Categories
ಟೆಕ್ ಡೆಲ್ಲಿ

ಐಟಿ ಕ್ಷೇತ್ರದಲ್ಲಿ ಉದ್ಯೋಗ ಕಡಿತ ಶುರು!

ಐಟಿ ಕ್ಷೇತ್ರದಲ್ಲಿ ಉದ್ಯೋಗ ಕಡಿತ ಶುರು!
– ಟಾಟಾ ಕನ್ಸಲ್ಟೆನ್ಸಿ ಸರ್ವಿಸ್ ನಿಂದ 12000 ಉದ್ಯೋಗಿಗಳ ವಜಾ
– ಎಐ ಹೊಡೆತಕ್ಕೆ ಬಿದ್ದ ಐಟಿ ಕಂಪನಿಗಳು!

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ನವದೆಹಲಿ: ದೇಶದಲ್ಲಿ ಐ ಟಿ ಕ್ಷೇತ್ರದಲ್ಲಿ ಭಾರೀ ಉದ್ಯೋಗ ಕಡಿತ ಶುರುವಾಗಿದೆ. ದೇಶದ ಹಾಗೂ ವಿದೇಶದ ಪ್ರಮುಖ ಕಂಪನಿಗಳು ಉದ್ಯೋಗ ಕಡಿತಕ್ಕೆ ಮುಂದಾಗಿವೆ.
ಈ ನಡುವೆ ದೇಶದ ಪ್ರತಿಷ್ಠಿತ ಐಟಿ ಸೇವಾ ಸಂಸ್ಥೆಯಾದ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ತ್ವರಿತ ಬದಲಾವಣೆಯ ನಡುವೆ ಏಪ್ರಿಲ್ 2025 ರಿಂದ ಮಾರ್ಚ್ 2026ರ ತನಕ ತನ್ನ ಉದ್ಯೋಗಿಗಳಲ್ಲಿ ಎರಡು ಪ್ರತಿಶತದಷ್ಟು ಅಂದರೆ ಸುಮಾರು ಹನ್ನೆರಡು ಸಾವಿರಕ್ಕೂ ಹೆಚ್ಚು ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸುವ ನಿರ್ಧಾರವನ್ನು ಕೈಗೊಂಡಿದೆ. ಇಂತಹ ನಿರ್ಧಾರಗಳು ವಿವಿಧ ಕ್ಷೇತ್ರಗಳಲ್ಲಿನ ಮತ್ತು ಪ್ರದೇಶಗಳಲ್ಲಿನ ಉದ್ಯೋಗಿಗಳ ಮೇಲೆ ಜಾಗತಿಕವಾಗಿ ಪರಿಣಾಮ ಬೀರಲಿದೆ. ಆದರೆ ವಿಕಾಸನಗೊಳ್ಳುತ್ತಿರುವ ಕೌಶಲ್ಯಕ್ಕೆ ಸಂಬಂಧಿಸಿದಂತ ಬೇಡಿಕೆಗಳು ಮತ್ತು ಆಂತರಿಕ ಮರುನೇಮಕ ಸವಾಲುಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಂತಹ ನಿರ್ಧಾರಗಳನ್ನು ಕೈಗೊಳ್ಳುವುದು ಅನಿವಾರ್ಯ ಎಂದು ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ನ ಸಿಇಓ ಆಗಿರುವ ಕೆ. ಕೃತಿವಾಸನ್ ಅವರು ತಿಳಿಸಿದ್ದಾರೆ.
ಕಾಲ ಬದಲಾದಂತೆ ಕೆಲಸದ ವಿಧಾನವನ್ನು ಬದಲಾಯಿಸಿಕೊಳ್ಳಬೇಕಾಗುತ್ತದೆ, ಹೀಗಾಗಿ ನಾವು ಹೊಸ ತಂತ್ರಜ್ಞಾನ ಅದರಲ್ಲೂ ವಿಶೇಷವಾಗಿ ಎಐ ಅನ್ನು ಅಳವಡಿಸಿಕೊಳ್ಳುವ ಮೂಲಕ ಕಾರ್ಯಾಚರಣೆಯ ವಿಧಾನದಲ್ಲಿ ಬದಲಾವಣೆಗಳನ್ನು ತರಲು ನಿರ್ಧರಿಸಿದ್ದೇವೆ.‌ ನಾವು ಭವಿಷ್ಯಕ್ಕೆ ಸದಾ ಸಿದ್ಧರಾಗಿರಬೇಕು ಮತ್ತು ಅದನ್ನು ಕಾರ್ಯರೂಪಕ್ಕೆ ತರಲು ಪಾದರಸದಂತೆ ಚುರುಕಾಗಿರಬೇಕು ಹೀಗಾಗಿ ಈ ಬಗೆಯ ನಿರ್ಧಾರಗಳನ್ನು ಕೈಗೊಳ್ಳುವುದು ತೀವ್ರ ಅಗತ್ಯ. ಈ ರೀತಿಯ ತೀರ್ಮಾನಗಳು ಸುಲಭದ್ದಲ್ಲ. ಆದರೆ ಒಬ್ಬ ಸಿಇಓ ಆಗಿ ನಾನು ತೆಗೆದುಕೊಳ್ಳಲೇಬೇಕಾದ ಕಠಿಣ ನಿರ್ಣಯ ಇದಾಗಿದೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಅಮೇರಿಕಾ ಸೇರಿ ಅನೇಕ ರಾಷ್ಟ್ರಗಳು ಎ. ಐ ಅಳವಡಿಕೆ ಮುಂದಾಗಿರುವುದು ಭಾರತದ ಐಟಿ ಕ್ಷೇತ್ರಕ್ಕೆ ಬಹು ದೊಡ್ಡ ಪೆಟ್ಟು ನೀಡಲಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.