ಮಾರುತಿಯ ಅತಿ ದುಬಾರಿ ಕಾರು ಬಂತು ನೋಡಿ!
– 3 ಮಾದರಿಯ ಇನ್ ವಿಕ್ಟೊ ಕಾರು ಮಾರುಕಟ್ಟೆಗೆ
– ₹25-28 ಲಕ್ಷ ದರ: ಮಾರುತಿಯಲ್ಲಿ ಹೈಟೆಕ್ ಕಾರು
NAMMUR EXPRESS NEWS
ನವ ದೆಹಲಿ: ದೇಶದ ಮುಂಚೂಣಿ ಕಾರು ಉತ್ಪಾದನಾ ಕಂಪನಿಯಾದ ಮಾರುತಿ ಸುಜುಕಿ ಇದೇ ಮೊದಲ ಬಾರಿ 20 ಲಕ್ಷ ರೂ ಗಿಂತ ಹೆಚ್ಚಿನ ಬೆಲೆಯ ಕಾರು ಪರಿಚಯಿಸಿದೆ.
ಇನ್ ವಿಕ್ಟೊ ಎಂಬ ಹೊಸ ಕಾರನ್ನು ಅದು ಮೂರು ಮಾದರಿಗಳಲ್ಲಿ ಬಿಡುಗಡೆ ಮಾಡಿದ್ದು, ಆರಂಭಿಕ 24.8 ಲಕ್ಷ ರೂ ನಿಂದ ( ಎಕ್ಸ್ ಶೋರೂಮ್ ) ಹಿಡಿದು ಗರಿಷ್ಠ 28.4 ಲಕ್ಷ ರೂ ವರೆಗೆ ದರ ನಿಗದಿ ಮಾಡಲಾಗಿದೆ. ಇದು ಮಾರುತಿಯ ಅತಿ ದುಬಾರಿ ಕಾರು ಎನಿಸಿಕೊಂಡಿದೆ. ಇನ್ ವಿಕ್ಟೊ ಬಿಡುಗಡೆ ಮೂಲಕ ಮಾರುತಿ ಇದೇ ಮೊದಲ ಬಾರಿಗೆ 20 ಲಕ್ಷ ರೂ ಗಿಂತ ಮೇಲ್ಪಟ್ಟ ದರದ ಪ್ರೀಮಿಯಂ ವಲಯವನ್ನು ಪ್ರವೇಶಿಸಿದಂತಾಗಿದೆ. ಇದು ಟೊಯೋಟಾ ಇನ್ನೋವಾ ಹೈಕ್ರಾಸ್ ಮಲ್ಟಿಪರ್ಪಸ್ ವೆಹಿಕಲ್ ನ ರೂಪಾಂತರವಾಗಿದೆ. ಬೆಂಗಳೂರು ಮೈಸೂರು ರಸ್ತೆಯ ಟೊಯೋಟೊ ಕಾರ್ಖಾನೆಯಲ್ಲಿ ಇದರ ಉತ್ಪಾದನೆ ಆಗಲಿದೆ. ಇನ್ ವಿಕ್ಟೊ ಝೆಟಾ ಪ್ಲಸ್( ಏಳು ಸೀಟು ), ಝೆಟಾ ಪ್ಲಸ್ (8 ಸೀಟು ) ಮತ್ತು ಅಲ್ಫಾ (7 ಸೀಟು ) ಎಂಬ ಮೂರು ಮಾದರಿ ಹೊಂದಿದ್ದು ನಾಲ್ಕು ಬಣ್ಣಗಳಲ್ಲಿ ಲಭ್ಯವಿದೆ. ಈ ಕಾರುಗಳು ನೆಕ್ಸಾ ಪ್ರೀಮಿಯಂ ರಿಟೇಲ್ ನೆಟ್ವರ್ಕ್ ನಲ್ಲಿ ಲಭ್ಯವಿರಲಿದೆ.
ದೇಶದ ಅತೀ ಹೆಚ್ಚು ಕಾರು ಮಾರಾಟ ಮಾಡುವ ಕಂಪನಿ!
ಭಾರತದಲ್ಲಿ ಮಾರುತಿ ಸುಜಕಿ ಹೆಚ್ಚು ಕಾರು ಮಾರಾಟ ಮಾಡುವ ಬ್ರಾಂಡ್. ಸಣ್ಣ ಕಾರಿನಿಂದ ಹಿಡಿದು ದೊಡ್ಡ ಕಾರು ಲಭ್ಯ. ಈಗಾಗಲೇ ಗ್ರ್ಯಾಂಡ್ ವಿತರಾ ಮಾರುಕಟ್ಟೆಯಲ್ಲಿದೆ
ಈಗ ಮತ್ತಷ್ಟು ಹೈಟೆಕ್ನಲಾಜಿ, ಗುಣಮಟ್ಟ, ವೇಗ, ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಕಾರು ಮಾರುಕಟ್ಟೆಗೆ ಬರಲು ಸಜ್ಜುಗೊಂಡಿದೆ. ಲಕ್ಷಾಂತರ ಗ್ರಾಹಕರು ಕೂಡ ಕಾದಿದ್ದಾರೆ.
ಇದನ್ನೂ ಓದಿ : ಯಾವ ಊರಲ್ಲಿ ಜು.9ಕ್ಕೆ ಅಡಿಕೆ ದರ ಎಷ್ಟು ?
HOW TO APPLY : NEET-UG COUNSELLING 2023