ಬಾರಿಗೆ ನುಗ್ಗಿ ಹಣ, ಎಣ್ಣೆ ಕದ್ದ ಕಳ್ಳರು!
– ತೀರ್ಥಹಳ್ಳಿ ತಾಲೂಕಿನ ಸಿಕೆ ರಸ್ತೆಯಲ್ಲಿ ಘಟನೆ
– ತೀರ್ಥಹಳ್ಳಿ: ಆರಗ ಸಮೀಪ ತೋಟಕ್ಕೆ ಬೆಂಕಿ..!
– ಶಿವಮೊಗ್ಗ : ಅಪಘಾತಕ್ಕೆ ಮೆಡಿಕಲ್ ವಿದ್ಯಾರ್ಥಿನಿ ಬಲಿ!
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನ ಸಿಕೆ ರಸ್ತೆಯಲ್ಲಿರುವ ಮದ್ಯದ ಅಂಗಡಿಗೆ ನುಗ್ಗಿದ ಕಳ್ಳರು ಹಣ, ಮದ್ಯದ ಬಾಟಲ್ ಕದ್ದು ಪರಾರಿ ಆಗಿರುವ ಘಟನೆ ಗುರುವಾರ ಮಧ್ಯ ರಾತ್ರಿ ನಡೆದಿದೆ. ರಾತ್ರಿ ಕಳ್ಳರು ನುಗ್ಗಿ ಸುಮಾರು 40 ಸಾವಿರ ಕದ್ದಿದ್ದು, ಮದ್ಯದ ಬಾಟಲ್ ಕೂಡ ಕದ್ದಿದ್ದಾರೆ. ಸಿಸಿಟಿವಿ ಬಾಕ್ಸ್ ಕದ್ದಿದ್ದಾರೆ. ಇತ್ತೀಚಿಗೆ ಕಳ್ಳತನ ಹೆಚ್ಚಿದ್ದು, ಪೊಲೀಸ್ ಇಲಾಖೆ ಗಮನಿಸಬೇಕಿದೆ. ಪೊಲೀಸ್, ಶ್ವಾನ ದಳ ಪರಿಶೀಲನೆ ನಡೆಯುತ್ತಿದೆ.
ತೀರ್ಥಹಳ್ಳಿ: ಆರಗ ಸಮೀಪ ತೋಟಕ್ಕೆ ಬೆಂಕಿ..!
ತೀರ್ಥಹಳ್ಳಿ : ಬೇಸಿಗೆ ಹೆಚ್ಚುತ್ತಿರುವ ಬೆನ್ನಲ್ಲೇ ಬೆಂಕಿ ದುರಂತಗಳು ಹೆಚ್ಚು ತ್ತಿವೆ. ಇದೀಗ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ತೋಟದಲ್ಲಿ ಬೆಂಕಿ ಹತ್ತಿಕೊಂಡ ಘಟನೆ ಆರಗ ಗ್ರಾಮಪಂಚಾಯಿತಿ ವ್ಯಾಪ್ತಿಯ ಪಟಮಕ್ಕಿ ರಾಮಸ್ವಾಮಿ ಎಂಬುವರ ತೋಟದಲ್ಲಿ ನಡೆದಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹತ್ತಿಕೊಂಡಿದ್ದು ಇದರ ಪರಿಣಾಮ ತೋಟದಲ್ಲಿ ಅಳವಡಿಸಿದ್ದ ಡ್ರಿಪ್ ಪೈಪು ಮರದ ತುಂಡುಗಳು, ಪಿವಿಸಿ ಪೈಪ್ ಗಳು ಮತ್ತು ಅಡಿಕೆ ಸಸಿಗಳು ಬೆಂಕಿಯಿಂದ ಹಾನಿಗೊಳಗಾಗಿವೆ. ಸ್ಥಳಕ್ಕೆ ಅಗ್ನಿಶಾಮಕದಳದ ಸಿಬ್ಬಂದಿಗಳು ಭೇಟಿ ನೀಡಿದ್ದು ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ಶಿವಮೊಗ್ಗ : ಅಪಘಾತಕ್ಕೆ ಮೆಡಿಕಲ್ ವಿದ್ಯಾರ್ಥಿನಿ ಬಲಿ!
ಶಿವಮೊಗ್ಗ : ನಗರದ ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಶುಕ್ರವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೆಡಿಕಲ್ ಕಾಲೇಜಿನ ಪಿಡಿಯಾಟ್ರಿಕ್ ಪಿ.ಜಿ ವಿದ್ಯಾರ್ಥಿನಿಯೊಬ್ಬರು ದುರ್ಘಟನೆಯಲ್ಲಿ ಸಾವನ್ನಪ್ಪಿದ್ದು, ಇನ್ನೊಬ್ಬ ವಿದ್ಯಾರ್ಥಿನಿ ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಮೃತ ವಿದ್ಯಾರ್ಥಿನಿಯನ್ನು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬೋಳಾ ಗ್ರಾಮದ ನಿವಾಸಿ ಲಾವಣ್ಯ (25) ಎಂದು ಗುರುತಿಸಲಾಗಿದೆ. ಅವರು ಶಿವಮೊಗ್ಗ ಮೆಡಿಕಲ್ ಕಾಲೇಜಿನಲ್ಲಿ ಪಿಡಿಯಾಟ್ರಿಕ್ ವಿಭಾಗದಲ್ಲಿ ಮೊದಲ ವರ್ಷದ ಪಿಜಿ ವ್ಯಾಸಂಗ ಮಾಡುತ್ತಿದ್ದರು.
ಲಾವಣ್ಯ ಅವರು ಕಾರ್ಕಳ ಮೂಲದ ಸತೀಶ್ ಮತ್ತು ಸುನೀತಾ ದಂಪತಿಯ ಪುತ್ರಿಯಾಗಿದ್ದಾರೆ. ಲಾವಣ್ಯ ಹಾಗೂ ಅವರ ಸ್ನೇಹಿತೆ ಓವೇರಿಯಾ ಅವರು ಜುಪಿಟರ್ ಸ್ಕೂಟಿಯಲ್ಲಿ ಮೆಗ್ಗಾನ್ ಆಸ್ಪತ್ರೆಯಿಂದ ಹಾಸ್ಟೆಲ್ ಕಡೆಗೆ ತೆರಳುತ್ತಿದ್ದಾಗ, ಆಸ್ಪತ್ರೆ ಆವರಣದಲ್ಲಿ ಕಟ್ಟಡ ಕಾಮಗಾರಿಗೆ ನೀರು ಸರಬರಾಜು ಮಾಡುತ್ತಿದ್ದ ವಾಟರ್ ಟ್ಯಾಂಕರ್ ಜೊತೆ ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ.








