* ಬೋಟ್ ಕಂಪನಿಯ ಸ್ಮಾರ್ಟ್ ವಾಚ್ ಬಿಡುಗಡೆ.
* ಹಲವು ವೈಶಿಷ್ಟ್ಯಗಳನ್ನು ಒಳಗೊಂಡ ಇದರ ಬೆಲೆ 1.199
NAMMUR EXPRESS NEWS
ಜನರ ಸ್ಮಾರ್ಟ್ ವಾಚ್ ಗಳ ಮೇಲಿನ ಬೇಡಿಕೆಯನ್ನು ಮನಗಂಡ ಬೋಟ್ ಕಂಪನಿಯು ಇತ್ತೀಚೆಗೆ ಸ್ಟಾರ್ಮ್ ಇನ್ಫಿನಿಟಿ ಪ್ಲಸ್ ಎನ್ನುವ ಹೆಸರಿನ ಸ್ಮಾರ್ಟ್ ವಾಚ್ ಅನ್ನು ಬಿಡುಗಡೆಗೊಳಿಸಿದೆ. ಆಕರ್ಷಕ ಸುತ್ತಳತೆಯೊಂದಿಗೆ, 1.96 ಇಂಚಿನ ಆಯತಾಕಾರದ ಡಿಸ್ಪ್ಲೆ ಮೂಲಕ ಜನರ ಗಮನ ಸೆಳೆಯುತ್ತಿದೆ. 240×296 ಫಿಕ್ಸೆಲ್ ಗಳ ರೆಸಲ್ಯೂಷನ್ ಮತ್ತು 480 ನಿಟ್ಸ್ ಬ್ರೈಟ್ ನೆಸ್ ಅನ್ನು ಒಳಗೊಂಡಿದೆ.
ಈ ಸ್ಮಾರ್ಟ್ ವಾಚ್ ಉತ್ತಮ ಗುಣಮಟ್ಟದ ಬ್ಯಾಟರಿ ಸೌಲಭ್ಯ ಹೊಂದಿದ್ದು, ಅಧಿಕ ಪ್ರಮಾಣದಲ್ಲಿ ಬಳಸಿದಾಗ ಇಪ್ಪತ್ತು ದಿನಗಳು ಮತ್ತು ಕಡಿಮೆ ಪ್ರಮಾಣದಲ್ಲಿ ಬಳಕೆಗೊಂಡಾಗ ಮೂವತ್ತು ದಿನಗಳ ವರೆಗೂ ಬಾಳಿಕೆ ಬರುತ್ತದೆ. 680ಎಂ.ಎ.ಎಚ್ ಬ್ಯಾಟರಿ ಹೊಂದಿದ್ದು, ಒಂದು ಗಂಟೆಯಲ್ಲಿ ಸಂಪೂರ್ಣವಾಗಿ ಚಾರ್ಜ್ ಆಗುತ್ತದೆ. ಅಲ್ಲದೆ ನಾಲ್ಕು ನಿಮಿಷಗಳ ಚಾರ್ಜ್ ನಿಂದ ನಾಲ್ಕು ದಿನಗಳ ಕಾಲ ಬಳಸಬಹುದಾಗಿದೆ ಎಂದು ಬೋಟ್ ಕಂಪನಿ ತಿಳಿಸಿದೆ.
