ಗೃಹಲಕ್ಷ್ಮಿ ಯೋಜನೆ: ಅಕೌಂಟ್ಗೆ ಬಂತಾ 2000 ರೂಪಾಯಿ?
– ಬ್ಯಾಂಕ್ ಮುಂದೆ ಗೃಹಲಕ್ಷ್ಮಿಯರ ಕ್ಯೂ!
– ಪಾಸ್ ಬುಕ್ ಎಂಟ್ರಿ ಮೆಷಿನ್ ಬಳಿ ಸರದಿ ಸಾಲು
– ಮಹಿಳೆಯರನ್ನು ನಿಯಂತ್ರಿಸಲು ಸೆಕ್ಯೂರಿಟಿ ಗಾರ್ಡ್ ಹರಸಾಹಸ
NAMMUR EXPRESS NEWS
ತೀರ್ಥಹಳ್ಳಿ: ಗೃಹಲಕ್ಷ್ಮಿ ಯೋಜನೆ ಈಗಾಗಲೇ ಜಾರಿಯಾಗಿದೆ. ಮನೆ ಯಜಮಾನಿ ಖಾತೆಗೆ ಮೊದಲ ತಿಂಗಳ 2 ಸಾವಿರ ರೂಪಾಯಿ ಜಮೆಯೂ ಆಗಿದೆ. ಆದರೆ ಅದೆಷ್ಟೋ ಗೃಹಲಕ್ಷ್ಮಿಯರಿಗೆ ಇನ್ನೂ ಹಣ ಬಂದಿಲ್ವಂತೆ! ಅದಕ್ಕೆ ಅವರೆಲ್ಲ ಬ್ಯಾಂಕ್ ಮುಂದೆ ಜಮಾಯಿಸಿದ್ದಾರೆ! ಗೃಹಲಕ್ಷ್ಮಿ ಯೋಜನೆ ಜಾರಿ ಎಫೆಕ್ಟಿಂದಾಗಿ ಖಾಸಗಿ ಬ್ಯಾಂಕ್ ಗಳ ಮುಂದೆ ಮಹಿಳೆಯರು ಸಾಲುಗಟ್ಟಿ ನಿಂತಿರುವುದು ಕಂಡುಬರುತ್ತಿದೆ. ಖಾತೆ ಬ್ಯಾಲೆನ್ಸ್ ಚೆಕ್ ಮಾಡಿಕೊಳ್ಳಲು ಬ್ಯಾಂಕಿಗೆ ಆಗಮಿಸುತ್ತಿರುವ ಗೃಹಲಕ್ಷ್ಮಿಯರು, ಕೈಯಲ್ಲಿ ಪಾಸ್ ಬುಕ್ ಹಿಡಿದು, ಪಾಸ್ ಬುಕ್ ಎಂಟ್ರಿ ಮೆಷಿನ್ ಬಳಿ ಸರದಿ ಸಾಲು ನಿಂತಿದ್ದಾರೆ.
ಮಹಿಳೆಯರನ್ನು ನಿಯಂತ್ರಿಸಲು ಸೆಕ್ಯೂರಿಟಿ ಗಾರ್ಡ್ ಹರಸಾಹಸ ಪಡುತ್ತಿದ್ದಾರೆ. ಗೃಹಲಕ್ಷ್ಮಿ ಯೋಜನೆ ಈಗಾಗಲೇ ಜಾರಿಯಾಗಿದೆ. ಆದರೆ ತಮ್ಮ ಮೊಬೈಲಿಗೆ ಮೆಸೇಜ್ ಬಂದಿಲ್ಲ ಅಂತ ಮಹಿಳೆಯರು ಕಂಗಾಲಾಗಿದ್ದರು. ಹೀಗಾಗಿ ತಮ್ಮ ಬ್ಯಾಂಕ್ ಖಾತೆಗೆ ಗೃಹಲಕ್ಷ್ಮಿ ಹಣ ಬಂದಿದ್ಯೋ ಇಲ್ಲೋ ತಿಳಿದುಕೊಳ್ಳಲು ಬ್ಯಾಂಕ್ ಮುಂದೆ ಜಮಾಯಿಸಿದ್ದಾರೆ.
ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ: ರಾಜ್ಯದ ಗೃಹಲಕ್ಷ್ಮಿಯರಿಗೆ ಸರ್ಕಾರ ಗುಡ್ನ್ಯೂಸ್ ಕೊಟ್ಟಿದ್ದು, ಮತ್ತೆ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ ಕೊಟ್ಟಿದೆ. ಸೆಪ್ಟೆಂಬರ್ 10ರ ವರೆಗೂ ರೇಷನ್ ಕಾರ್ಡ್ ತಿದ್ದುಪಡಿಗೆ ಸರ್ಕಾರ ಅವಕಾಶವನ್ನು ನೀಡಿದೆ.
ಮನೆ ಮುಖ್ಯಸ್ಥೆಯಾಗಿ ಮಹಿಳೆಯರ ಹೆಸರನ್ನು ಬದಲಾಯಿಸಲು ಅವಕಾಶ ನೀಡಿರುವ ಸರ್ಕಾರ, ಹೆಸರು ತಿದ್ದುಪಡಿ ಹಾಗೂ ಹೆಸರು ಕೈಬಿಡಲು ಅಷ್ಟೇ ಅವಕಾಶ ನೀಡಿದೆ. ಇನ್ನು, ರೇಷನ್ ಕಾರ್ಡ್ನಲ್ಲಿ ಮನೆಯ ಒಡತಿ ಯಾರು ಇರಲಿಲ್ಲ ಎಂದರೆ ಹೊಸ ಹೆಸರು ರೇಷನ್ ಕಾರ್ಡ್ಗೆ ಸೇರಿಸಲು ಅವಕಾಶ ನೀಡಲಾಗಿದೆ. ರೇಷನ್ ಕಾರ್ಡ್, ಆಧಾರ್ ಕಾರ್ಡ್ನಲ್ಲಿ ಒಂದು ಹೆಸರು ಇದ್ದು, ಹೆಸರು ಮ್ಯಾಚ್ ಆಗ್ತಿಲ್ಲ ಎಂದರೇ ಕೂಡಲೇ ಅಂತವರು ತಮ್ಮ ಹೆಸರನ್ನು ಕಾರ್ಡ್ನಲ್ಲಿ ತಿದ್ದುಪಡಿ ಮಾಡಲು ಅವಕಾಶ ನೀಡಲಾಗಿದೆ. ಒಂದೊಮ್ಮೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಿಲ್ಲ ಎಂದರೇ ಹೆಸರು ಕಾರ್ಡ್ ತಿದ್ದುಪಡಿ ಮಾಡಿದ ಬಳಿಕ ಗ್ಯಾರಂಟಿ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಬಹುದು.