ಸ್ವಾತಂತ್ರ್ಯ ದಿನದಂದು ಸಮಾಜ ಸೇವೆ!
– ತೀರ್ಥಹಳ್ಳಿ ಶ್ರೀ ನಾರಾಯಣ ಗುರು ವಿಚಾರ ವೇದಿಕೆ ಮಾದರಿ ಹೆಜ್ಜೆ
– ಶಾಲೆ ಮತ್ತು ಸಮಿತಿ ವತಿಯಿಂದ ವಿಶಾಲ್ ಕುಮಾರ್ ಅವರಿಗೆ ಸನ್ಮಾನ
NAMMUR EXPRESS NEWS
ತೀರ್ಥಹಳ್ಳಿ: ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಶ್ರಿ ನಾರಾಯಣ ಗುರು ವಿಚಾರ ವೇದಿಕೆಯ ಕಡೆಯಿಂದ ತಾಲೂಕಿನ ಅಗ್ರಹಾರ ಹೋಬಳಿಯ ಗುಡ್ಡೆಕೊಪ್ಪ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಸರ್ಕಾರಿ ಶಾಲೆಯ ಎಲ್.ಕೆ.ಜಿ ಹಾಗೂ ಯು.ಕೆ. ಜಿ ಮಕ್ಕಳಿಗೆ 15 ಕುರ್ಚಿ ಹಾಗೂ ಚಾರ್ಟ್ ಗಳನ್ನು ವಿತರಿಸಲಾಯಿತು. ಈ ಮೂಲಕ ಶ್ರಿ ನಾರಾಯಣ ಗುರು ವಿಚಾರ ವೇದಿಕೆ ಮಾದರಿ ಹೆಜ್ಜೆ ಇಟ್ಟಿದೆ. ಸಂಘಟನೆಯ ರಾಜ್ಯ ಅಧ್ಯಕ್ಷರಾದ ಸತ್ಯಜಿತ್ ಸುರತ್ಕಲ್ ಹಾಗೂ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಸುಂಟ್ರಳ್ಳಿ, ಶಿವಮೊಗ್ಗ ಜಿಲ್ಲಾ ಅಧ್ಯಕ್ಷರಾದ ಪ್ರವೀಣ್ ಇರೆ ಹೀರೆಗೊಡು ಹಾಗೂ ರಾಜ್ಯ ಕಾರ್ಯದರ್ಶಿಗಳಾದ ಮುಡುಬ ರಾಘವೇಂದ್ರ ಅವರ ಮಾರ್ಗದರ್ಶನದಲ್ಲಿ ವಿಶಾಲ್ ಕುಮಾರ್ ಅಧ್ಯಕ್ಷತೆಯಲ್ಲಿ ಜಿಲ್ಲಾ ಉಪಾಧ್ಯರು ಆದ ಲೋಕೇಶ್ ಟೆಂಕ ಬೈಲು,ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹೊದಲ ಶಿವು,
ಹೋಬಳಿ ಅಧ್ಯಕ್ಷರಾದ ಶ್ರೀಧರ್ ಹಾಗೂ ಹೇಮರಾಜ್,ತಾಲೂಕ ಪ್ರದಾನ ಕಾರ್ಯದರ್ಶಿಗಳಾದ ದಿನೇಶ್ ಯಡುರ್, ಖಜಾಂಚಿ ಅಕ್ಷಯ್ ಮಕ್ಕಿಕೊಪ್ಪ, ನಿರ್ದೇಶಕರುಗಳಾದ ರಮೇಶ್ ಹಣಗೆರೆ, ಪ್ರವೀಣ್ ಮಂಡಗದ್ದೆ, ಷಣ್ಮುಖ ಬಿಡೆ,, ಗಿರೀಶ್ ಶಿರಿಗಾರು, ನಾಗರಾಜ್ ಬೆಟ್ಟಮಕ್ಕಿ,ಗಣೇಶ್ ಕೌದಲ್ಲಿ, ನಾಗರಾಜ್ ಬಾಳೇಕೊಡ್ಲು ಸೇರಿದಂತೆ ಸಂಘಟನೆಯ ಅನೇಕರು ಭಾಗವಹಿಸಿದ್ದರು. ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಾಘವೇಂದ್ರ ಪವಾರ್, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ರಮೇಶ್ ,, ಮುಖ್ಯ ಶಿಕ್ಷಕರಾದ ಲಕ್ಷ್ಮಣ್ ಹಾಗೂ ಶ್ವೇತಾ ಹಾಗೂ ಎಲ್ಲಾ ಶಿಕ್ಷಕ ವೃಂದ, ಮಕ್ಕಳು ಹಾಗೂ ಅವರ ಪೋಷಕರುಗಳು ಸಂತೋಷವಾಗಿ ಪಾಲ್ಗೊಂಡರು. ಸಂಘಟನೆ ತೀರ್ಥಹಳ್ಳಿ ತಾಲೂಕಿನಲ್ಲಿ ಅನೇಕ ಸಾಮಾಜಿಕ ಸೇವೆಗಳನ್ನು ಮಾಡುತ್ತಿದ್ದು ಹಳ್ಳಿ ಹಳ್ಳಿಯಲ್ಲೂ ಸಂಘಟನೆ ಕೆಲಸ ಮಾಡುತ್ತಿದೆ.