ಪ್ರತಿಷ್ಠಿತ ಬ್ಯಾಂಕಿಗೆ ಉಡುಪಿಯ ವಿನಯ ಮುರಳಿಧರ ತೋನ್ಸೆ ಸಾರಥಿ!
– ಯಸ್ ಬ್ಯಾಂಕ್ ನಿರ್ದೇಶಕ, ಸಿಇಒ ಆಗಿ ಕರಾವಳಿಯ ವಿನಯ್
– ಉಡುಪಿ ಶಾಸಕರಾದ ಯಶ್ ಪಾಲ್ ಸುವರ್ಣ ಸೇರಿ ಅನೇಕರಿಂದ ಅಭಿನಂದನೆ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಉಡುಪಿ: ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅಪಾರ ಅನುಭವ ಮತ್ತು ಸೇವೆಯನ್ನು ಗುರುತಿಸಿ ದೇಶದ ಪ್ರತಿಷ್ಠಿತ ಬ್ಯಾಂಕ್ ಆದ ಎಸ್(yes) ಬ್ಯಾಂಕ್ ನ ನಿರ್ದೇಶಕರು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಉಡುಪಿ ಮೂಲದ ಶ್ರೀವಿನಯ್ ಮುರಳೀಧರ ತೋನ್ಸೆ ಅವರು ನೇಮಕಗೊಂಡಿದ್ದಾರೆ.
ಕರಾವಳಿ ಬ್ಯಾಂಕುಗಳ ಹುಟ್ಟೂರು, ಅಲ್ಲದೆ ಅನೇಕ ಬ್ಯಾಂಕ್ ಹಾಗೂ ದೊಡ್ಡ ಕಾರ್ಪೋರೇಟ್ ಕಂಪನಿಗಳಿಗೆ ಕರಾವಳಿಯ ಪ್ರಮುಖರು ಮುಖ್ಯಸ್ಥರಾಗಿದ್ದಾರೆ. ಇದೀಗ ಯಸ್ ಬ್ಯಾಂಕಿಗೆ ಉಡುಪಿಯ ವಿನಯ ಮುರಳಿಧರ ತೋನ್ಸೆ ಸಾರಥಿ ಆಗಿದ್ದಾರೆ.
ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಯಶ್ ಪಾಲ್ ಸುವರ್ಣ ಅವರು ಮುರಳಿಧರ ತೋನ್ಸೆ ಅವರಿಗೆ ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದು, “ನಿಮ್ಮ ನೇತೃತ್ವದಲ್ಲಿ ಎಸ್ ಬ್ಯಾಂಕ್ ಮಾದರಿ ಬ್ಯಾಂಕ್ ಆಗಿ ಮೂಡಿಬರಲಿ” ಎಂದು ಶುಭ ಹಾರೈಸಿದ್ದಾರೆ. ಅನೇಕ ಗಣ್ಯರು ಶುಭ ಹಾರೈಸಿದ್ದಾರೆ.







