ಯುವ ಸಹಕಾರಿಯಾಗಿ ನವೀನ್ ಟಿ. ಆರ್!
– ವಿಶ್ವಕರ್ಮ ಸೌಹಾರ್ದ ಸಹಕಾರಿ ಚುನಾವಣೆಯಲ್ಲಿ ಜಯಭೇರಿ
– ಪತ್ರಕರ್ತರಾಗಿ, ಯುವ ಸಂಘಟಕರಾಗಿ ಸಮಾಜ ಸೇವೆ
NAMMUR EXPRESS NEWS
ತೀರ್ಥಹಳ್ಳಿ : ತೀರ್ಥಹಳ್ಳಿ ವಿಶ್ವಕರ್ಮ ಸೌಹಾರ್ದ ಸಹಕಾರಿ ಸಂಘ 2023- 28ರವರೆಗಿನ 5 ವರ್ಷಗಳ ಅವಧಿಗೆ ನಡೆದ ಚುನಾವಣೆಯಲ್ಲಿ ಪತ್ರಕರ್ತ, ಯುವ ಸಂಘಟಕ ನವೀನ್ ಟಿ. ಆರ್ ಗೆಲುವು ಸಾಧಿಸಿದ್ದಾರೆ. ಅಚ್ಚರಿ ಎಂದರೆ ಅದೇ ಸಂಸ್ಥೆಯಲ್ಲಿ ಪಿಗ್ಮಿ ಸಂಗ್ರಾಹಕರಾಗಿ ಅದೇ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ತೀರ್ಥಹಳ್ಳಿಯ ಪ್ರಮುಖ ದಿನ ಪತ್ರಿಕೆ ಛಲಗಾರದಲ್ಲಿ ಸುಮಾರು 12 ವರ್ಷ ಪತ್ರಕರ್ತರಾಗಿ ವಿವಿಧ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ವಿಶ್ವ ಕರ್ಮ ಸೇವಾ ಬಳಗದ ಮೂಲಕ ಸಮುದಾಯದ ಕೆಲಸ ಮಾಡುತ್ತಿದ್ದಾರೆ. ಸಮಾಜದ ಅಭಿವೃದ್ಧಿ, ವಧು ವರರ ವೇದಿಕೆ ವಿಶ್ವ ಕರ್ಮ ವೇದಿಕೆ ಮೂಲಕ ಯುವ ಜನತೆ ಜತೆ ಇದ್ದಾರೆ. ಸೇವಾಭಾರತಿ, ಜ್ಯುನಿಯರ್ ಕಾಲೇಜಲ್ಲಿ ಓದಿದ್ದಾರೆ. ನವೀನ್ ಅವರು ರಮೇಶ್ ಟಿ.ಎನ್ ಮತ್ತು ಆಶಾ ಅವರ ಪುತ್ರ. ಪತ್ನಿ ಮಂಜುಳಾ, ಮಗಳು ಹಿಮಾನ್ವಿ. ಇದೀಗ ಅವರ ಸಹಕಾರಿ ಹುದ್ದೆ ಲಭಿಸಿರುವುದು ಅವರ ಸೇವೆಗೆ ಸಂದ ಫಲ. ಅದರಲ್ಲೂ ನವೀನ್ ಅವರ ಸಿಂಡಿಕೆಟ್ ಇಂದ ಗೆದ್ದಿದ್ದು ನವೀನ್ ಮಾತ್ರ.
ಚುನಾವಣೆ ಏನಾಗಿತ್ತು?
13 ಸಂಖ್ಯಾಬಲದ ಸೊಸೈಟಿಯಲ್ಲಿ 2 ಮಹಿಳೆ, 2 ಬಿಸಿಎಂ ‘ಎ’ ಮತ್ತು 9 ಸಾಮಾನ್ಯ ವರ್ಗಕ್ಕೆ ನಿರ್ದೇಶಕ ಸ್ಥಾನ ಮೀಸಲು ನಿಗಧಿ ಪಡಿಸಲಾಗಿತ್ತು. ಸ್ಪರ್ಧಿಸಿದ್ದ 24 ಸ್ಪರ್ಧಿಗಳ ಪೈಕಿ ಯುವ ಪತ್ರಕರ್ತ ನವೀನ್ ಟಿ.ಆರ್., ಉಪೇಂದ್ರ, ಶಂಕರಾಚಾರ್ ಬಿ.ಜಿ, ಮನೋಜ್, ಚಂದ್ರಶೇಖರ್, ನಾಗಪ್ಪ ಆಚಾರ್, ಜ್ಯೋತಿ ಎ.ಎಸ್., ಭಾಸ್ಕರ ಸಿ, ಮೋಹನ್ ಎಸ್.ಜಿ., ರಾಘವೇಂದ್ರ ಎನ್, ಶಾರದ, ರಾಘವೇಂದ್ರ ಪಿ, ಮಂಜುನಾಥ್ ಎಸ್ ಗೆಲುವು ಸಾಧಿಸಿದ್ದಾರೆ.
ಎಲ್ಲಾ 23 ಮಂದಿಗೂ, ಸಮುದಾಯದವರಿಗೂ ಅಭಿನಂದನೆಗಳು
ನವೀನ್ ಅವರು ತಮ್ಮ ಜತೆಗೆ ಆಯ್ಕೆಯಾದ ಎಲ್ಲಾ ನಿರ್ದೇಶಕರು ಮತ್ತು ನಿರ್ದೇಶಕರ ಚುನಾವಣೆಗೆ ಸ್ಪರ್ಧಿಸಿದ್ದ ಉಮಾಪತಿ ಎಲ್ಜಿ ಅರಳಸುರುಳಿ, ಲಕ್ಷ್ಮೀನಾರಾಯಣ್ ಬಿ ಎಸ್ ಬಿಳಲುಕೊಪ್ಪ, ಅಮಿತ್ ಕುಮಾರ್ ಸುರಾನಿ, ಕೌಸಲ್ಯ ಕೆ ಎಸ್ ತುಂಬೇಸರ, ನಾಗರಾಜ್ ಕೆ.ಜೆ ಮೇಲಿನ ಕುರುವಳ್ಳಿ, ನಾಗೇಶ್ ಜೆ ಜಂಬೇ, ಪುರುಷೋತ್ತಮ ಟಿ ಎಂ ಬೀಳಲುಕೊಪ್ಪ,ಶಿವಕುಮಾರ್ ಟಿ ಜೆ ತುದುರು, ಶಂಕರಾಚಾರ್ಯ ಕೊಂಡ್ಲೂರು, ಶ್ರೀನಿವಾಸ್ ಆಚಾರ್, ನೇರಳೆ ಇವರುಗಳಿಗೆ ಮತನೀಡಿದ ಶೇರುದಾರ ಸಮಾಜ ಬಾಂಧವರಿಗೂ, ಚುನಾವಣೆ ಸಂದರ್ಭದಲ್ಲಿ ಸಲಹೆ ಸಹಕಾರ ನೀಡಿದ ಹಿರಿಯರಿಗೆ ಹಾಗೂ ಪ್ರತ್ಯಕ್ಷ ಪರೋಕ್ಷವಾಗಿ ಸಹಕಾರ ನೀಡಿದ ಎಲ್ಲರಿಗೂ ಈ ಮೂಲಕ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.