾರಾಯಣ ಗುರುಗಳು ಸಂಘರ್ಷ ಮಾಡದೆ ಮೌನವಾಗಿ ಶಿವನ ದೇವಸ್ಥಾನಗಳನ್ನು ಸ್ಥಾಪನೆ ಮಾಡುವುದರ ಮೂಲಕ ಹಿಂದೂ ಸಮಾಜದ ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ, ಸಾಮಾಜಿಕ ಸುಧಾರಣೆ ಮಾಡಿದವರು ಹಿಂದೂ ಧರ್ಮದ ಪ್ರತಸ್ಮರಣೀಯರು, ಹಿಂದೂ ಧರ್ಮಕ್ಕೆ ಶಕ್ತಿ ತುಂಬಿದವರು ಎಂದರು. ಶ್ರೀ ನಾರಾಯಣ ಗುರು ವಿಚಾರ ವೇದಿಕೆಯ ತೀರ್ಥಹಳ್ಳಿ ಘಟಕದ ಅಧ್ಯಕ್ಷರಾದ ವಿಶಾಲ್ ಕುಮಾರ್ ಮಾತನಾಡಿ ನಮ್ಮ ಸಂಘಟನೆ ಯಾವುದೇ ಪರ್ಯಾಯ ಸಂಘಟನೆಯಲ್ಲ. ಶ್ರೀ ನಾರಾಯಣ ಗುರುಗಳ ಆದರ್ಶ ಮತ್ತು ಅವರ ಸಿದ್ಧಾಂತಗಳನ್ನು ಲೋಕಕ್ಕೆ ಸಾರುವುದು ಮತ್ತು ಸಮಾಜದ ಅಭಿವೃದ್ಧಿ, ಏಳಿಗೆ ಮೂಲ ಧೈಯ ಉದ್ದೇಶ. ಸಂಘಟನೆಯನ್ನು ಹತ್ತಿಕ್ಕುವ ಪ್ರಯತ್ನ ಮಾಡಬೇಡಿ, ಎಲ್ಲರೂ ಮುಂದಾಗಿ ಸಮಾನತೆಯಿಂದ ಸಂಘಟನೆಯನ್ನು ಬೆಳೆಸಿ ಎಂದು ಕರೆ ನೀಡಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಯೋಗಾನಂದ ಅವಧೂತರು,ತೀರ್ಥಹಳ್ಳಿ ತಹಶೀಲ್ದಾರ್,ಬಿಲ್ಲವ ಸಂಘದ ಅಧ್ಯಕ್ಷ ಮಂಜುನಾಥ್,ಈಡಿಗ ಸಂಘದ ಅಧ್ಯಕ್ಷರಾದ ಮಟ್ಟಿನ ಮನೆ ರಾಮಚಂದ್ರ,ಎಸ್.ಎನ್.ಜಿ.ವಿ,ರಾಜ್ಯ ಅಧ್ಯಕ್ಷ ರಾದ ಸತ್ಯಜಿತ್ ಸುರತ್ಕಲ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.