- ವಾಟ್ಸಪ್ ಬಳಕೆದಾರರಿಗೆ ಸಿಹಿ ಸುದ್ದಿ: ಇನ್ನು ವಿಡಿಯೋ ಕಳುಹಿಸೋದು ಸುಲಭ
NAMMUR EXPRESS NEWS
ವಾಟ್ಸ್ಅಪ್ ಬಹುಶಃ ಅತ್ಯಂತ ಹೆಚ್ಚು ಬಳಕೆಯಲ್ಲಿರುವ ಮತ್ತು ಅತಿ ಸುಲಭವಾಗಿ ಪದೇ ಪದೇ ಫೈಲ್ಗಳನ್ನು ಶೇರ್ ಮಾಡಬಹುದಾದ ಜನಪ್ರಿಯ ತ್ವರಿತ ಮೆಸ್ಸೇಜಿಂಗ್ ಆಪ್. ಆದರೆ ನಿರ್ದಿಷ್ಟ ಗಾತ್ರಕ್ಕಿಂತ ಹೆಚ್ಚಿನ ಫೈಲ್ ಕಳುಹಿಸಲು ಆಗುತ್ತಿರಲಿಲ್ಲ. ಈಗ ಈ ತೊಂದರೆ ಹೆಚ್ಚು ಕಡಿಮೆ ಬಗೆಹರಿದಂತಿದೆ. ಕಂಪನಿ ಅಂತಿಮವಾಗಿ ಈ ವ್ಯಾಪಕ ಸಮಸ್ಯೆಯನ್ನು ಪರಿಹಿಸಿದಂತೆ ತೋರುತ್ತದೆ. ಇತ್ತೀಚಿನ ವರದಿಯ ಪ್ರಕಾರ, ವಾಟ್ಸ್ಅಪ್ 2 ಜಿಬಿ ಗಾತ್ರದ ಫೈಲ್ಗಳನ್ನು ಶೇರ್ ಮಾಡುವ ಸಾಮರ್ಥ್ಯವನ್ನು ಪರೀಕ್ಷಿಸುತ್ತಿದೆ.
ವಾಟ್ಸ್ಅಪ್ ಈಗಾಗಲೇ 2 ಜಿಬಿ ಗಾತ್ರದ ಫೈಲ್ಗಳನ್ನು ಶೇರ್ ಮಾಡುವ ಸಾಮರ್ಥ್ಯವನ್ನು ಅರ್ಜಂಟೈನಾದ ಹಲವಾರು ಆಂಡ್ರಾಯ್ಡ್ ಮತ್ತು ಐಓಸ್ ಬಳಕೆದಾರಿಂದ ಪರೀಕ್ಷಿಸಿದೆ. ಸದ್ಯ ವಾಟ್ಸ್ಅಪ್ 100 MB ಗಾತ್ರದ ಫೈಲ್ಗಳನ್ನು ಮಾತ್ರ ಫ್ರೆಂಡ್ಸ್ ಗಳಿಗೆ ಶೇರ್ ಮಾಡಲು ಅನುಮತಿಸುತ್ತದೆ. ಆದರೆ ಈ ರೀತಿಯ ಸಮಸ್ಯೆಗಳು ಟೆಲಿಗ್ರಾಂ ಬಳಕೆದಾರಲ್ಲಿ ಕಾಣಿಸುವುದಿಲ್ಲ. ಅಲ್ಲಿ ದೊಡ್ಡ ಗಾತ್ರದ ಫೈಲ್ಗಳನ್ನು ಸುಲಭವಾಗಿ ಶೇರ್ ಮಾಡಬಹುದಾಗಿದೆ. ಟೆಲಿಗ್ರಾಂ ಮತ್ತು ವಾಟ್ಸಪ್ ಅತ್ಯಂತ ಪೈಪೋಟಿಯಿರುವ ತ್ವರಿತ ಮೆಸ್ಸೇಜಿಂಗ್ ಆಪ್ಗಳು, ಟೆಲಿಗ್ರಾಂ 2 ಜಿಬಿಗಳವರೆಗೆ ಮಲ್ಟಿಮೀಡಿಯಾ ಫೈಲ್ಗಳನ್ನು ಕಳುಹಿಸಲು ಅವಕಾಶ ಒದಗಿಸಿದೆ. ಒಂದು ವೇಳೆ ವ್ಯಾಟ್ಸ್ಅಪ್ ತನ್ನ ಸಾಮರ್ಥ್ಯ ಹೆಚ್ಚಿಸಿಕೊಳ್ಳದಿದ್ದರೆ, ಟಿಲಿಗ್ರಾಂನ ಪೈಪೋಟಿಯಲ್ಲಿ ದೂರವಿರಬೇಕಾಗಬಹುದು.
ಆದರೆ ವಾಟ್ಸ್ಅಪ್ ಮೇಲೆ ಹೇಳಿದಂತೆ 2 ಜಿಬಿ ಗಾತ್ರದ ಫೈಲ್ಗಳನ್ನು ಶೇರ್ ಮಾಡಬಹುದಾದ ಸಾಮರ್ಥ್ಯದ ಫೀಚರ್ ಅನ್ನು ಅದಾಗಲೇ ಪರೀಕ್ಷಿಸಿದೆ. ಆದರೆ ತನ್ನ ಎಲ್ಲಾ ಆಂಡ್ರಾಯ್ಡ್ ಮತ್ತು ಐಓಎಸ್ ಬಳಕೆದಾರರಿಗೆ ಈ ಅವಕಾಶವನ್ನು ಎಂದು ಬಿಡುಗಡೆಗೊಳಿಸುತ್ತದೆ ಎಂಬುದು ತಿಳಿದಿಲ್ಲ. ವಾಟ್ಸ್ಅಪ್ ಇತ್ತೀಚಿಗೆ ಐಓಎಸ್ ನ ಬೀಟಾ ಟೆಸ್ಟರ ಗಳಿಗೆ ಹೆಚ್ಚು ಪ್ರಚೋದಿತ ಪ್ರತ್ಯುತ್ತರ ನೀಡುವ ವೈಶಿಷ್ಟ್ಯ ಪರಿಚಯಿಸಿತ್ತು. ಒಂದು ನಿಶ್ಚಿತ ಮೆಸ್ಸೇಜ್ಗಳಿಗೆ ಲೈಕ್, ಲವ್ಹಾರ್ಟ್, ಲಾಫ್, ಸಪ್ರೈಸ್, ಸ್ಯಾಡ್ ಮತ್ತು ಥ್ಯಾಂಕ್ಸ್ 6 ಇಮೋಜಿಗಳನ್ನು ಉಪಯೋಗಿಸಿ ರಿಯಾಕ್ಟ್ ಮಾಡುವ ಫೀಚರ್ ಅದಾಗಿತ್ತು.