ಜನರ ಆರೋಗ್ಯದ ದೃಷ್ಟಿಯಿಂದಲೂ ಈ ಸ್ಮಾರ್ಟ್ ವಾಚ್ ಹಲವಾರು ವೈಶಿಷ್ಟ್ಯಗಳಿಂದ ಕೂಡಿದೆ. ಹೃದಯದ ಮಿಡಿತವನ್ನು ಮಾನಿಟರ್ ಮಾಡುವುದು, ರಕ್ತದಲ್ಲಿನ ಆಮ್ಲಜನಕದ ಪ್ರಮಾಣದ ಟ್ರ್ಯಾಕರ್, ನಿದ್ರೆಯನ್ನು ಮಾನಿಟರ್ ಮಾಡುವುದು, ರಕ್ತದೊತ್ತಡವನ್ನು ಮಾನಿಟರ್ ಮಾಡುವುದು, ಋತು ಚಕ್ರದ ಟ್ರ್ಯಾಕರ್, ನೂರಕ್ಕೂ ಹೆಚ್ಚು ಕ್ರೀಡಾ ವಿಧಾನಗಳು, ಉಸಿರಾಟಕ್ಕೆ ಅನುಕೂಲವಾಗುವಂತಹ ವ್ಯಾಯಾಮಗಳ ಮಾರ್ಗದರ್ಶಿ, ದಿನದ ಚಟುವಟಿಕೆಯ ಟ್ರ್ಯಾಕರ್, ನಡಿಗೆಯ ಲೆಕ್ಕ, ದೂರದ ಟ್ರ್ಯಾಕರ್, ದೀರ್ಘ ಕಾಲದವರೆಗೆ ಚಲಿಸದೇ ಇದ್ದಾಗ ಎಚ್ಚರಿಸುವುದು, ನೀರನ್ನು ಕುಡಿಯಲು ನೆನಪಿಸುವುದು, ಎಷ್ಟು ಕ್ಯಾಲೊರಿ ಕರಗಿಸಲಾಗಿದೆ ಎಂಬ ಲೆಕ್ಕ ಪ್ರತಿಯೊಂದರ ಮಾಹಿತಿಯನ್ನು ನೀಡುವ ವಿಶೇಷತೆಗಳನ್ನು ಒಳಗೊಂಡಿದೆ.
ಡಯಲ್ ಪಟ್ಟಿಯಲ್ಲಿ ಆಗಾಗ ಕರೆ ಮಾಡುವ ಹತ್ತು ಜನರ ಸಂಪರ್ಕ ಸಂಖ್ಯೆಯನ್ನು ಉಳಿಸಲು ಅವಕಾಶ ಕಲ್ಪಿಸಿದೆ. ಧ್ವನಿ ಆಜ್ಞೆಯ ಮೂಲಕ ವಾಚ್ ಅನ್ನು ನಿಯಂತ್ರಿಸಬಹುದಾಗಿದೆ. ಇದು ಧೂಳು ಮತ್ತು ನೀರಿನಿಂದ ಸಂರಕ್ಷಿಸಲ್ಪಟ್ಟಿದೆ. ಅಲ್ಲದೆ ಐಪಿ68 ರೇಟಿಂಗ್ ಸಹ ಪಡೆದುಕೊಂಡಿದೆ.
ಸ್ಟಾರ್ಮ್ ಇನ್ಫಿನಿಟಿ ಪ್ಲಸ್ ಸ್ಮಾರ್ಟ್ ವಾಚ್ ಆಕ್ಟಿವ್ ಬ್ಲಾಕ್, ಚೆರ್ರಿ ಬ್ಲಾಸಮ್, ಡೀಪ್ ಬ್ಲೂ, ಕೂಲ್ ಗ್ರೇ ನಾಲ್ಕು ಬಣ್ಣಗಳಲ್ಲಿ ಲಭ್ಯವಿದ್ದು, ನೈಲಾನ್ ಪಟ್ಟಿಯನ್ನು ಒಳಗೊಂಡ ಸ್ಪೋರ್ಟ್ಸ್ ಬ್ಲಾಕ್ ಮತ್ತು ಸ್ಪೋರ್ಟ್ಸ್ ವೈಟ್ ಸ್ಮಾರ್ಟ್ ವಾಚ್ ಗಳ ಬೆಲೆ 1.399. ಜನರು ಇದನ್ನು ಬೋಟ್ ಇಂಡಿಯಾ ಇ-ಸ್ಟೋರ್ ಮತ್ತು ಫ್ಲಿಪ್ ಕಾರ್ಟ್ ನಲ್ಲಿ ಖರೀದಿಸಬಹುದಾಗಿದೆ ಎಂದು ಬೋಟ್ ಕಂಪನಿ ತಿಳಿಸಿದೆ.







