Categories
ಟೆಕ್ ಮಾಹಿತಿ ಸುದ್ದಿ

ಬಂದಿದೆ ಸ್ಯಾಮ್ ಸಂಗ್ ಎಸ್ 25 ಎಡ್ಜ್..!

ಬಂದಿದೆ ಸ್ಯಾಮ್ ಸಂಗ್ ಎಸ್ 25 ಎಡ್ಜ್..!
– ಭಾರತದ ಮೊಬೈಲ್ ಪ್ರಿಯರಿಗೆ ಗುಡ್ ನ್ಯೂಸ್
– ಹೇಗಿದೆ ಹೊಸ ಮೊಬೈಲ್… ವಿಶೇಷತೆ ಏನು…?

ಸ್ಯಾಮ್ ಸಂಗ್ ಎಸ್ 25 ಎಡ್ಜ್ ಮೊಬೈಲ್ ಫೋನ್ ಭಾರತದಲ್ಲಿ ಬಿಡುಗಡೆಗೊಂಡಿದೆ. 163ಗ್ರಾಂ ತೂಕವಿರುವ ಈ ಮೊಬೈಲ್ ಹಲವಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ದಕ್ಷಿಣ ಕೋರಿಯಾದ ಪ್ರಸಿದ್ಧ ಕಂಪನಿಯು ಇದನ್ನು ಬಿಡುಗಡೆಗೊಳಿಸುವ ಮೂಲಕ ಗ್ಯಾಲಕ್ಸಿ ಎಸ್ ಸರಣಿಗೆ ಸೇರಿಕೊಂಡಿರುವ ಮತ್ತೊಂದು ಹೊಸ ವರ್ಗದ ಸ್ಲಿಮ್ ಸ್ಮಾರ್ಟ್ ಮೊಬೈಲ್ ನ್ನು ತಂದಂತಾಗಿದೆ.
ಗ್ಯಾಲಕ್ಸಿ ಎಸ್ 25 ಎಡ್ಜ್ ನ ತೆಳು ಮತ್ತು ಬಾಳಿಕೆ ಬರುವ ರಚನೆಯಿಂದಾಗಿ ಸ್ಯಾಮ್‌ಸಂಗ್‌ ಕಂಪನಿ ಈ ಮೊಬೈಲ್ ಅನ್ನು ಇಂಜಿನಿಯರಿಂಗ್ ಅಚ್ಚರಿ ಎಂದೇ ಕರೆಯಲು ಪ್ರಾರಂಭಿಸಿದೆ. ಈ ಹಿಂದಿನ ಮೊಬೈಲ್ ಫೋನಾದ ಗ್ಯಾಲಕ್ಸಿ ಎಸ್ 25 ಅಲ್ಟ್ರಾ 8.2 ಎಂಎಂ ದಪ್ಪವಿದ್ದು, 218ಗ್ರಾಂ ತೂಕವನ್ನು ಹೊಂದಿತ್ತು. ಆದರೆ ಗ್ಯಾಲಕ್ಸಿ ಎಸ್ 25 ಎಡ್ಜ್ 5.8 ಎಂಎಂ ನಷ್ಟು ತೆಳುವಾಗಿದ್ದು, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ಸೆರಾಮಿಕ್ 2 ರೊಂದಿಗೆ ಇಂಪ್ಯಾಕ್ಟ್ ರೆಸಿಸ್ಟೆನ್ಸ್ ಮತ್ತು ಸ್ಪಷ್ಟ ದೃಶ್ಯಗಳನ್ನು ಒಳಗೊಂಡಿದೆ.
6.7 ಇಂಚಿನ ಡೈನಾಮಿಕ್ ಅಮೋಲೆಡ್, 2 ಎಕ್ಸ್ ಕ್ಯೂಹೆಚ್ಡಿ + ಡಿಸ್ ಪ್ಲೇ, 120 ಹೆರ್ಟ್ಸ್ ರಿಫ್ರೆಶ್ ಮೆಂಟ್ ಗಳಿಂದ ಕೂಡಿದೆ. ಸ್ಯ್ನಾಪ್ ಡ್ರ್ಯಾಗನ್ 8 ಎಲೈಟ್ ನಿಂದ ನಿಯಂತ್ರಿಸಲ್ಪಟ್ಟಿದ್ದು, 12 ಜಿಬಿ ಹೊಂದಿದೆ. ನೌ ಬ್ರೀಫ್, ನೌ ಬಾರ್, ಜೆಮಿನಿ ಲೈವ್, ಎಐ ಎಡಿಟಿಂಗ್ ಉಪಕರಣಗಳನ್ನೂ ಅಳವಡಿಸಲಾಗಿದೆ.
ಟೈಟಾನಿಯಂ ಸಿಲ್ವರ್, ಟೈಟಾನಿಯಂ ಜೆಟ್ ಬ್ಲ್ಯಾಕ್ ಮತ್ತು ಟೈಟಾನಿಯಂ ಐಸಿಬ್ಲು ಎಂಬ ಮೂರು ಬಣ್ಣಗಳಲ್ಲಿ ಮಾತ್ರ ಈ ಮೊಬೈಲ್ ಫೋನ್ ಲಭ್ಯವಿದ್ದು, 12ಜಿಬಿ + 256 ಜಿಬಿ ಮತ್ತು 12ಜಿಬಿ + 512 ಜಿಬಿ ಎಂಬ ಎರಡು ಬಗೆಯ ಸ್ಟೋರೇಜ್ ಗಳಲ್ಲಿ ದೊರೆಯುತ್ತದೆ ಎನ್ನಲಾಗಿದೆ‌. 200ಎಂಪಿ ಮುಖ್ಯ ಕ್ಯಾಮೆರಾ, 12 ಮೆಗಾಫಿಕ್ಸೆಲ್ ಅಲ್ಟ್ರಾವೈಡ್ ಕ್ಯಾಮೆರಾ ಮತ್ರು 12 ಎಂಪಿ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಆದರೆ ಮೊಬೈಲ್ ಪ್ರಿಯರು ಇದನ್ನು ಖರೀದಿಸಲು ಕಂಪನಿಯು ಬೆಲೆಯನ್ನು ಇನ್ನೂ ಬಹಿರಂಗಪಡಿಸಿಲ್ಲ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.